ಸಾರ್ವಜನಿಕರ ಉಪಯೋಗಕ್ಕೆ ಗುಣಮಟ್ಟದ,ಮಾದರಿ ರಸ್ತೆ ನಿರ್ಮಾಣ: ಎಸ್.ಸುರೇಶ್ ಕುಮಾರ್

3 years ago

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಉತ್ತಮ ಗುಣಮಟ್ಟದಲ್ಲಿ ಲಭಿಸಬೇಕು ಎಂದು ಪ್ರತಿಯೊಂದು ಕಾಮಗಾರಿಗಳನ್ನು ಯೋಜನೆ ರೂಪಿಸಿ ಜಾರಿಗೆ ತರಲಾಗುತ್ತಿದೆ ಎಂದು ರಾಜಾಜಿನಗರ ಶಾಸಕ ಎಸ್.ಸುರೇಶ್ ಕುಮಾರ್ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶ್ರೀ ರಾಮಮಂದಿರ ವಾರ್ಡ್ ನಲ್ಲಿ ಅಮೃತ ನಗರೋತ್ಥನ ಅನುದಾನದ ಅಡಿಯಲ್ಲಿ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿಗಳ ಪರಿಶೀಲನೆ ಮಾಡಿ ಮಾತನಾಡಿದ ಅವರು, ಜನರ ಸಮಸ್ಯೆಗಳಾದ ರಸ್ತೆ, ಕುಡಿಯುವ ನೀರು ಮತ್ತು ಪರಿಸರದ ಕುರಿತು ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳಿಗೆ ಇನ್ನು ಒಂದು ತಿಂಗಳಲ್ಲಿ ಡಾಂಬರೀಕರಣ ಮಾಡಲಾಗುವುದು. ಸಾರ್ವಜನಿಕರು ವಿನಾಕಾರಣ ರಸ್ತೆ ಅಗೆಯಬಾರದು ಮತ್ತು ಖಾಸಗಿ ಕಂಪನಿಗಳು ರಸ್ತೆ ಅಗೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಶ್ರೀರಾಮ ಮಂದಿರ ಆಟದ ಮೈದಾನವನ್ನು 6 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತಿದೆ. ಡಿಸೆಂಬರ್ ನಲ್ಲಿ ಆಟದ ಮೈದಾನವನ್ನು ಮುಖ್ಯಮಂತ್ರಿಗಳಿಂದ ಲೋಕರ್ಪಣೆ ಮಾಡಲಾಗುವುದು ಎಂದರು.

ಮಂಡಲ ಬಿ.ಜೆ.ಪಿ. ಅಧ್ಯಕ್ಷ ರಾಘವೇಂದ್ರರಾವ್, ಉಪಾಧ್ಯಕ್ಷ ಬಿ.ಎನ್.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಯಶಸ್ ನಾಯಕ್ ಮೊದಲಾದವರು ಹಾಜರಿದ್ದರು.

Leave a Reply