ಮಂಗಳೂರು: ಭಾರತದ ಕಮ್ಯುನಿಸ್ಟ್ ಚಳುವಳಿಯಲ್ಲಿ ಪ್ರಾರಂಭದ ಹೆಜ್ಜೆ ಗುರುತುಗಳು ಎಂಬ ಚಾರಿತ್ರಿಕ ವಸ್ತು ವಿಶ್ಲೇಷಣೆಯ ಪುಸ್ತಕ ಬಿಡುಗಡೆ ಸಮಾರಂಭವು ತಾ.25-09-2022ರಂದು ಬೆಳಿಗ್ಗೆ 10.30ಕ್ಕೆ ನಗರದ ಬಲ್ಮಠದಲ್ಲಿರುವ ಸಹೋದಯ ಹಾಲ್ ನಲ್ಲಿ ಜರುಗಲಿದೆ.
ಪುಸ್ತಕ ಬಿಡುಗಡೆಯನ್ನು CITU ಸಂದೇಶ ಮಾಸಿಕ ಪತ್ರಿಕೆಯ ಸಂಪಾದಕ, ರಾಜ್ಯ ಕಾರ್ಮಿಕ ನಾಯಕ ಕೆ.ಮಹಾಂತೇಶ್ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ವಹಿಸಲಿದ್ದಾರೆ. ನಿವೃತ್ತ ಫ್ರೊಫೆಸರ್ ಡಾ.ಕೆ.ರಾಜೇಂದ್ರ ಉಡುಪ ಪುಸ್ತಕ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಡಾ.ಎನ್ ಇಸ್ಮಾಯಿಲ್ ಭಾಗವಹಿಸಲಿದ್ದಾರೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರೂ, ಕಮ್ಯುನಿಸ್ಟ್ ಪಕ್ಷದ ಸ್ಥಾಪಕ ನಾಯಕರಾದ ಮುಝಾಫರ್ ಅಹಮ್ಮದ್ ರವರು ಬರೆದಿರುವ ಇಂಗ್ಲಿಷ್ ಆವೃತ್ತಿ ಪುಸ್ತಕವನ್ನು ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿಯವರು ಕನ್ನಡಕ್ಕೆ ಅನುವಾದಿಸಿದ್ದು, ಮಂಗಳೂರಿನ ಪ್ರಗತಿಪರ ಜನಸಮುದಾಯ ಪ್ರಕಾಶನವು ಪುಸ್ತಕವನ್ನು ಪ್ರಕಟಿಸಿದೆ ಎಂದು ಪ್ರಕಾಶಕರಾದ ಸುನಿಲ್ ಕುಮಾರ್ ಬಜಾಲ್ ರವರು ತಿಳಿಸಿದ್ದಾರೆ.




