ಪತ್ರಿಕಾ ವರದಿ ಓದಿ ಈ ಪ್ರತಿಕ್ರಿಯೆ. ಅಲ್ಲಾರಿ, ಸಾಹಿತ್ಯ ಚಟುವಟಿಕೆಗಳ ಬಗ್ಗೆ, ಪರಿಷತ್ ಪ್ರಕಟಣೆಗಳ ಬಗ್ಗೆ, ಪರಿಷತ್ ಪತ್ರಿಕೆಗಳ ಬಗ್ಗೆ, ನಿಘಂಟು ಪರಿಷ್ಕೃತದ ಯೋಜನೆ ಬಗ್ಗೆ, ಕಾವ, ಜಾಣ, ರತ್ನ ಮೊದಲಾದ ಪರೀಕ್ಷೆ, ಪಠ್ಯದ ಬಗ್ಗೆ, ಸಾಹಿತಿಗಳ ಶತಮಾನೋತ್ಸವದ ಬಗ್ಗೆ, ಯುವ ಬರಹಗಾರರಿಗೆ ಶಿಬಿರ, ತರಬೇತಿ ಇತ್ಯಾದಿ, ಪೂರ್ವಸೂರಿ ಸಾಹಿತಿಗಳ ಕುರಿತ ವಿಚಾರಸಂಕಿರಣಗಳ ಬಗ್ಗೆ ಏನೊಂದು ಅರಿವಿಲ್ಲದ “ಅಸಾಹಿತಿ” ತನ್ನ ಸರ್ವಾಧಿಕಾರದ ಅಹಂಕಾರದ ಮಾತುಗಳನ್ನು ಮಾಧ್ಯಮದೆದುರು ಆಡಿದ್ದು ಸ್ಪಷ್ಟವಾಗಿದೆ. ಇದು ಖೇದದ ವಿಚಾರ. ಈತನ ದುರಹಂಕಾರಕ್ಕೆ ತೆರೆಬೀಳದಿದ್ದರೆ ಮತ್ತೆ ನೋಟೀಸು, ಕೋರ್ಟು ಅಂತ ಪರಿಷತ್ ಹಣ ಕೊಳ್ಳೆಯಾಗುತ್ತೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಇದುವರೆವಿಗೆ ಪರಿಷತ್ತು ನೋಟೀಸಿಗೆ, ವಕೀಲರಿಗೆ ಎಷ್ಟು ಹಣ ಖರ್ಚು ಮಾಡಿದೆ? ಸಾರ್ವಜನಿಕ ಲೆಕ್ಕ ಕೊಡಲಿ. ಈತ ಸೇಡು ತೀರಿಸಲೆಂದೆ ಬಂದಂತೆ ಕಾಣುತ್ತೆ. ಈ ಕೆಟ್ಟಚಾಳಿ ಬಿಟ್ಟರೆ ಮನುಷ್ಯನಾಗುತ್ತಾನೆ. ಇಲ್ಲವಾದರೆ ಬೈಲಾ ತಿದ್ದುಪಡಿ ಕನವರಿಕೆಯಲ್ಲಿ ಮನೋರೋಗಿ ಆಗುವ ಸಾಧ್ಯತೆ ಸ್ಪಷ್ಟವಾಗಿ ಗೋಚರ ಆಗುತ್ತಿದೆ.
ಪರಿಷತ್ತು ಕಾರ್ಯಚಟುವಟಿಕೆ ಬಗ್ಗೆ ಆಜೀವ ಸದಸ್ಯರು ಆಗಿರುವ ಯಾರೂ ಪ್ರಶ್ನಿಸಬಾರದು, ರಾಜಕಾರಣದ ಆಸಕ್ತ ವ್ಯಕ್ತಿಯೂ ಮಾತಾಡಬಾರದು ಎಂದರೆ ಹೇಗೆ? (ಮಂಡ್ಯ ಶ್ರೀಕಂಠೆಗೌಡರ ಬಗ್ಗೆ ಆಕ್ಷೇಪಿಸಿದ್ದನ್ನು ಖಂಡಿಸುವೆ.), ಯಾರೊಬ್ಬರೂ ತನ್ನನ್ನು ಪ್ರಶ್ನಿಸಬಾರದು ಎಂಬುದು ಅಹಂ, ಸರ್ವಾಧಿಕಾರ ಅಲ್ಲವೆ? ಈತನಿಗೆ ಪ್ರಜಾಪ್ರಭುತ್ವದ ಪಾಠ ಯಾರಾದರೂ ನಿವೃತ್ತ ನ್ಯಾಮೂರ್ತಿಗಳೆ ಹೇಳಬೇಕು. ಮಾತೆತ್ತಿದರೆ ನಿವೃತ್ತ ನ್ಯಾಯಮೂರ್ತಿಗಳ ಹೆಸರೇಳಿ ಅವರ ಪಾವಿತ್ರ್ಯ ಬದುಕಿಗೆ ಮಸಿ ಬಳಿವ ಕೆಲಸ ನಿಲ್ಲಿಸಲಿ.
ಏನಾದರೂ ಆಗು ಮೊದಲು ಮಾನವನಾಗು – ಕಾವ್ಯಾನಂದ
– ಆರ್ ಜಿ ಹಳ್ಳಿ ನಾಗರಾಜ್, ಹಿರಿಯ ಪತ್ರಕರ್ತರು




