ಮಂಗಳೂರು: ಕೇರಳದ ಮಾಜಿ ಸಿಎಂ, ಸಿಪಿಐಎಂ ಪಕ್ಷದ ಪೊಲಿಟ್ ಬ್ಯುರೊ ಮಾಜಿ ಸದಸ್ಯ, ಪುನ್ನಪ್ರ ವಯಲಾರ್ ಸಹಿತ ಹಲವು ಚಾರಿತ್ರಿಕ ಹೋರಾಟಗಳನ್ನು ಮುನ್ನಡಿಸಿದ ಧೀಮಂತ ಕಮ್ಯುನಿಸ್ಟ್ ನಾಯಕ ವಿ ಎಸ್ ಅಚ್ಯುತಾನಂದನ್ ಅವರಿಗೆ ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ವತಿಯಿಂದ, ಜಿಲ್ಲಾ ಕಚೇರಿ ಎಕೆಜಿ ಭವನದಲ್ಲಿ ಶ್ರದ್ದಾಂಜಲಿ ಸಭೆ ನಡೆಸಲಾಯಿತು.
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಹಿರಿಯ ಮುಖಂಡ ವಾಸುದೇವ ಉಚ್ಚಿಲ್ ಶ್ರದ್ದಾಂಜಲಿ ನುಡಿಗಳನ್ನು ಆಡಿದರು, ವಿ ಎಸ್ ಅಚ್ಯುತಾನಂದನ್ ರ ಮಹತ್ವದ ಕೊಡುಗೆಗಳನ್ನು ಸ್ಮರಿಸಿದರು.
ಮಾಜಿ ಕಾರ್ಪೊರೇಟರ್ ಗಳಾದ ಜಯಂತಿ ಬಿ ಶೆಟ್ಟಿ, ದಯಾನಂದ ಶೆಟ್ಟಿ, ಮುಂದಾಳುಗಳಾದ ಸುಕುಮಾರ್ ತೊಕ್ಕೊಟ್ಟು, ಜೆ ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ವಸಂತಿ ಕುಪ್ಪೆಪದವು, ಶೇಖರ್ ಕುಂದರ್, ಕೃಷ್ಣಪ್ಪ ಸಾಲಿಯಾನ್, ಮಹಾಬಲ ದೆಪ್ಪಲಿಮಾರ್, ಪ್ರಮೀಳಾ ಕೆ, ಅಸುಂತಾ ಡಿ ಸೋಜ, ಪ್ರಮೀಳಾ ದೇವಾಡಿಗ, ನೋಣಯ್ಯ ಗೌಡ, ರವಿಚಂದ್ರ ಕೊಂಚಾಡಿ ಮತ್ತಿತರರು ಹಾಜರಿದ್ದರು.









