ಜನರ ಆಶಯದಂತೆ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ: ಎಸ್.ಸುರೇಶ್ ಕುಮಾರ್

11 months ago

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶ್ರೀರಾಮಮಂದಿರ ವಾರ್ಡ್ನನ 50ನೇ ಅಡ್ಡರಸ್ತೆಯಲ್ಲಿ ಅಮೃತ್ ನಗರೋತ್ಥನ ಯೋಜನೆಯ ಅಡಿಯಲ್ಲಿ ಮಾದರಿ ಹೈಟೆಕ್ ರಸ್ತೆ ನಿರ್ಮಾಣ ಡಾಂಬರೀಕರಣ ಕಾಮಗಾರಿಗೆ ಮಾಜಿ ಶಿಕ್ಷಣ ಸಚಿವ, ಶಾಸಕ ಎಸ್.ಸುರೇಶ್ ಕುಮಾರ್ ರವರು ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಜನರ ತೆರಿಗೆ ಸಮರ್ಪಕವಾಗಿ ಬಳಕೆಯಾಗಬೇಕು ಮತ್ತು ಜನರ ಆಶಯದಂತೆ ಕಾಮಗಾರಿ ಅನುಷ್ಠಾನವಾಗಬೇಕು. ಈ ಎರಡು ಉದ್ದೇಶಗಳಿಂದ ಪ್ರತಿಯೊಂದು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಶ್ರೀರಾಮಮಂದಿರ ವಾರ್ಡ್ 50ನೇ ಅಡ್ಡರಸ್ತೆ ಮಾದರಿ ಹೈಟೆಕ್ ರಸ್ತೆಯಾಗಿ ನಿರ್ಮಿಸಲಾಗುತ್ತಿದೆ. ನವೀನ ಫುಟ್ ಪಾತ್, ಜಗಮಗಿಸುವ ವಿದ್ಯುತ್ ದೀಪಗಳು, ಉತ್ತಮ ಡಾಂಬರೀಕರಣ ರಸ್ತೆ ಮಾಡಲಾಗುತ್ತಿದೆ. ಸಾರ್ವಜನಿಕರು ನಡೆಯಲು ಮತ್ತು ವಾಹನ ಸಂಚಾರಕ್ಕೆ ಅನುಕೂಲ ಹಾಗೂ ಮಳೆ ನೀರಿಗಾಗಿ ಇಂಗು ಗುಂಡಿಗಳು ನಿರ್ಮಿಸಲಾಗಿದೆ ಎಂದರು.

ಯಾವುದೇ ಕಾಮಗಾರಿ ಅನುಷ್ಠಾನವಾಗಲು ಜನರ ಸಹಕಾರ ಬೇಕು. ವಿನಾಕಾರಣ ರಸ್ತೆ ಅಗೆಯುವುದರಿಂದ ರಸ್ತೆಗಳು ಹಾಳಾಗುತ್ತವೆ. ನಮ್ಮ ವಾರ್ಡ್, ನಮ್ಮ ರಸ್ತೆ ಎಂಬ ಅಭಿಮಾನ ಬೆಳಸಿಕೊಳ್ಳಬೇಕು, ಸ್ವಚ್ಚ, ಸುಂದರ ರಾಜಾಜಿನಗರ ವಿಧಾನಸಭಾ ಕ್ಷೇತ್ರ ನಿರ್ಮಾಣಕ್ಕೆ ಬನ್ನಿ ಕೈಜೋಡಿಸಿ ಎಂದು ಕರೆ ನೀಡಿದರು.

ರಾಜಾಜಿನಗರ ಮಂಡಲ ಬಿಜೆಪಿ ಅಧ್ಯಕ್ಷ ಸುದರ್ಶನ್, ಪಾಲಿಕೆ ಮಾಜಿ ಸದಸ್ಯರುಗಳಾದ  ಹೆಚ್.ವಿಜಯಕುಮಾರ್, ದೀಪಾ ನಾಗೇಶ್, ಬಿಜೆಪಿ ಮುಖಂಡರುಗಳಾದ ಕೇಶವಮೂರ್ತಿ, ಗಿರೀಶ್ ಗೌಡ, ಯಶಸ್ ನಾಯಕ್, ಮಂಜುನಾಥ್, ವಿಶ್ವನಾಥ್, ವೆಂಕಟೇಶ್ ಬಾಬು, ಅಮಿತ್ ಜೈನ್, ಮೋಹನ್ ರಾಜು, ಧರ್ಮಣ್ಣ, ಪುಟ್ಟ, ಉಮೇಶ್,  ರವರು ಬಿಬಿಎಂಪಿ ಇಂಜನಿಯರ್ ಗಳು ಮತ್ತು ಸ್ಥಳೀಯ ನಾಗರಿಕರು ಹಾಜರಿದ್ದರು.

Leave a Reply