ಬೂತ್ ಸಮಿತಿಗಳನ್ನು ಬಲಿಷ್ಠಗೊಳಿಸಿ ತಕ್ಷಣ ಚುನಾವಣಾ ಕೆಲಸಕಾರ್ಯಗಳಿಗೆ ಚುರುಕು ನೀಡಿ: ಅಪ್ಸರ್ ಕೊಡ್ಲಿಪೇಟೆ

11 months ago

ಉಡುಪಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯ ವಿಶೇಷ ಸಭೆಯು ಜಿಲ್ಲಾಧ್ಯಕ್ಷರಾದ ಆಸೀಫ್ ಕೋಟೇಶ್ವರ್ ರವರ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಚುನಾವಣಾ ಉಸ್ತುವಾರಿ ಅಪ್ಸರ್ ಕೊಡ್ಲಿಪೇಟೆ ಅವರ ಸಮ್ಮುಖದಲ್ಲಿ ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಪ್ಸರ್ ಕೊಡ್ಲಿಪೇಟೆ, ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಪಾಲ್ಗೊಂಡು ರಾಜಕೀಯವಾಗಿ ಪಕ್ಷವನ್ನು ಬಲಿಷ್ಠ ಗೊಳಿಸಿ ಪಕ್ಷಕ್ಕೆ ರಾಜಕೀಯ ಶಕ್ತಿಯನ್ನು ತುಂಬುವ ಕೆಲಸ ಮಾಡಬೇಕಾಗಿದೆ ಎಂದು ಕರೆನೀಡಿದರು.

ಮುಂಬರಲಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಚರ್ಚೆ ಮತ್ತು ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಬೂತ್ ಮಟ್ಟದ ಕಾರ್ಯಕರ್ತರ ಸಭೆಗಳನ್ನು ನಡೆಸುವ ಮೂಲಕ ಬೂತ್ ಸಮಿತಿಗಳನ್ನು ಬಲಿಷ್ಠಗೊಳಿಸಿ ತಕ್ಷಣ ಚುನಾವಣಾ ಕೆಲಸಕಾರ್ಯಗಳಿಗೆ ಚುರುಕು ನೀಡುವಂತೆ ನಿರ್ದೇಶನ ನೀಡಿದರು.

ಮುಂಬರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಈ ಕೆಳಗಿನ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ರಾಜ್ಯ ಸಮಿತಿಗೆ ಈ ಕೆಳಗಿನಂತೆ ಪ್ರಸ್ತಾವನೆ ಕಳುಹಿಸಲು ತೀರ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು

1) 22 -ಪಡುಬಿದ್ರಿ- ನಡ್ಸಾಲು ಕ್ಷೇತ್ರ
2) 21-ಎಲ್ಲೂರು, ಬೆಳಪು ಕ್ಷೇತ್ರ

ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು

1) ಗಂಗೊಳ್ಳಿ
2) ಕಾವ್ರಾಡಿ, ಗುಲ್ವಾಡಿ, ಆಂಪರ್
3) ಶೀರೂರ್
4) ಪಡುತೋನ್ಸೆ
5) ಕಲ್ಯಾಣಪುರ-ಮೂಡುತೋನ್ಸೆ
6) ತೆಂಕನಿಡಿಯೂರು, ಕೆಳಾರ್ಕಲಬೆಟ್ಟು
7)ಉದ್ಯಾವರ
8) ಬಡಾ ಗ್ರಾಮ, ಎರ್ಮಾಳ್ ತೆಂಕ
9) ನಡ್ಸಾಲ್ ಗ್ರಾಮ
10) ಬೆಳಪು, ಎಲ್ಲೂರ್
11) ಹೆಜಮಾಡಿ

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಮೂಳೂರು, ಪ್ರಧಾನ ಕಾರ್ಯದರ್ಶಿಗಳಾದ ರಜಾಕ್, ಶಂಶುದ್ದೀನ್ ಸಮಿತಿಯ ಎಲ್ಲಾ ಸದಸ್ಯರು ಮತ್ತು ವಿಧಾನಸಭಾ ಕ್ಷೇತ್ರ ಸಮಿತಿಯ ನಾಯಕರು ಹಾಜರಿದ್ದರು.

Leave a Reply