ಎಲ್ಲ ಪಕ್ಷದ ಚುನಾಯಿತ ಪ್ರತಿನಿಧಿಗಳು ಪಂಚಾಯಿತಿಯಿಂದ ಪಾರ್ಲಿಮೆಂಟಿನ ತನಕ ಕರ್ನಾಟಕದಲ್ಲಿ ಒಂದು ತಿಂಗಳ ತಮ್ಮ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ.
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಭೀಕರವಾದ ಬರಗಾಲ ಬಂದಿದ್ದು ರೈತ ಬಾಂಧವರು ತುಂಬಾ ಸಂಕಷ್ಟದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಬರಗಾಲ ರಾಜ್ಯದ ಎಲ್ಲಾ ಜನರ ದೈನಂದಿನ ಬದುಕಿನ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ರೈತರ ನೆರವಿಗೆ ನಿಲ್ಲಲು ಕರ್ನಾಟಕ ರಾಜ್ಯದ ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟಿನ ತನಕ ಎಲ್ಲ ಹಂತದ ಸದಸ್ಯರುಗಳು ಮತ್ತು ನಿವೃತ್ತ ಸದಸ್ಯರು ತಮ್ಮ ಒಂದು ತಿಂಗಳ ಸಂಬಳವನ್ನು ಅಥವಾ ಪಿಂಚಣಿಯನ್ನು ಬರ ಪರಿಹಾರ ನಿಧಿಗೆ ನೀಡಬೇಕು.
ಇದೇ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ನೌಕರರು ತಮ್ಮ ಒಂದು ದಿನದ ವೇತನವನ್ನು ಬರ ಪರಿಹಾರ ನಿಧಿಗೆ ನೀಡಬೇಕು.
ದುಬಾರಿ ಸಮಾರಂಭಗಳನ್ನು ಮಾಡುವ ಶ್ರೀಮಂತರು ಮತ್ತು ರಾಜಕಾರಣಿಗಳು ಇವುಗಳಿಗೆ ಕಡಿವಾಣ ಹಾಕಿ, ಇವುಗಳನ್ನು ಸರಳವಾಗಿ ಮಾಡಿಕೊಂಡು ಒಂದಷ್ಟು ಹಣವನ್ನು ಈ ಸಂದರ್ಭದಲ್ಲಿ ಸಂಗ್ರಹಿಸಿ, ಬರ ಪರಿಹಾರ ನಿಧಿಗೆ ನೀಡಬೇಕು.
ಸರ್ಕಾರ ಅಗತ್ಯವಲ್ಲದ ವಿಚಾರಗಳಿಗೆ ವೆಚ್ಚವನ್ನು ಮಾಡಬಾರದು. ಯಾವುದೇ ಕಾರ್ಯಕ್ರಮವನ್ನು ಸಹ ಅವಶ್ಯಕತೆಗೆ ಮೀರಿ ಅದ್ದೂರಿಯಾಗಿ ನಡೆಸಿ ವೆಚ್ಚ ಮಾಡಬಾರದು.
ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರ ನಿಧಿ ಸ್ಥಾಪಿಸಿ ಶ್ರೀಮಂತರು ಮತ್ತು ಉದ್ಯಮಿಗಳು ಉದಾರ ಮನಸ್ಸಿನಿಂದ ಸಹಾಯ ಮಾಡಲು ಅವಕಾಶವನ್ನು ಮಾಡಿಕೊಡಿ.
ಬರ ಪರಿಹಾರದ ಒಂದೊಂದು ನಯಾಪೈಸೆ ಸಹ ಯಾವುದೇ ರೀತಿಯಲ್ಲೂ ಪೋಲು ಆಗದಂತೆ ಮತ್ತು ಇದರಲ್ಲಿ ಸಾಸಿವೆ ಕಾಳಿನಷ್ಟು ಅನ್ಯಾಯವಾಗದ ರೀತಿಯಲ್ಲಿ ಪ್ರತಿಯೊಂದು ನಯಾಪೈಸೆ ಸಹ ನೇರವಾಗಿ ರೈತರ ಪರಿಹಾರಕ್ಕೆ ತಲುಪಬೇಕು. ಆ ನಿಟ್ಟಿನಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ದುಡಿಯುವಂತಹ ಮನಸ್ಸುಳ್ಳ ಮತ್ತು ಅಂತಹ ಹಿನ್ನೆಲೆ ಉಳ್ಳ ಅಧಿಕಾರಿಗಳ ಒಂದು ತಂಡವನ್ನ ರಚಿಸಿ ಬರ ಪರಿಹಾರದ ಕಾರ್ಯಗಳನ್ನು ಕೈಗೊಳ್ಳಲು ಅವರಿಗೆ ಅಧಿಕಾರವನ್ನು ನೀಡಿ.
ರಾಜ್ಯದಲ್ಲಿ ಬರ ಬಂದಿರುವುದು ಎಲ್ಲರಿಗೂ ತಿಳಿದಿದೆ ಇದಕ್ಕಾಗಿ ನಿಯೋಗ ಹೋಗುವುದು, ಪ್ರಧಾನಮಂತ್ರಿಗಳ ಬಳಿ ಮನವಿ ಸಲ್ಲಿಸುವುದು, ಇವೆಲ್ಲವೂ ಹಿಂದಿನ ಕಾಲದ ಪದ್ಧತಿಗಳು. ಈಗ ಕಾಲ ಬದಲಾಗಿದೆ ತಾಂತ್ರಿಕತೆ ಯುಗದಲ್ಲಿ ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಸರ್ಕಾರದವರಿಗೆ ಕರ್ನಾಟಕದ ಭರದ ಪರಿಸ್ಥಿತಿ ಚೆನ್ನಾಗಿ ತಿಳಿಸುವಂತಹ ವ್ಯವಸ್ಥೆಯು ಇದೆ.
ಕೇಂದ್ರ ಸರ್ಕಾರ ಬರಗಾಲದ ಸಂದರ್ಭದಲ್ಲಿ ರಾಜ್ಯಕ್ಕೆ ನೆರವು ನೀಡುವುದು ಯಾವುದೇ ಭಿಕ್ಷೆಯಲ್ಲ. ನಮ್ಮ ರಾಜ್ಯ ಸರ್ಕಾರ ನಾಲ್ಕು ಲಕ್ಷಕ್ಕೂ ಕೋಟಿ ಹೆಚ್ಚು ಹಣವನ್ನು ಜಿಎಸ್ಟಿ ರೂಪದಲ್ಲಿ ಪಾವತಿಸುತ್ತೇವೆ. ಜೊತೆಗೆ ಆದಾಯ ತೆರಿಗೆಯನ್ನು ಕಟ್ಟುತ್ತೇವೆ ಇದರಿಂದಾಗಿ ಸಂಕಷ್ಟದಲ್ಲಿರುವ ರಾಜ್ಯಕ್ಕೆ ನೆರವು ನೀಡಬೇಕಾದದ್ದು ಅವರ ಕರ್ತವ್ಯ. ಪ್ರತಿಯೊಂದು ಸಂದರ್ಭದಲ್ಲಿ ಕೇಂದ್ರ ಸರಕಾರ ತನ್ನ ವಿಪತ್ತು ನಿರ್ವಹಣಾ ನಿಧಿಯಿಂದ ಸಹಾಯವನ್ನು ಮಾಡುತ್ತಲೇ ಬಂದಿದೆ, ಈಗಲೂ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ನಿಲ್ಲಬೇಕಾದದ್ದು ಅದರ ಜವಾಬ್ದಾರಿ. ಬಿಜೆಪಿ ನಾಯಕರು ಕೇವಲ ಉಪದೇಶ ಅಥವಾ ಆವೇಶದ ಮಾತುಗಳ ಆಡುವುದು ಬಿಟ್ಟು, ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನ ಹಾಕಿ ರಾಜ್ಯಕ್ಕೆ ನೆರವನ್ನ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿ. ಕೇವಲ ಟೀಕೆ ಟಿಪ್ಪಣಿಗಳಿಂದ ಯಾವ ರೈತರ ಬದುಕು ಹಸನಾಗುವುದಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




