ಆರ್ಬಿಐ ನಿಂದ ಕಟ್ಟುನಿಟ್ಟಿನ ನಿಯಮಗಳು ಜಾರಿ!
ದೆಹಲಿ: ಸಾಲ ವಸೂಲಾತಿ ಹೆಸರಿನಲ್ಲಿ ಗ್ರಾಹಕರಿಗೆ ಬ್ಯಾಂಕ್ಗಳು ಮತ್ತು ಏಜೆಂಟ್ಗಳು ಕಿರುಕುಳ ನೀಡುವುದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೆಲವು ಅತ್ಯಂತ ಕಠಿಣ ಹಾಗೂ ಪ್ರಮುಖ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾಲ ವಸೂಲಿ ಏಜೆಂಟ್ಗಳು ಕಡ್ಡಾಯವಾಗಿ ಪಾಲಿಸಲೇಬೇಕಾದ ಆರ್ಬಿಐನ ಪ್ರಮುಖ ನಿಯಮಗಳು ಇಲ್ಲಿವೆ:
- ಬ್ಯಾಂಕ್ ಏಜೆಂಟ್ಗಳ ಕಿರುಕುಳ ಅನುಭವಿಸಿದವರಿಗೆ ಸಾಲಗಾರರಿಗೆ ಸಿಹಿಸುದ್ದಿ
- ಡಿ.ವೈ.ಎಫ್.ಐ. ಜಪ್ಪಿನಮೊಗರು ಘಟಕ ವತಿಯಿಂದ 25ನೇ ದಸರಾ ಕ್ರೀಡಾಕೂಟ
- ಸ್ಟಿಂಗ್ ಆಪರೇಶನ್ ಮಾಡಿಸಿದ್ದು ಕಾಂಗ್ರೆಸ್ಸೇ ಎಂದು ಖಚಿತವಾಗುತ್ತದೆ: ಆರ್.ಅಶೋಕ
- ಸಿದ್ದು ವಿರುದ್ಧದ ವೈರಲ್ ಸ್ಟಿಂಗ್ ಆಪರೇಷನ್ ವಿಡಿಯೋ
- ಗ್ಯಾಸ್ ಗೀಸರ್ ಬಳಕೆಯನ್ನು ನಿಷೇಧಿಸಿ
ಬೆದರಿಕೆ ಹಾಕುವಂತಿಲ್ಲ: ಸಾಲಗಾರರಿಗೆ ಯಾವುದೇ ಕಾರಣಕ್ಕೂ ಮಾತಿನಿಂದಾಗಲಿ ಅಥವಾ ದೈಹಿಕವಾಗಲಿ ಬೆದರಿಕೆ ಅಥವಾ ಕಿರುಕುಳ ನೀಡುವ ಹಾಗಿಲ್ಲ.
ಅವಮಾನಿಸುವಂತಿಲ್ಲ: ಸಾರ್ವಜನಿಕವಾಗಿ ಸಾಲಗಾರರನ್ನು ಅವಮಾನಿಸುವುದು ಅಥವಾ ಮಾನಹಾನಿ ಮಾಡುವ ಯಾವುದೇ ಕೃತ್ಯವನ್ನು ಮಾಡುವುದು ಸಂಪೂರ್ಣವಾಗಿ ನಿಷಿದ್ಧವಾಗಿದೆ.

ಕುಟುಂಬದವರ ಗೋಪ್ಯತೆಗೆ ಧಕ್ಕೆ ಬೇಡ: ಸಾಲಗಾರರ ಕುಟುಂಬದವರು, ಸ್ನೇಹಿತರು ಅಥವಾ ರೆಫರೆನ್ಸ್ ವ್ಯಕ್ತಿಗಳಿಗೆ ಕರೆ ಮಾಡಿ ಕಿರುಕುಳ ನೀಡುವಂತಿಲ್ಲ.
ಕರೆ ಮಾಡುವ ಸಮಯದ ಮಿತಿ: ಓವರ್ಡ್ಯೂ ಲೋನ್ ರಿಕವರಿಗಾಗಿ ಬೆಳಿಗ್ಗೆ 8ಕ್ಕಿಂತ ಮುಂಚೆ ಅಥವಾ ರಾತ್ರಿ 7ರ ನಂತರ ಯಾವುದೇ ಕಾರಣಕ್ಕೂ ಕರೆ ಮಾಡುವಂತಿಲ್ಲ.
ಪದೇಪದೇ ಕರೆ ಮಾಡಿ ಕಿರುಕುಳ ನೀಡಬಾರದು: ನಿರಂತರವಾಗಿ ಕರೆಗಳನ್ನು ಮಾಡುವ ಮೂಲಕ ಸಾಲಗಾರರ ಮೇಲೆ ಮಾನಸಿಕ ಒತ್ತಡ ಹೇರುವ ಹಾಗಿಲ್ಲ.
ಬೆದರಿಕೆ ಅಥವಾ ಅನಾಮಧೇಯ ಕರೆಗಳು ನಿಷೇಧ: ಸಾಲಗಾರರಿಗೆ ಯಾವುದೇ ರೀತಿಯ ಬೆದರಿಕೆ ಅಥವಾ ಅನಾಮಧೇಯ ಕರೆಗಳನ್ನು ಮಾಡುವಂತಿಲ್ಲ.
ಅಸಭ್ಯ ಸಂದೇಶಗಳಿಗೆ ಬ್ರೇಕ್: ಮೊಬೈಲ್ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳ ಮೂಲಕ ಸಾಲ ವಸೂಲಿಗಾಗಿ ಅಸಭ್ಯ ಮತ್ತು ಬೆದರಿಕೆಯ ಸಂದೇಶಗಳನ್ನು ಕಳುಹಿಸುವುದು ತಪ್ಪು.
ಸುಳ್ಳು ಮಾಹಿತಿ ನೀಡುವಂತಿಲ್ಲ: ಸಾಲದ ಮೊತ್ತ, ಪಾವತಿಸಬೇಕಾದ ದಿನಗಳು ಅಥವಾ ಏಜೆಂಟ್ಗಳ ಅಧಿಕಾರದ ಕುರಿತು ಗ್ರಾಹಕರಿಗೆ ಯಾವುದೇ ತಪ್ಪು ಮಾಹಿತಿಯನ್ನು ನೀಡಬಾರದು.
ಏಜೆಂಟ್ಗಳಿಗೆ ಸೂಕ್ತ ತರಬೇತಿ ಕಡ್ಡಾಯ: ಗ್ರಾಹಕರೊಂದಿಗೆ ಅತ್ಯಂತ ಗೌರವದಿಂದ ಹಾಗೂ ಸಂವೇದನಾಶೀಲತೆಯಿಂದ ವರ್ತಿಸುವಂತೆ ಬ್ಯಾಂಕ್ಗಳು ತಮ್ಮ ರಿಕವರಿ ಏಜೆಂಟ್ಗಳಿಗೆ ಕಡ್ಡಾಯವಾಗಿ ತರಬೇತಿ ನೀಡಬೇಕು.
ಬ್ಯಾಂಕ್ ಅಥವಾ ಎನ್ಬಿಎಫ್ಸಿಯದ್ದೇ ನೇರ ಹೊಣೆಗಾರಿಕೆ: ಸಾಲ ವಸೂಲಿ ಕಾರ್ಯವನ್ನು ಬೇರೆ ಏಜೆನ್ಸಿಗೆ (ಹೊರಗುತ್ತಿಗೆಗೆ) ನೀಡಿದ್ದರೂ ಸಹ, ಆ ಏಜೆಂಟ್ಗಳು ಮಾಡುವ ತಪ್ಪುಗಳಿಗೆ ಅಂತಿಮವಾಗಿ ಸಂಬಂಧಪಟ್ಟ ಬ್ಯಾಂಕ್ ಅಥವಾ ಎನ್ಬಿಎಫ್ಸಿಯೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ.
ಇನ್ನು ಮುಂದೆ ನಿಮಗೆ ಲೋನ್ ರಿಕವರಿಯವರು ಕಿರುಕುಳ ಕೊಟ್ಟರೆ ಆತ್ಮಗೌರವದಿಂದ ಮತ್ತು ಆತ್ಮಸೈರ್ಯದಿಂದ ಇರಿ. ಯಾವುದೇ ಕಾರಣಕ್ಕೂ ಖಿನ್ನತೆಗೆ ಒಳಗಾಗದಿರಿ.




