ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಭಯೋತ್ಪಾದಕರು ಗುಂಡಿಟ್ಟು ಹತ್ಯೆ ಮಾಡಿದ ಸಂದರ್ಭದಲ್ಲಿ ನಮ್ಮ ದೇಶದ ಅನೇಕ ಬಿಜೆಪಿ ನಾಯಕರು ಅಬ್ಬರದ ಮಾತುಗಳನ್ನಾಡುತ್ತಿದ್ದಾರೆ. 1999ರಲ್ಲಿ ಪ್ರಮುಖ ಭಯೋತ್ಪಾದಕರನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬಂದದ್ದು ಯಾರ ಕಾಲದಲ್ಲಿ ಎಂಬುದು ನೆನಪಿದೆಯೇ?
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
2000 ಇಸವಿಯಲ್ಲಿ ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕರು ದಾಳಿ ಮಾಡಿರುತ್ತಾರೆ. ಇದು ಯಾರ ಕಾಲದಲ್ಲಿ ಆಯಿತು ಎನ್ನುವುದು ನೆನಪಿದೆಯೇ?
2016ರಲ್ಲಿ ಪಟಾಣ್ ಕೋಟ್ನಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸವನ್ನು ಮೆರೆದಿರುತ್ತಾರೆ. ಹಲವಾರು ಸಾವುಗಳು ಸಂಭವಿಸಿರುತ್ತದೆ. ಇದು ಯಾರ ಕಾಲದಲ್ಲಿ ಎಂಬುದು ನೆನಪಿದೆಯೇ?
2019ರಲ್ಲಿ ಪುಲ್ವಾಮದಲ್ಲಿ ನಮ್ಮ ದೇಶದ ಹೆಮ್ಮೆಯ ಸೈನಿಕರು ಭಯೋತ್ಪಾದಕರ ಕೃತ್ಯಕ್ಕೆ ಪ್ರಾಣವನ್ನು ಕಳೆದುಕೊಂಡರು. ಇದು ಯಾರ ಕಾಲದಲ್ಲಿ ನಡೆದದ್ದು ಎಂಬುದು ನೆನಪಿದೆಯೇ?
ಇದೇ ರೀತಿಯಲ್ಲಿ ಅಮರನಾಥ ಯಾತ್ರಿಕರ ಮೇಲೆ ಹಲವಾರು ಸಂದರ್ಭಗಳಲ್ಲಿ ದಾಳಿಯಾಗಿ ಯಾತ್ರಿಕರು ಸಾವನ್ನಪ್ಪಿರುತ್ತಾರೆ. ಇವುಗಳು ಯಾರ ಕಾಲದಲ್ಲಿ ಆಯಿತು ಎನ್ನುವುದು ನೆನಪಿದೆಯೇ?
2019ರಲ್ಲಿ ಪುಲ್ವಾಮದಲ್ಲಿ ಆದಂತಹ ಘಟನೆಯ ಯಾವ ರೀತಿಯ ತನಿಖೆಯಾಗಿದೆ? ಯಾರ ಮೇಲೆ ಕ್ರಮಗಳಾಗಿದೆ ಎಂಬ ವಿಚಾರವನ್ನು ಮೊದಲು ಬಹಿರಂಗಪಡಿಸಿ.
ಪಹಲ್ಗಾಮ್ ನಲ್ಲಿ ನಡೆದಿರುವಂತಹ ಹೀನ ಕೃತ್ಯ ತನಿಕಯಾಗಬೇಕು, ಇಲ್ಲಿ ನಡೆದಿರುವ ಭದ್ರತಾ ವೈಫಲ್ಯಕ್ಕೆ ಹೊಣೆಗಾರರು ಯಾರು, ಗುಪ್ತಚರ ಇಲಾಖೆಯ ವೈಫಲ್ಯದ ವಿಚಾರದಲ್ಲೂ ಮಹತ್ವದ ತನಿಖೆಯಾಗಬೇಕು. ಈ ಪ್ರಕರಣಗಳಿಗೆ ಕಾರಣಕರ್ತರಾದ ವ್ಯಕ್ತಿಗಳ ಮೇಲೆ ಕ್ರಮಗಳಾಗಬೇಕು.
ಕೇಂದ್ರ ಸರ್ಕಾರ ವಿಶೇಷವಾಗಿ ಬಿಜೆಪಿ ತನ್ನ ಭದ್ರತಾ ವೈಫಲ್ಯ ಮತ್ತು ಗುಪ್ತಚರ ಇಲಾಖೆಯ ವಿಫಲತೆಯನ್ನ ಮುಚ್ಚಿಕೊಳ್ಳುವ ಸಲುವಾಗಿ ತಮ್ಮ ನಾಯಕರುಗಳ ಮೂಲಕ ಇಲ್ಲ ಸಲ್ಲದ ವಿಚಾರಗಳನ್ನ ಹೇಳಿಸುತ್ತಾ ದೇಶದ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿ ಸರ್ಕಾರಗಳಿದ್ದ ಸಂದರ್ಭದಲ್ಲಿ ಅನೇಕ ಬಾರಿ ನಾಗರೀಕರ ಜೀವಗಳಿಗೆ ಹಾನಿಯಾಗಿ ಸಾವು ನೋವುಗಳು ಸಂಭವಿಸಿದಾಗ ಅಬ್ಬರದ ಮಾತುಗಳನ್ನಾಡುವುದು. ದೊಡ್ಡ ದೊಡ್ಡ ಘೋಷಣೆಗಳನ್ನ ಮಾಡುವುದು ಈ ಹಿಂದೆಯೂ ನಡೆದಿದೆ. ಈಗಲೂ ಸಹ ಈ ಪ್ರಕರಣ ಕೇವಲ ಅಬ್ಬರದ ಮಾತುಗಳಿಗೆ ಮತ್ತು ಭಾವನಾತ್ಮಕವಾದಂತ ಮಾತುಗಳಿಗೆ ಸೀಮಿತವಾಗಬಾರದು.
– ಕೆ ಎಸ್ ನಾಗರಾಜ್, ಬೆಂಗಳೂರು




