ಗೋವಾದಲ್ಲಿ ಆಪರೇಷನ್ ಕಮಲ: ಮಾಜಿ ಸಿಎಂ ಸೇರಿ 8 ಶಾಸಕರು ಕಮಲ ತೆಕ್ಕೆಗೆ

4 years ago

ಪಣಜಿ: ಮಾಜಿ ಸಿಎಂ ದಿಗಂಬರ್ ಕಾಮತ್ ವಿಪಕ್ಷ ನಾಯಕ ಮೈಕೆಲ್ ಲೋಬೋ ಸೇರಿದಂತೆ ಎಂಟು ಕಾಂಗ್ರೆಸ್ ಶಾಸಕರು ಇಂದು ಗೋವಾದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಡೆ ಹೇಳಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 20 ಶಾಸಕರು, ಕಾಂಗ್ರೆಸ್ 11 ಶಾಸಕರಿದ್ದಾರೆ. ಜುಲೈ 2019ರಲ್ಲಿ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಿಕೊಂಡಿದ್ದರು. ಇದೀಗ ದಿಗಂಬರ್ ಕಾಮತ್, ಮೈಕೆಲ್ ಲೋಬೋ, ದೇಲಿಲಾ ಲೋಬೋ, ರಾಜೇಶ್ ಫಾಲ್ದೇಸಾಯಿ, ಕೇದಾರ್ ನಾಯಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೋ ಸಿಕ್ವೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಸಿಎಂ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿ ಪಕ್ಷ ಸೇರಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ಈ ಮೂಲಕ ಇಷ್ಟು ದಿನ ಅಧಿಕಾರಕ್ಕಾಗಿ ಪಕ್ಷಾಂತರಕ್ಕೆ ವೇದಿಕೆಯಾಗುತ್ತಿದ್ದ ದೇಶದಲ್ಲಿ ಹೊಸ ಶಕೆ ಆರಂಭವಾದಂತಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಬಿಜೆಪಿ ಜೊತೆಗೆ ವಿಪಕ್ಷಗಳ ಶಾಸಕರು ಸಚಿವ ಸ್ಥಾನ ಮತ್ತು ಇತರ ಲಾಭಗಳಿಗೆ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದರು. ಇದೀಗ ಗೋವಾದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದ್ದರೂ ವಿಪಕ್ಷ ಕಾಂಗ್ರೆಸ್ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಭವಿಷ್ಯದ ರಾಜಕಾರಣದಲ್ಲಿ ಇನ್ನೇನು ಏನು ನಡೆಯಲಿವೆಯೋ ಎಂಬ ಶಂಕೆ ಉದ್ಭವಕ್ಕೆ ಈ ಘಟನೆ ಕಾರಣವಾಗಿದೆ.

Leave a Reply