ಮಂಗಳೂರು; “ಮೋಕ್ಷನಿಧಿ” ಜಪ್ಪಿನಮೊಗರು ಗ್ರಾಮ ಯುವಕ ಮಂಡಲ (ರಿ.) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(D.Y.FI) ಜಪ್ಪಿನಮೊಗ್ರು ಘಟಕ ಇದರ ಸಂಯುಕ್ತ ಆಶ್ರಯದಲ್ಲಿ 25ನೇ ವರ್ಷದ ಉಚಿತ ಪುಸ್ತಕ ವಿತರಣಾ ಲಯನ್ಸ್ ಕ್ಲಬ್ ಜಪ್ಪಿನಮೊಗರು ಸಭಾಂಗಣದಲ್ಲಿ ನಡೆಯಿತು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಉದಯಚಂದ್ರ ರೈ (ಅಧ್ಯಕ್ಷರು “ಮೋಕ್ಷನಿಧಿ” ಜಪ್ಪಿನಮೊಗರು) ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ DYFI ಮಂಗಳೂರು ನಗರ ಮುಖಂಡ ಚರಣ್ ಶೆಟ್ಟಿ ಶ್ರೀ ಪುರಂದರ ಜೆ. (ಶಿಕ್ಷಣ ಬೋಧಕರು ಅಂಗಡಿಮಾರು ಜಪ್ಪಿನಮೊಗರು), ಪ್ರಶಾಂತ್ ಶೆಟ್ಟಿ (ಉದ್ಯೋಗ ಅಧಿಕಾರಿ ಎ. ಜೆ. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್), ಜಯಂತಿ ಬಿ ಶೆಟ್ಟಿ (ಮಾಜಿ ಸದಸ್ಯರು ಮಂಗಳೂರು ಮಹಾನಗರ ಪಾಲಿಕೆ), ಜಯಲಕ್ಷ್ಮಿ ಸಿ. ಕುಲಾಲ್ (ನಿರ್ದೇಶಕರು, ನಾಗುರಿ ವ್ಯವಸಾಯ ಸೇವಾ ಸಹಕಾರಿ ಸಂಘ ಮಂಗಳೂರು), ದಿನೇಶ್ ಶೆಟ್ಟಿ (ಅಧ್ಯಕ್ಷರು ಜಪ್ಪಿನಮೊಗರು ಗ್ರಾಮ ಯುವಕ ಮಂಡಲ), ಹಾಗೂ ಜೆ.ಹನೀಫ್ (ಅಧ್ಯಕ್ಷರು D.Y.F.I ಜಪ್ಪಿನಮೊಗರು ಘಟಕ) ವೇದಿಕೆಯಲ್ಲಿ ಉಪಸ್ಥಿತರಿದ್ದರು.
160 ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ 2024-2025ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡವಾರು 90ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ 13 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಾನ್ ಅಮೀನ್ ಸ್ವಾಗತಿಸಿದರು, ಮನೋಜ್ ಶೆಟ್ಟಿ ಹಾಗೂ ಸ್ವಸ್ತಿಕ್ ಎಸ್ ಶೆಟ್ಟಿ ನಿರೂಪಿಸಿದರು ಹಾಗೂ ಗಗನ್ ಪೂಜಾರಿ ವಂದನಾರ್ಪಣೆ ಮಾಡಿದರು.




