ಮಂಗಳೂರು: ಜನಪರ ಚಿಂತಕರೂ, ಹೋರಾಟಗಾರರೂ, ಮಾಜಿ ಉಪಮೇಯರ್, ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಮುಖಂಡ ಮಹಮ್ಮದ್ ಕುಂಜತ್ತಬೈಲ್ ಅವರ ಅಗಲಿಕೆ ದ.ಕ.ಜಿಲ್ಲೆಯ ಜನಪರ ಚಳುವಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಸುನಿಲ್ ಕುಮಾರ್ ಬಜಾಲ್ ಕಂಬನಿ ಮಿಡಿದಿದ್ದಾರೆ.
- ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೋಸ್ಟ್ ಕುರಿತು ಯೋಗೇಶ್ ಮಾಸ್ಟರ್ ಸ್ಪಷ್ಟೀಕರಣ
- ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗಾಗಿ ದೀರ್ಘಾವಧಿ ಯೋಜನೆ: ಕೃಷ್ಣ ಬೈರೇಗೌಡ
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
ಯಾವುದೇ ಜನವಿಭಾಗದ ಪ್ರಶ್ನೆಗಳು ಎದುರಾಗಲಿ, ಅಲ್ಲಿ ಮಹಮ್ಮದ್ ಕುಂಜತ್ತಬೈಲ್ ಹಾಜರಿದ್ದು, ಆ ಹೋರಾಟಕ್ಕೆ ಬೆಂಬಲ ನೀಡುವುದು ಮಾತ್ರವಲ್ಲದೆ ಮಾರ್ಗದರ್ಶನವನ್ನು ಕೂಡ ನೀಡುತ್ತಿದ್ದರು. ಜಾತ್ಯತೀತ ನಿಲುವಿನ ಗಟ್ಟಿ ಧ್ವನಿಯಾಗಿದ್ದ ಮಹಮ್ಮದ್ ಅವರು ಸದಾ ಸೌಹಾರ್ದತೆಗಾಗಿ ಮಿಡಿಯುವ ಅತ್ಯಂತ ಮಾನವೀಯ ಹೃದಯವುಳ್ಳವರಾಗಿದ್ದರು ಎಂದು ನೆನೆದಿದ್ದಾರೆ.
ಪ್ರಾರಂಭದ ಹಂತದಲ್ಲಿ ಜನತಾದಳದಲ್ಲಿದ್ದ ಮಹಮ್ಮದ್ ಅವರು ಬಳಿಕ ಕಾಂಗ್ರೆಸ್ ಪಕ್ಷದಲ್ಲಿದ್ದು ಅಲ್ಲಿಯೂ ಸದಾ ಅನ್ಯಾಯ ಅನಾಚಾರ ಅಕ್ರಮ ಭ್ರಷ್ಟಾಚಾರದ ವಿರುದ್ದ ಪ್ರಬಲ ಧ್ವನಿ ಮೊಳಗಿಸುವ ಮೂಲಕ ಕಾಂಗ್ರೆಸ್ ನೊಳಗಿನ ಕಮ್ಯುನಿಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಎಡಪಂಥೀಯ ವಿಚಾರಧಾರೆಯ ಯಾವುದೇ ಕಾರ್ಯಕ್ರಮ ಹೋರಾಟಗಳು ನಡೆಯಲಿ ಅಲ್ಲಿ ಮಹಮ್ಮದ್ ರವರು ಸದಾ ಹಾಜರಿರುತ್ತಿದ್ದರು ಎಂದಿದ್ದಾರೆ.
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಮಹಮ್ಮದ್ ಅವರು ಪ್ರಾರಂಭದ ಹಂತದಲ್ಲಿ ಕಾರ್ಪೊರೇಟರ್ ಆಗಿ ಗೆಲುವು ಸಾಧಿಸುವಲ್ಲಿ DYFI ಸದಾ ಅವರ ಬೆಂಗಾವಲಾಗಿ ನಿಂತಿತ್ತು. ಸಮಾಜದ ಅತ್ಯಂತ ಶೋಷಿತ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಮಹಮ್ಮದ್ ರವರ ಅಗಲುವಿಕೆ ಜನಪರ ಚಳುವಳಿಗೆ ತುಂಬಲಾರದ ನಷ್ಟವಾಗಿದೆ. ಇನ್ನು ಮುಂದೆ ಮಹಮ್ಮದ್ ಕುಂಜತ್ತಬೈಲ್ ನೆನಪು ಮಾತ್ರ ಎಂದಿದ್ದಾರೆ.




