ಬೆಂಗಳೂರಿನ ಯಾವುದೇ ನಾಗರಿಕರು ಜಿಬಿಎ ಮತ್ತು ಬಿಡಿಎ ವತಿಯಿಂದ ತಮ್ಮ ನಿವೇಶನಗಳಲ್ಲಿ ಕಟ್ಟಡಗಳನ್ನು ಕಟ್ಟಲು ನಕ್ಷೆ ಪರವಾನಿಗೆ ಅರ್ಜಿ ಸಲ್ಲಿಸಿದಾಗ ಕಡ್ಡಾಯವಾಗಿ ನೆಲಮಾಳಿಗೆಯನ್ನು ಪಾರ್ಕಿಂಗ್ ಉದ್ದೇಶಕ್ಕೆ ಬಳಸಬೇಕೆಂಬ ಷರತ್ತಿನೊಂದಿಗೆ ವಿಧಿಸಿ ನಕ್ಷೆಯನ್ನು ಮಂಜೂರು ಮಾಡಿಕೊಡುತ್ತೀರಿ. ಸಣ್ಣಪುಟ್ಟ ನಿವೇಶನಗಳಿಗೂ ಇದೇ ಮಾನದಂಡ ಅನುಸರಿಸುತ್ತೀರಿ.
- ಅಸಾಧಾರಣ ಸಾಧಕ ಮಕ್ಕಳಿಗೆ ಜಿಲ್ಲಾಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
- ಓಣಂ ಹಬ್ಬಕ್ಕೆ ಕೃತಿ ಶೆಟ್ಟಿ ಶೃಂಗಾರ ಹೇಗಿತ್ತು ನೋಡಿ
- ದಾವಣಗೆರೆಯಲ್ಲಿ ಎಸ್.ಐ.ಆರ್ ಪೂರ್ಣ
- ನೆಲ ಮಾಳಿಗೆಗಳನ್ನು ಕಡ್ಡಾಯವಾಗಿ ವಾಹನ ನಿಲುಗಡೆ ಉದ್ದೇಶಕ್ಕೆ ಬಳಸಲು ಆದೇಶಿಸಿ
- ಮಿಷನ್ ಶಕ್ತಿ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಅರ್ಜಿ ಆಹ್ವಾನ
ಆದರೆ ಬೆಂಗಳೂರು ನಗರದಲ್ಲಿ ಸಹಸ್ರಾರು ವಾಣಿಜ್ಯ ಉದ್ದೇಶಗಳಿಗಾಗಿ ಕಟ್ಟುವ ಕಟ್ಟಡಗಳ ನೆಲಮಾಳಿಗೆಯಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಂಡು ಬಾಡಿಗೆ ಕೊಡುತ್ತಿದ್ದಾರೆ. ಇಲ್ಲಿ ಯಾರು ನೆಲಮಾಳಿಗೆಯನ್ನು ವಾಹನ ನಿಲುಗಡೆ ಉದ್ದೇಶಕ್ಕೆ ಬಳಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾನ್ಯ ಸಚಿವರು ಗಮನವನ್ನು ಹರಿಸಿ ಇನ್ನು ಮುಂದಿನ ದಿನಗಳಲ್ಲಾದರೂ ವಾಣಿಜ್ಯ ಉದ್ದೇಶಗಳಿಗೆ ನಕ್ಷೆಯನ್ನ ಮಂಜೂರು ಮಾಡುವ ಮತ್ತು ಪ್ರಮುಖ ರಸ್ತೆಗಳಲ್ಲಿ ಅಂಗಡಿಗಳನ್ನು ಕಟ್ಟಿ, ಬಾಡಿಗೆಗೆ ಕೊಡುವ ಎಲ್ಲ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ನೆಲಮಾಳಿಗೆಯನ್ನು ಪಾರ್ಕಿಂಗ್ ಉದ್ದೇಶಗಳಿಗೆ ಬಳಸುವಂತೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿ.
ಜೊತೆಗೆ ಮುಂದಿನ ದಿನಗಳಲ್ಲಿ ಅವರು ನೆಲಮಾಳಿಗೆಯನ್ನು ಅನ್ಯ ಉದ್ದೇಶಗಳಿಗೆ ಬಳಸಿದರೆ, ಅಂತಹ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸುವಂತಹ ಕೆಲಸವನ್ನು ಮಾಡಿ. ಇದರಿಂದ ಬೆಂಗಳೂರು ನಗರದಲ್ಲಿ ರಸ್ತೆಗಳಲ್ಲಿ ಇರುವ ಪಾರ್ಕಿಂಗ್ ಸಮಸ್ಯೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.
ಅನೇಕ ರಸ್ತೆಗಳಲ್ಲಿ ಎರಡು ಕಡೆ ಅಂಗಡಿಗಳು ಇದ್ದು ನಾಗರೀಕರು ರಸ್ತೆ ಎರಡು ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿರುತ್ತಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈಗಾಗಲೇ ಕಟ್ಟಿರುವ ಕಟ್ಟಡಗಳಿಗೂ ಈ ನಿಯಮವನ್ನ ಅನುಸರಿಸಲು ಕ್ರಮ ಕೈಗೊಳ್ಳಿ.
– ಕೆ ಎಸ್ ನಾಗರಾಜ್, ಬೆಂಗಳೂರು



