ಸಾಮಾನ್ಯವಾಗಿ ಕುಟುಂಬದಲ್ಲಿ ಹುಟ್ಟಿ ತನ್ನ ಸ್ವಂತ ಪರಿಶ್ರಮ ಇದರ ಮೂಲಕ ಪ್ರಭಾವವನ್ನ ಮೂಡಿಸಿಕೊಂಡು, ಇಂದು ಕರ್ನಾಟಕ ರಾಜ್ಯದಲ್ಲಿ ಪರಿಣಾಮಕಾರಿಯಾದ ನಾಯಕರಾಗಿ ಹೊರಹೊಮ್ಮಿದ್ದಾರೆ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಹಿಡಿದಂತಹ ಕೆಲಸವನ್ನು ಎಷ್ಟೇ ಕಷ್ಟವಾದರೂ ವಿರೋಧಗಳು ಬಂದರು ಅವುಗಳನ್ನ ಮೆಟ್ಟಿ ಸಾಧಿಸುತ್ತಾರೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಪಾವಗಡದಲ್ಲಿ ಏಷ್ಯಾ ಖಂಡದಲ್ಲಿಯೇ ಅತ್ಯಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ಸೌರಶಕ್ತಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ.
ಇಂದು ಬೆಂಗಳೂರಿಗೆ ಅದರ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಾಯಿಸಿ ಗ್ರೇಟರ್ ಬೆಂಗಳೂರು ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿಯೂ ಇವರು ಎದುರಿಸಿದ ಸವಾಲುಗಳು ಹತ್ತಾರು.
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಸಂಕಷ್ಟದ ಸಮಯದಲ್ಲಿ ವರಿಷ್ಠರು ಹೇಳಿದ ಆದೇಶಗಳನ್ನ ಪಾಲಿಸುವ ಕಾರಣದಿಂದಾಗಿ ಹಲವಾರು ರೀತಿಯ ಸಂಕಷ್ಟಗಳನ್ನ ಎದುರಿಸಿ, ಇವುಗಳೆಲ್ಲವನ್ನು ಧೈರ್ಯದಿಂದ ನಿಂತು ಸವಾಲಾಗಿ ಸ್ವೀಕರಿಸಿ ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ನವ ಚೈತನ್ಯವನ್ನು ಮೂಡಿಸಿದ ನಾಯಕರು ಇವರು.
2023ರ ಮುನ್ನ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಒಂದು ರೀತಿಯಲ್ಲಿ ಆತಂಕದ ವಾತಾವರಣವಿತ್ತು. ಇದೇ ಸಮಯದಲ್ಲಿ ಕೊರೋನ ಸಾರ್ವಜನಿಕರನ್ನ ಬಾಧಿಸುತ್ತಿತ್ತು ಯ. ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದ್ದ ಇವರು ಕಾರ್ಯಕರ್ತರಲ್ಲೂ ಉತ್ಸಾಹವನ್ನು ತುಂಬಿ ಹತ್ತು ಹಲವರು ಕಾರ್ಯಕ್ರಮಗಳ ಮೂಲಕ ಸದಾ ಕಾಲ ಪಕ್ಷದ ಎಲ್ಲಾ ಹಂತದ ನಾಯಕರನ್ನು ಕ್ರಿಯಾಶೀಲರನ್ನಾಗಿಸಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಾಕಷ್ಟು ಶ್ರಮಿಸಿರುತ್ತಾರೆ.
ಕರ್ನಾಟಕ ರಾಜ್ಯದಲ್ಲಿ ಸಣ್ಣ ವಯಸ್ಸಿನಲ್ಲಿಯೇ ವಿಧಾನಸಭೆಯ ಸದಸ್ಯರಾಗಿ ಸತತವಾಗಿ 8 ಬಾರಿ ಆಯ್ಕೆಯಾಗಿ ಹಲವಾರು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವರಾಗಿ ಅಪಾರವಾದ ಆಡಳಿತಾತ್ಮಕವಾದ ಅನುಭವವನ್ನ ಪಡೆದುಕೊಂಡು, ಅವುಗಳನ್ನ ಅನುಷ್ಠಾನಗೊಳಿಸುವಲ್ಲಿಯೂ ತಮ್ಮದೇ ಆದ ಕಾರ್ಯ ಶೈಲಿಯನ್ನ ರೂಡಿಸಿಕೊಂಡಿದ್ದಾರೆ.
ಇವರು ಶ್ರಮಕ್ಕೆ ಮತ್ತೊಂದು ಹೆಸರು, ಸದಾ ಕಾಲ ಒಂದಲ್ಲ ಒಂದು ಚಟುವಟಿಕೆಯಲ್ಲಿ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ವಿಶ್ರಾಂತಿ ಯಾವಾಗ ಪಡೆಯುತ್ತಾರೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಇವರಷ್ಟು ಪ್ರವಾಸವನ್ನು ಮಾಡಲು ಬಹಳಷ್ಟು ನಾಯಕರಿಂದ ಸಾಧ್ಯವಿಲ್ಲ. ಕರ್ನಾಟಕ ರಾಜ್ಯದಾದ್ಯಂತ ಹಳ್ಳಿಹಳ್ಳಿಗೆ ಸುತ್ತಿ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನ ಹೊಂದಿರುವಂತಹ ಅಪರೂಪದ ನಾಯಕರು. ತಾವು ಕಂಡ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ತಮ್ಮದೇ ಆದಂತಹ ತಂತ್ರಗಾರಿಕೆಯನ್ನು ರೂಪಿಸುವಲ್ಲಿಯೂ ಇವರು ನಿಪುಣರು.
ಇವರು ಹಮ್ಮಿಕೊಂಡಂತಹ ಮೇಕೆದಾಟು ಯೋಜನೆಯ ಕಾರ್ಯಕ್ರಮ, ಇವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನವನ್ನ ಬಳಸಿಕೊಂಡು ಮನೆ ಮನೆಗೆ ಕಾರ್ಯಕ್ರಮವನ್ನು ಕೊರೋನಾ ಸಂದರ್ಭದಲ್ಲಿ ತಲುಪಿಸುವಂತಹ ವ್ಯವಸ್ಥೆ ಇದನ್ನು ರೂಪಿಸಿದ್ದು, ಜೊತೆಗೆ ದೇಶಕ್ಕೆ ಸ್ವಾತಂತ್ರ ಬಂದ 75 ವರ್ಷಗಳ ಹಿನ್ನೆಲೆಯಲ್ಲಿ ರೂಪಿಸಿದಂತಹ ವಿನೂತನ ಕಾರ್ಯಕ್ರಮ, ಇತ್ತೀಚಿಗೆ ಗಾಂಧಿ ನೂರರ ನೆನಪು ಎಂಬ ಬೆಳಗಾವಿಯ ಕಾರ್ಯಕ್ರಮ, ಇವುಗಳೆಲ್ಲವೂ ಸಹ ಇವರ ಸಂಘಟನೆ ಇವರ ಸಾಮರ್ಥ್ಯ ಇವರ ಚತುರತೆಗೆ ಸಾಕ್ಷಿಯಾಗಿದೆ.
ಕರ್ನಾಟಕ ರಾಜ್ಯದಲ್ಲಿ ಉತ್ಸಾಹದಿಂದ ದುಡಿಯುವಂತಹ ನಾಯಕತ್ವದ ವಿಚಾರದಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಉಪಮುಖ್ಯಮಂತ್ರಿಯಾಗಿ ಬೆಂಗಳೂರು ನಗರದ ಉಸ್ತುವಾರಿಯಾಗಿ ಬೆಂಗಳೂರು ನಗರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನವನ್ನು ಸೆಳೆಯುವ ಸಲುವಾಗಿ ಮುಂದಾಲೋಚನೆಯ ದೂರದೃಷ್ಟಿತ್ವದ ಪರಿಣಾಮವಾದ ಹಲವಾರು ಯೋಜನೆಗಳನ್ನ ರೂಪಿಸಿ ಅವುಗಳನ್ನ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಹಲವಾರು ಹೆಜ್ಜೆಗಳನ್ನು ಇಟ್ಟಿದ್ದಾರೆ. ಇವರ ಬೆಂಗಳೂರಿನ ಮತ್ತು ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಯ ಕನಸು ನನಸಾಗಿಸಲು ಇವರಿಗೆ ಭಗವಂತ ಎಲ್ಲ ರೀತಿಯ ಶಕ್ತಿಯನ್ನು ಮುಂದಿನ ದಿನಗಳಲ್ಲಿ ನೀಡಲಿ ಎಂದು ಸಮಸ್ತ ಕಾರ್ಯಕರ್ತ ಬಂಧುಗಳು ಮತ್ತು ನಾಗರೀಕರ ಪರವಾಗಿ ಕೋರೋಣ.
– ಕೆ ಎಸ್ ನಾಗರಾಜ್, ಬೆಂಗಳೂರು




