ರಿಯಾಯಿತಿ ದರದಲ್ಲಿ ಪೆರಿಯಾರ್ ಕೃತಿಗಳು ನಿಮ್ಮ ಮನೆ ಬಾಗಿಲಿಗೆ…

4 years ago

ಸ್ವಾಭಿಮಾನ ಚಳವಳಿಯ ಮೂಲಕ ದಮನಿತರ ನಡುವೆ ಅರಿವಿನ ಹಣತೆ ಹಚ್ಚಿದ, ಅಸ್ಪೃಶ್ಯತೆ ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಪೆರಿಯಾರ್ ರಾಮಸ್ವಾಮಿ ಅವರ ಜನ್ಮದಿನ ಪ್ರಯುಕ್ತ ಪೆರಿಯಾರ್ ಅವರೆ ಬರೆದ ನಾಲ್ಕು ಪುಸ್ತಕಗಳು ನಿಮ್ಮ ಓದಿಗೆ ಲಭ್ಯ ಇವೆ

‘ಅಸ್ಪೃಶ್ಯತೆ: ವೈಕಂ ಸತ್ಯಾಗ್ರಹ’
ಅನು: ಬಿ. ಸುಜ್ಞಾನಮೂರ್ತಿ
ರೂ 60/-
ವೈಕಂ ಹೋರಾಟ ಚಾರಿತ್ರಿಕವಾಗಿ ತುಂಬ ಮಹತ್ವದ ಘಟನೆ. ಕೇರಳದ ತಿರುವಾಂಕೂರಿನಲ್ಲಿ ನಡೆದ ಈ ಹೋರಾಟ ಭಾರತದ ಸಾಮಾಜಿಕ ಸಂರಚನೆಯ ಕನ್ನಡಿಯಂತಿದೆ. ಅಸ್ಪೃಶ್ಯತೆಯ ವಿರುದ್ಧ ಅಹಿಂಸಾತ್ಮಕ ಹೋರಾಟ ಮಾಡಿ ಗೆಲುವು ಸಾಧಿಸಿದ ಚರಿತ್ರೆಯೇ ಪೆರಿಯಾರರ ಅಸ್ಪೃಶ್ಯತೆ: ವೈಕಂ ಹೋರಾಟ.

ಸ್ವಾಭಿಮಾನದ ಮದುವೆಗಳು
ಅನು : ಬಿ. ಸುಜ್ಞಾನಮೂರ್ತಿ
ರೂ 70/-
ಪೆರಿಯಾರ ತಮಿಳುನಾಡಿನಲ್ಲಿ 1925 ರಲ್ಲಿ ದ್ರಾವಿಡ ಜನರಿಗಾಗಿ ಆತ್ಮಗೌರವದ ಚಳವಳಿ ಆರಂಭಿಸಿದರು. ಈ ಚಳವಳಿಯ ಪರಿಣಾಮದಿಂದ ಸ್ವಾ:ಭಿಮಾನದ ವಿವಾಹ ಪದ್ಧತಿ ರೂಢಿಯಲ್ಲಿ ಬಂದಿತು. ಬ್ರಾಹ್ಮಣ್ಯದ ಪುರೋಹಿತ್ಯ ನಡೆದ ಮದುವೆಗಳು ಸಾಮಾಜಿಕ ಚಲನೆಯನ್ನೇ ಕದಲಿಸಿದವು.
ಈ ವಿಚಾರಗಳ ಒಳಗೊಂಡ ಪುಸ್ತಕ ಇದು.

ಪೆರಿಯಾರ್ ನೋಟದಲ್ಲಿ ಇಸ್ಲಾಂ
ಸಂ: ಜಿ. ಆಲೋಶಿಯಸ್
ಕನ್ನಡಕ್ಕೆ: ಬಿ. ಸುಜ್ಞಾನಮೂರ್ತಿ
ರೂ 80/-

ಪೆರಿಯಾರ್ ಹೆಸರು ಕೇಳಿದ ಕೂಡಲೆ ಮಂದಿಗೆ ಒಬ್ಬ ಜಿಡ್ಡು ಗಟ್ಟಿದ ನಾಸ್ತಿಕ ಎಂಬ ಚಿಂತನೆ ಹುಟ್ಟುತ್ತದೆ. ಆದರೆ ಅವರು ದೇವರನ್ನು ನಂಬದ ಮಾತು, ವಿಶೇಷವಾಗಿ ಬಗೆಬಗೆಯ ರೂಪಗಳಲ್ಲಿ ಅಸಂಖ್ಯಾತವಾಗಿರುವ ಹಿಂದೂ ದೇವರುಗಳನ್ನು ಅಸಹ್ಯಪಟ್ಟುಕೊಂಡ ಮಾತು ನಿಜವೇ ಆದರೂ ಪೆರಿಯಾರ್ ಗುರಿ ನಾಸ್ತಿಕತೆಯ ಪ್ರಚಾರ ಅಲ್ಲವೇ ಅಲ್ಲ. ಈ ದೇಶದ ಜನರಲ್ಲಿ ಆತ್ಮಗೌರವವನ್ನು ಬೆಳೆಸುವುದಾಗಿತ್ತು.

ರಾಮಾಯಣ ದಿಟ ಓದು
ಪೆರಿಯಾರ್
ಅನು: ಬಿ. ಸುಜ್ಞಾನಮೂರ್ತಿ
ರೂ 110/-

‘ರಾಮಾಯಣ ದಿಟ ಓದು’ ಆರ್ಯರ ಹುಸಿಶ್ರೇಷ್ಠತೆಯನ್ನು ಸಾರುವ ರಾಮಾಯಣವನ್ನು ಉಗ್ರ ವಿಮರ್ಶೆಗೆ ಒಡ್ಡಿದ ಕೃತಿ. ದ್ರಾವಿಡ ಸಂಸ್ಕೃತಿಯ ನೇತಾರ ಪೆರಿಯಾರ್ ನಿರಂತರ ನಲವತ್ತು ವರ್ಷಗಳ ಕಾಲ ರಾಮಾಯಣದ ಆಳ ಅಗಲಗಳನ್ನು ಅಧ್ಯಯನ ಮಾಡಿದ ಪರಿಣಾಮದಿಂದ ರಚಿಸಿದ ವೈಚಾರಿಕ ಕೃತಿ. ರಾಮಾಯಣದ ಅಸಂಬದ್ಧ ಮತ್ತು ಅವೈಜ್ಞಾನಿಕ ಸಂಗತಿಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.

ಈ ನಾಲ್ಕು ಪುಸ್ತಕಗಳನ್ನು ಲಡಾಯಿ ಪ್ರಕಾಶನ ಪ್ರಕಟಿಸಿದೆ
ಇವುಗಳ ಒಟ್ಟು ಬೆಲೆ : 320/- ರೂ

ಇಂದು ರಿಯಾಯಿತಿ ಬೆಲೆ: 320-48=282+30(ಅಂಚೆವೆಚ್ಚ)=312 ರೂ

ಬುಕ್ ಮಾಡಲು

ಲಡಾಯಿ ಪ್ರಕಾಶನ: 9480286844

ಉತ್ತಮ ಪುಸ್ತಕಗಳು ನಿಮ್ಮ ಓದುವ ಕೋಣೆ ಸೇರಲಿ

Punjab national bank Gadag
A/c No 0177005500000278
Ladai prakashana
IFSC : PUNB0017700

Google pay and phone pay number : 9480286844

ಇಷ್ಟವಾದಲ್ಲಿ ನಿಮ್ಮ ಬಳಗ/ವ್ಯಾಟ್ಸಫ್/ಟೆಲಿಗ್ರಾಮ/ ಫೇಸ್ಬುಕ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ

ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿ.. ನಿಮ್ಮ ಪುಸ್ತಕ ಪ್ರೀತಿ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರುತ್ತದೆ

Leave a Reply