ಅಧಿಕಾರಿಗಳ ನಿರ್ಲಕ್ಷ್ಯ ಮತ್ತೊಮ್ಮೆ ಭೂಮಿ ಪೂಜೆಗೆ ಒತ್ತಾಯ: ಬಿಜೆಪಿ ಬೆಂಬಲಿಗರಿಂದ ಬಹಿಷ್ಕಾರ

4 years ago

ಬಾಗಲಕೋಟೆ: ಜಲಜೀವನ ಮಿಷನ್ ಯೋಜನೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಇದು ಐದು ಕೋಟಿಯ ದೊಡ್ಡ ಕಾಮಗಾರಿ. ಆದರೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಜಿಲ್ಲಾ ಸಂಸದರನ್ನು ಕಡೆಗಣಿಸಿದ್ದು ಖಂಡನೀಯ. ಸಂಬಂಧಪಟ್ಟ ಇಲಾಖೆಯವರು ಸರ್ಕಾರಿ ಶಿಷ್ಟಾಚಾರವನ್ನು ಮರೆತಿದ್ದಾರೆ ಎಂದು ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯ ಉಮೇಶ ಜಾಧವ ಹೇಳಿದರು.

ಸಾವಳಗಿ ಗ್ರಾಮದಲ್ಲಿ ನಾಡಕಚೇರಿ ಆವಣರದಲ್ಲಿ ಜಲಜೀವನ ಮಿಷನ್ ಯೋಜನೆಗೆ ಸಂಬಂಧಿಸಿದ ಭೂಮಿ ಪೂಜೆ ಕಾರ್ಯಕ್ರಮವನ್ನು ಬಹಿಷ್ಕರಿಸಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಕಾರ್ಯಕರ್ತರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಜಮಖಂಡಿ ತಾಲ್ಲೂಕು ಆಡಳಿತದಲ್ಲಿಯೇ ಅತ್ಯಂತ ಭ್ರಷ್ಟ ಅಧಿಕಾರಿಗಳನ್ನು ಹೊಂದಿರುವ ಇಲಾಖೆ ಎಂದರೇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ. ಈ ಇಲಾಖೆಯಲ್ಲಿ ಅನೇಕ ಹಗರಣಗಳು ನಡೆದಿವೆ. ಇದರ ಬಗ್ಗೆ ನಮ್ಮ ಹತ್ತಿರ ದಾಖಲೆಗಳು ಇವೆ. ಅವಶ್ಯ ಬಿದ್ದಾಗ ಅವುಗಳನ್ನು ಬಹಿರಂಗ ಪಡೆಸುತ್ತೇವೆ ಎಂದರು.

ಗ್ರಾಮ ಪಂಚಾಯತಿ ಸದಸ್ಯ ರಾಜುಗೌಡ ಪಾಟೀಲ ಮಾತನಾಡಿ, ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ಹಾಗೂ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರನ್ನು ಕಡೆಗಣಿಸಿದ್ದು, ಯಾವ ಒಬ್ಬ ಸದಸ್ಯರಿಗೂ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹೇಳದಿರುವದನ್ನು ಖಂಡಿಸುತ್ತೇವೆ ಎಂದರು.

ಇದು ಗ್ರಾಮದಲ್ಲಿ ಉದ್ಘಾಟನೆಗೊಳ್ಳುತ್ತಿರುವ ದೊಡ್ಡ ಯೋಜನೆಯಾಗಿದ್ದು ಇದರ ಬಗ್ಗೆ ಲೋಕಸಭಾ ಸದಸ್ಯರಿಗೆ, ಉಸ್ತುವಾರಿ ಸಚಿವರಿಗೆ ಮತ್ತು ವಿಧಾನ ಪರಿಷತ ಸದಸ್ಯರಿಗೆ ಮಾಹಿತಿ ನೀಡದೆ ಅತ್ಯಂತ ಸಣ್ಣ ಪ್ರಮಾಣದಲ್ಲಿ ವಿರೋಧದ ನಡುವೆಯೂ ಭೂಮಿ ಪೂಜೆ ಮಾಡಿರುವುದನ್ನು ನಾವು ಖಂಡಿಸುತ್ತೇವೆ‌ ಎಂದರು.

ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಹಾಗೂ ಕಾಮಗಾರಿಯ ಯೋಜನಾ ವರದಿಯ ಬಗ್ಗೆ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡದೇ ತರಾತುರಿಯಲ್ಲಿ ಕಾಮಗಾರಿ ಉದ್ಘಾಟನೆ ಮಾಡಿರುವುದು ಸರಿಯಲ್ಲ. ಆದಕಾರಣ ಈ ಮೇಲೆ ತಿಳಿಸಿದ ಎಲ್ಲಾ ಗಣ್ಯರಿಗೆ ಆಹ್ವಾನ ನೀಡಿ ಮತ್ತೊಮ್ಮೆ ಅದ್ದೂರಿಯಾಗಿ ಕಾರ್ಯಕ್ರಮವನ್ನು ಮಾಡಬೇಕು. ಒಂದು ವೇಳೆ ಮತ್ತೊಮ್ಮೆ ಉದ್ಘಾಟನೆ ಮಾಡದಿದ್ದರೆ ನಾವು ಕಾಮಗಾರಿಯನ್ನು ಪ್ರಾರಂಭಿಸಲು ಬಿಡುವದಿಲ್ಲ. ಇದರಿಂದ ಸಾರ್ವಜನಿಕ ಯಾವುದೇ ತೊಂದರೆಯಾಗುವದಿಲ್ಲ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುನಾಂದ ಮಾಣೋಜಿ, ಉಪಾಧ್ಯಕ್ಷೆ ಜಿನ್ನುಮತಿ ಉಪಾಧ್ಯೆ, ಗ್ರಾಮ ಪಂಚಾಯತಿ ಸದಸ್ಯರಾದ ಸಾವಿತ್ರಿ ಮಾಂಗ, ಸಂಜೀವ ಮಾಳಿ, ಗಾಮೇಶ ಬಾಪಕರ, ನಂದು ಕನೇರಿ, ಸಿದ್ದಾರ್ಥ ತಳಕೇರಿ, ವಿನೋಬಾ ನ್ಯಾಮಗೌಡ, ಬಸವರಾಜ ಪರಮಗೌಡ, ಭರತೇಶ ಜಮಖಂಡಿ ಪಕ್ಷದ ಹಿರಿಯರಾದ ತುಕಾರಮ ಬಾಪಕರ, ಬಾಬು ಮಾಣೋಜಿ, ಸುರೇಶ ಎಕ್ಸಂಬೆ ಹಾಗೂ ಅನೇಕರು ಹಾಜರಿದ್ದರು.

Leave a Reply