ಮಂಗಳೂರು ಹ್ಯಾಮಿಲ್ಟನ್ ವ್ರತ್ತದಲ್ಲಿ ಸೌಹಾರ್ದ ದೀಪಾವಳಿಯ ಸಂಭ್ರಮ

3 years ago

ಮಂಗಳೂರು ಹ್ಯಾಮಿಲ್ಟನ್ ವ್ರತ್ತದಲ್ಲಿ ಸೌಹಾರ್ದ ದೀಪಾವಳಿಯ ಸಂಭ್ರಮ

ಮಂಗಳೂರು: ದೇಶಾದ್ಯಂತ ಆಚರಿಸಲ್ಪಡುವ ಬೆಳಕಿನ ಹಬ್ಬ ದೀಪಾವಳಿಯನ್ನು ಸೌಹಾರ್ದ ದೀಪಾವಳಿಯನ್ನಾಗಿ ಆಚರಿಸಬೇಕೆಂಬ ತೀರ್ಮಾನದ ಭಾಗವಾಗಿ ಸಮಾನ ಮನಸ್ಕರು ಮಂಗಳೂರು ಇದರ ಆಶ್ರಯದಲ್ಲಿ ನಗರದ ಸ್ಟೇಟ್ ಬ್ಯಾಂಕ್ ಬಳಿಯಲ್ಲಿರುವ ಹ್ಯಾಮಿಲ್ಟನ್ ವ್ರತ್ತದಲ್ಲಿ ಸೌಹಾರ್ದ ದೀಪಾವಳಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ಸರ್ವ ಜನತೆಯ ಮನೆ ಮನ ಬೆಳಗಿಸುವ ಹಬ್ಬವಾದ ದೀಪಾವಳಿಯು ಅಜ್ಞಾನ, ಅಂಧಶ್ರದ್ದೆ, ದ್ವೇಷ ತುಂಬಿದ ಕತ್ತಲೆಯನ್ನು ಹೋಗಲಾಡಿಸಿ, ವಿಜ್ಞಾನ, ವೈಜ್ಞಾನಿಕ ಮನೋಭಾವ, ಪ್ರೀತಿ ತುಂಬಿದ ಬೆಳಕನ್ನು ಮೂಡಿಸಬೇಕಾಗಿದೆ. ಆ ಮೂಲಕ ಸೌಹಾರ್ದತೆ ಮಾನವೀಯತೆ ಬೆಳಗಿಸಬೇಕೆಂಬ ಆಶಯದೊಂದಿಗೆ ಜರುಗಿದ ದೀಪಾವಳಿ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, DYFI ನಾಯಕ ಮುನೀರ್ ಕಾಟಿಪಳ್ಳ, ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ತಬೈಲ್, ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್, ಕಾರ್ಮಿಕ ನಾಯಕ ಸುನಿಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಸಮರ್ಥ್ ಭಟ್, ಯುವಜನ ನಾಯಕ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಮನೋಜ್ ವಾಮಂಜೂರು, ತಯ್ಯೂಬ್ ಬೆಂಗರೆ, ಸಾಮಾಜಿಕ ಚಿಂತಕ ಅಸುಂತ ಡಿಸೋಜ, ಕ್ವೀನಿ ಪರ್ಸಿ ಆನಂದ್, ಶಾಹಿರಾ ಮರಿಯಂ, ಶಹನಾಜ್, ಸಾಮಾಜಿಕ ಕಾರ್ಯಕರ್ತ ಆರೀಫ್, ಸಾಲಿ, ಸಿರಾಜ್, ಸತ್ತಾರ್, ದಿವಾಕರ ಬೋಳೂರು, ಕಾಸಿಂ, ಉದ್ಯಮಿ ಮುತ್ತಲೀಫ್ ಮುಂತಾದವರು ಹಾಜರಿದ್ದರು.
ಖ್ಯಾತ ಹಾಡುಗಾರ್ತಿ ಮೇಘನಾ ಕುಂದಾಪುರರವರಿಂದ ಸೌಹಾರ್ದ ಹಾಡುಗಳು ಪ್ರಸ್ತುತಗೊಂಡವು. ಬಳಿಕ ಪಟಾಕಿ ಸಿಡಿಸಿ ಸಿಹಿತಿಂಡಿ ಹಂಚಲಾಯಿತು.

 

Leave a Reply