ಧಾರವಾಡ: 2025-26ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಋತುವಿನ ಬಿಳಿ ಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ್ದು, ಜಿಲ್ಲೆಯಲ್ಲಿ ಬಿಳಿ ಜೋಳ ಖರೀದಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಖರೀದಿ ಏಜೆನ್ಸಿಯಾಗಿ ನೇಮಕವಾಗಿದೆ. ಜಿಲ್ಲೆಯಲ್ಲಿ ಐದು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಬಿಳಿ ಜೋಳ (ಹೈಬ್ರಿಡ್) ಪ್ರತಿ ಕ್ವೀಂಟಲ್ಗೆ. ರೂ.3,699 ಹಾಗೂ ಬಿಳಿ ಜೋಳ ಮಾಲ್ದಂಡಿ ಪ್ರತಿ ಕ್ವೀಂಟಲ್ಗೆನ ರೂ.3,749 ರಂತೆ ದರ ನಿಗದಿ ಪಡಿಸಲಾಗಿದೆ. ಧಾರವಾಡ ಜಿಲ್ಲೆಯ ಧಾರವಾಡ, ಹುಬ್ಬಳ್ಳಿ, ನವಲಗುಂದ, ಕುಂದಗೋಳ ಮತ್ತು ಕಲಘಟಗಿ ತಾಲೂಕುಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ. ಪ್ರತಿ ರೈತರಿಂದ ಹಿಡುವಳಿಯನ್ನು ಆಧರಿಸಿ ಪ್ರತಿ ಎಕರೆಗೆ 15 ಕ್ವಿಂಟಾಲ್ ನಂತೆ ಗರಿಷ್ಠ 150 ಕ್ವಿಂಟಾಲ್ ಬಿಳಿ ಜೋಳವನ್ನು ಖರೀದಿಸಲಾಗುವುದು.
ಆಸಕ್ತ ರೈತರು ಬಯೋಮೆಟ್ರಿಕ್ ಮೂಲಕ ನವೆಂಬರ್ 15, 2025 ರಿಂದ ಮಾರ್ಚ 30, 2026 ರವರೆಗೆ ನೊಂದಣಿ ಮಾಡಬೇಕು.
ಮುಂಗಾರು ಋತುವಿನ ಬಿಳಿ ಜೋಳವನ್ನು ನವೆಂಬರ್ 1, 2025 ರಿಂದ ಜನೆವರಿ 31, 2026 ರವರಗೆ ಮತ್ತು ಹಿಂಗಾರು ಋತುವಿನ ಬಿಳಿ ಜೋಳವನ್ನು ಫೆಬ್ರವರಿ 01, 2026 ರಿಂದ ಏಪ್ರೀಲ್ 30, 2026 ರವರೆಗೆ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಎಫ್.ಎ.ಕ್ಯೂ ಮಾನದಂಡಗಳನ್ವಯ ಗುಣಮಟ್ಟದ ಬಿಳಿ ಜೋಳ ಖರೀದಿಸಲಾಗುವುದು.
ರೈತರು ನೊಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರದ ಅಧಿಕಾರಿ, ಸಿಬ್ಬಂದಿಯನ್ನು ಸಂಪರ್ಕಿಸಬಹುದು ಅಥವಾ ಹುಬ್ಬಳ್ಳಿ 7829573653, ಕಲಘಟಗಿ ಮತ್ತು ಕುಂದಗೋಳ 8431371480, ಧಾರವಾಡ ಮತ್ತು ನವಲಗುಂದ 9535977495 ಗೆ ಸಂಪರ್ಕಿಸಬಹುದು.




