ಬಡವರ, ಹಿರಿಯ ನಾಗರಿಕರ ಸೇವೆ ಮಾಡುವುದು ಪುಣ್ಯದ ಕೆಲಸ: ರಘುವೀರ್ ಎಸ್.ಗೌಡ

3 years ago

ಬೆಂಗಳೂರು: ಬಡವರ,ಹಿರಿಯ ನಾಗರಿಕರ ಸೇವೆ ಮಾಡುವುದು ಏಳು ಜನ್ಮದ ಪುಣ್ಯದ ಕೆಲಸ ಎಂದು ರಾಜಾಜಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಘುವೀರ್ ಗೌಡ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ನೇತಾಜಿ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ 2000 ಭಕ್ತರು, 30 ಬಸ್ ಗಳಲ್ಲಿ ಮಲೆ ಮಹದೇಶ್ವರ ಬೆಟ್ಟ, ನಿಮಿಷಾಂಬದೇವಿ ದೇವಸ್ಥಾನ, ಶ್ರೀರಂಗಪಟ್ಟಣ ಶ್ರೀ ರಂಗನಾಥ ದೇವಸ್ಥಾನ, ಮೈಸೂರು ಚಾಮುಂಡಿಬೆಟ್ಟ, ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನ ಉಚಿತ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದ  ಅವರು,  ತಂದೆ,ತಾಯಿ ಮತ್ತು ಗುರುಹಿರಿಯರ ಆಶೀರ್ವಾದದ ಫಲದಿಂದ ಕಳೆದ 20 ವರ್ಷಗಳಿಂದ ಜನಸೇವೆಯನ್ನು ನಿರಂತರ ಮಾಡಿಕೊಂಡು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಮನೆಯ ಮಗನಾಗಿ ಅವರ ನೋವು, ನಲಿವುಗಳಿಗೆ ಸದಾ ಸ್ಪಂದಿಸುತ್ತಾ ಬಂದಿದ್ದೇನೆ ಎಂದರು.

ಈಗಾಗಲೇ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೀರೆ ವಿತರಣೆ ಮತ್ತು ದಿನಸಿ ಕಿಟ್ ವಿತರಣೆ ಮತ್ತು ನೂರಾರು ಆಟೋ ಚಾಲಕರಿಗೆ ಉಚಿತವಾಗಿ ಆಟೋ ಟೈರ್ ಗಳು, ಇನ್ಯೂರೆನ್ಸ್ ಬಾಂಡ್ ಗಳನ್ನು ವಿತರಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ವೆಚ್ಚದ ಸಹಾಯಹಸ್ತ ನೀಡಲಾಗಿದೆ ಎಂದರು.

ಸಮಾಜ ನಮಗೆ ಏನು ಕೊಟ್ಟಿದೆ ಎನ್ನುದಕ್ಕಿಂತ, ಸಮಾಜಕ್ಕೆ ನಾವು ಏನು ಕೊಡುಗೆ ನೀಡಿದ್ದೇವೆ ಏನ್ನುವುದು ಮುಖ್ಯ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಬಡಾವಣೆಗೆ ದೇವರುಗಳ ಹೆಸರುಗಳನ್ನು ಇಡಲಾಗಿದೆ ಮತ್ತು ಅತಿ ಹೆಚ್ಚು ದೇವಾಲಯಗಳು ಇಲ್ಲಿವೆ ಎಂದರು.

ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರು ದೇವಾಲಯಕ್ಕೆ ತೆರಳಬೇಕು ಮತ್ತು ದೇವರ ದರ್ಶನ ಪಡೆಯಬೇಕು ಎಂಬ ಆಭಿಲಾಷೆ ಹೊಂದಿರುತ್ತಾರೆ. ಆದರೆ ನಾನಾ ರೀತಿಯ ಅನಾನುಕೂಲತೆಯಿಂದ ಹೋಗಲು ಸಾಧ್ಯವಾಗಿರುವುದಿಲ್ಲ. ದೈವ ಭಕ್ತರಾದವರಿಗೆ ರಾಜ್ಯದ ತೀರ್ಥಸ್ಥಳಗಳಿಗೆ ಉಚಿತವಾಗಿ ಕಳುಹಿಸಬೇಕು ಎಂದು ನಿರ್ಧರಿಸಿ ರಾಜಾಜಿನಗರದ ಏಳು ವಾರ್ಡ್ ನಲ್ಲಿರುವ ನಿವಾಸಿಗಳಿಗೆ ಸುವರ್ ಅವಕಾಶ ಮಾಡಿಕೊಡಲಾಗಿದೆ. ಇಂದು 2000 ಭಕ್ತರು ತೀರ್ಥಸ್ಥಳಗಳಿಗೆ ತೆರಳಲಿದ್ದಾರೆ.  ಈ ಹಿಂದೆ ಮೂರು ಬಾರಿ ಅಂದಾಜು 8000 ಭಕ್ತರಿಗೆ ತೀರ್ಥಸ್ಥಳ ಪ್ರವಾಸ ಕಳುಹಿಸಿಕೊಡಲಾಗಿದೆ. ದೇವರ ದರ್ಶನ ಮಾಡಬೇಕು ಎಂಬ ಅವರ ಆಶಯವನ್ನು ಈಡೇರಿಸಿದ ಪುಣ್ಯದ ಕೆಲಸ ಮಾಡಿದ ಆತ್ಮತೃಪ್ತಿ, ಸಂತೋಷವಿದೆ ಎಂದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಅಪೇಕ್ಷಾ ಕಟ್ಟಿ,  ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಜಿ.ಕೃಷ್ಣಮೂರ್ತಿ, ಮಂಜುಳ ವಿಜಯಕುಮಾರ್ ಹಾಗೂ ವಿಜಯಕುಮಾರ್, ಕಾಂಗ್ರೆಸ್ ಪಕ್ಷದ ರಾಕೇಶ್, ಗಂಗಾಧರ್ ಮೊದಲಾದವರು ಪಾಲ್ಗೊಂಡಿದ್ದರು.

Leave a Reply