ಪ್ರಜೆಗಳ ನಾಯಕರಾಗಬೇಡಿ, ಪ್ರಜೆಗಳ ಸೇವಕರಾಗಿ ಕೆಲಸಮಾಡಿ: ಸಂತೋಷ್ ಹೆಗಡೆ

4 years ago

ಬೆಂಗಳೂರು: ರಾಜಕೀಯ ಕ್ಷೇತ್ರ ಕಲುಷಿತವಾಗಿದೆ, ಜನರ ಸಹಕಾರದಿಂದ ಶುದ್ಧೀಕರಣವಾಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದರು.

ವಸಂತನಗರದಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ಸಹಯೋಗದಲ್ಲಿ ನೂತನವಾಗಿ ರಾಷ್ಟ್ರೀಯ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಭಾರತ)ಉದ್ಘಾಟನೆ ಮತ್ತು  ಐತಿಹಾಸಿಕ ಸಮಾವೇಶ ಮಾತನಾಡಿದ ಅವರು, ದೇಶದಲ್ಲಿ ಎಲ್ಲ ಪಕ್ಷಗಳು ಭ್ರಷ್ಟಚಾರದಲ್ಲಿ ಮುಳುಗಿವೆ. ದೇಶದ ರಾಜಕೀಯ ನಾಯಕರುಗಳು, ಪ್ರಜಾನಾಯಕರು ಆನ್ನುವ ಭ್ರಮೆಯಿಂದ ಹೊರಬಂದು ಪ್ರಜಾ ಸೇವಕರಾಗಿ ಕೆಲಸ ಮಾಡಬೇಕು, ಜನಸೇವೆ ಮಾಡಬೇಕು. ಆಗ ದೇಶ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.

ನೂತನ ಚಿಂತನೆ, ಜನಸೇವೆ ಮಾಡಲು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿ ಇಂದು ಉದ್ಘಾಟನೆಯಾಗಿದೆ. ಪಾರ್ಟಿಗೆ ಜನಸೇವೆ ಮಾಡುವ ಶಕ್ತಿ ಸಿಗಲಿ ಎಂದು ಶುಭಕೋರಿದರು.

ಡಾ||ಎನ್.ಮೂರ್ತಿ ಮಾತನಾಡಿ, ಬಡವರು, ಶೋಷಿತರಿಗೆ ನ್ಯಾಯ ಒದಗಿಲು ಮತ್ತು ಜನಪರ ಸರ್ಕಾರ ನೀಡಬೇಕು ಎಂಬ ಹೊಸ ಚಿಂತನೆ ಮೂಲಕ ರಾಷ್ಟ್ರಿಯ ಪಕ್ಷ ಉದಯವಾಗಿದೆ. ರಾಷ್ಟ್ರಿಯ ಪಕ್ಷಗಳಾದ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಪಕ್ಷಗಳು ಜನರ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75ನೇ ಅಮೃತ ಮಹೋತ್ಸವವನ್ನು ಅಚರಿಸುತ್ತಿದ್ದೇವೆ. ಆದರು ಬಡವರು, ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ದೊರಕಿಲ್ಲ. ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳು ಶ್ರೀಮಂತರ ಪಾಲಾಗಿವೆ ಎಂದರು.

ಪ್ರತಿಯೊಂದು ಕಾಮಗಾರಿಯಲ್ಲಿ ಶೇಕಡ 40ರಿಂದ 50 ಪರ್ಸೆಂಟ್ ಲಂಚ ಕೊಡಬೇಕಾದ ವಾತಾವರಣ ಸರ್ಕಾರದಲ್ಲಿದೆ. ಭ್ರಷ್ಟಚಾರ ಮುಗಿಲು ಮುಟ್ಟಿದೆ. ಶೇಕಡ 85ರಷ್ಟು ಎಸ್.ಸಿ./ಎಸ್.ಟಿ.ಮತ್ತು ಓ.ಬಿ.ಸಿ.ಮತದಾರರು ಇದ್ದಾರೆ. ಈ ಮತದಾರರು ಸಂಘಟನೆಯಿಂದ ಒಟ್ಟಾದರೆ ಅಧಿಕಾರ ಹಿಡಿಯಲು ಸಾಧ್ಯ. ಅಧಿಕಾರ ಬಡವರ, ಶೋಷಿತರ ಕೈಯಲ್ಲಿ ಇದ್ದಾಗ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ನೂತನ ರಾಷ್ಟ್ರಿಯ ಅಧ್ಯಕ್ಷರಾಗಿ ಡಾ||ಎನ್.ಮೂರ್ತಿ ಆಯ್ಕೆಯಾದರು. ನೂತನ ಪಕ್ಷ ಉದ್ಘಾಟನೆಯಲ್ಲಿ ವಿವಿಧ ರಾಜ್ಯಗಳ ಪ್ರತಿನಿಧಿಗಳು ಮತ್ತು ವಿವಿಧ ಜಿಲ್ಲೆಗಳ ಪ್ರತಿನಿಧಿಗಳು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply