ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ

2 months ago

ಬೆಂಗಳೂರು: ಮಲ್ಲೇಶ್ವರಂ ಯೂತ್ಸ್ ಆಫ್ ಮಲ್ಲೇಶ್ವರ (ರಿ)  ಬೆಂಗಳೂರು ವತಿಯಿಂದ “ಅಪ್ಪು ಕ್ರೀಡೋತ್ಸವ” ವಿಶೇಷ ಚೇತನ ಮಕ್ಕಳ ಕ್ರೀಡಾಕೂಟವನ್ನು ದಿನಾಂಕ 09 ಜನವರಿ, 2026ರಂದು ಆಯೋಜಿಸಲಾಗಿದೆ.

ಯೂತ್ಸ್ ಆಫ್ ಮಲ್ಲೇಶ್ವರ ಅಧ್ಯಕ್ಷ ಎಂ.ಹೇಮಂತ್ ಗೌಡ, ಆಯೋಜಕರುಗಳಾದ ಬಿ.ಟಿ.ಚಂದ್ರಮೌಳಿ, ಕೆ.ಎಸ್.ಶ್ರೀವಲ್ಲಭ , ರಾಜ ಶಶಿಧರ್, ಶೈಲಾ ಅಯ್ಯಂಗಾರ್, ರಾಜು ದೈವಿಕ್, ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಅಬ್ದುಲ್ ಆಫಿಜ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಜನವರಿ 9ರಂದು ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಸವಿ ಸ್ಮರಣೆಯಲ್ಲಿ ವಿಶೇಷ ಚೇತನ ಮಕ್ಕಳಿಗಿಗಾಗಿ 4ನೇ ವರ್ಷದ ಅಪ್ಪು ಕ್ರೀಡೋತ್ಸವ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ 750ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಭಾಗವಹಿಸಲಿದ್ದಾರೆ.

ಜನವರಿ 09 ಶುಕ್ರವಾರ ಬೆಳಗ್ಗೆ 9-30ಕ್ಕೆ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಅವರೊಂದಿಗೆ ಚಲನಚಿತ್ರ ನಿರ್ಮಾಪಕರಾದ ಡಿ. ಸುರೇಶ್ ಗೌಡ ಹಾಗೂ ಪತ್ರಕರ್ತರಾದ ರಾಧಾ ಹಿರೇಗೌಡರ್‌, ಕಾಂಗ್ರೆಸ್ ಪಕ್ಷದ ಮುಖಂಡ ಅನೂಪ್ ಅಯ್ಯಂಗಾರ್, ಮಾಜಿ ಅಂತರಾಷ್ಟ್ರೀಯ ವಾಲಿಬಾಲ್ ಆಟಗಾರರಾದ ಬೆಟ್ಟೇಗೌಡ ಉಪಸ್ಥಿತರಿರುತ್ತಾರೆ. 

ಮಧ್ಯಾಹ್ನ 3-30ಕ್ಕೆ ಬಹುಮಾನ ವಿತರಣೆಯನ್ನು ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯ ಕೆ.ಎಂ. ನಾಗರಾಜ್‌ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ, ಅಶ್ವಿನಿ ಪುನೀತ್‌ ರಾಜಕುಮಾರ್‌ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧ್ಯಕ್ಷ  ವಿ.ಎಸ್. ಆರಾಧ್ಯ ಪಾಲ್ಗೊಳ್ಳಲಿದ್ದಾರೆ.

ಕ್ರೀಡಾಕೂಟು ವಿಶೇಷ ಚೇತನ ಮಕ್ಕಳಿಗೆ ಉಚಿತ ಪ್ರವೇಶ ಮತ್ತು ಜೂನಿಯರ್, ಸಬ್ ಜೂನಿಯರ್, ಸೀನಿಯರ್ ಮೂರು ವಿಭಾಗಗಳಲ್ಲಿ ಸ್ಪರ್ಧೆ ಇರುತ್ತದೆ ಮತ್ತು ವಿಶೇಷವೆಂದರೆ ಕ್ರೀಡಾಕೂಟದಲ್ಲಿ ಪ್ಲಾಸ್ಟಿಕ್ ಮುಕ್ತ ಮತ್ತು ಶೂನ್ಯ ಕಸ ಯೋಜನೆ ರೂಪಿಸಲಾಗಿದೆ.

Leave a Reply