ಮಂಡ್ಯ: ಸರ್ಕಾರಿ ನೌಕರಿ ಪ್ರತಿಯೊಬ್ಬ ನಿರುದ್ಯೋಗಿಯ ಕನಸು. ಸರ್ಕಾರದ ನೌಕರಿ ಸಿಕ್ಕರೆ ಸಾಕು ಜೀವನ ಸುಭದ್ರ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಹೀಗಾಗಿ ಸರ್ಕಾರಿ ನೌಕರಿ ಪಡೆಯಲು ನಿರುದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ.
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
- ದಶಕ ಮೀರಿದ ಕಾನೂನು ಹಾದಿ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
- ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು: ಮಧು ಬಂಗಾರಪ್ಪ
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
ಇಂಥ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡ ಮಂಡ್ಯ ನಗರದ ತಾವರೆಗೆರೆಯ ಹೆಚ್.ಸಿ.ವೆಂಕಟೇಶ್ ನೂರಾರು ಜನರಿಗೆ ಪಂಗನಾಮ ಹಾಕಿದ್ದಾನೆ.
ಈ ವೆಂಕಟೇಶ್ ಅಂತಿಂಥ ಸಾಮಾನ್ಯ ವಂಚಕನಲ್ಲ. ಈತನ ಬಳಿ ಕೆಪಿಎಸ್ಸಿ, ಅಬಕಾರಿ, ವಾಣಿಜ್ಯ ತೆರಿಗೆ, ನಗರಾಭಿವೃದ್ಧಿ ಇಲಾಖೆ, ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪತ್ರ ಸ್ಥಳ ನಿಯೋಜಿಸಿ ಆದೇಶ ಹೊರಡಿಸಿರುವ ನಕಲಿ ನೇಮಕಾತಿ ಪತ್ರಗಳು, ದಾಖಲೆಗಳು, ಹಾಜರಾತಿ ಪುಸ್ತಕಗಳು, ಸರ್ಕಾರದ ಲೋಗೋ, ನಕಲಿ ಐಡಿ ಕಾರ್ಡ್, ಟ್ಯಾಗ್ ಗಳ ರಾಶಿಯೇ ಸಿಕ್ಕಿವೆ.
ಕಣ್ಣು ಮುಚ್ಚಿ ತೆರೆಯುವದರೊಳಗೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳ ಹೆಸರು ಹೇಳಿಕೊಂಡು ವಂಚನೆ ಎಸಗಿದ್ದಾನೆ.
ಉದ್ಯೋಗದ ಬೇಟೆಯಲ್ಲಿರುವವರನ್ನು ಸಂಪರ್ಕಿಸುವ ಈತ ಅವರು ಬಯಸುವ ಇಲಾಖೆಗೆ ನೇಮಕ ಮಾಡಿ ಆದೇಶ ಮತ್ತು ಕೆಲಸ ನಿಯೋಜನೆ ಪತ್ರ ನೀಡಿ, ಹಣ ಪಡೆದು ನಾಪತ್ತೆಯಾಗುತ್ತಾನೆ. ಈತ ಕಳುಹಿಸಿದ ನೇಮಕಾತಿ ಪತ್ರ ಮತ್ತು ಕೆಲಸ ನಿಯೋಜನೆಯ ಪತ್ರ ಪಡೆದು ಸಂಬಂಧಪಟ್ಟ ಇಲಾಖೆಗೆ ಹೋದಾಗಲೇ ತಾವು ಮೋಸ ಹೋಗಿರುವುದು. ಉದ್ಯೋಗಾಕಾಂಕ್ಷಿಗಳಿಗೆ ಅರಿವಾಗುತ್ತದೆ.
ಈ ರೀತಿ ಮೋಸ ಹೋದ ಅನೇಕರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಇದೀಗ ವೆಂಕಟೇಶನನ್ನು ಬಂಧಿಸಿದ್ದಾರೆ. ಇಂತಹ ನಕಲಿ ನೇಮಕಾತಿ ಮೂಲಕ ಎರಡು ಕೋಟಿಗೂ ಅಧಿಕ ರೂಪಾಯಿಯನ್ನು ಈತ ವಂಚಿಸಿರುವುದು ಬೆಳಕಿಗೆ ಬಂದಿದೆ.
ವೆಂಕಟೇಶ್ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರತ್ಯೇಕ 3 ಪ್ರಕರಣ ದಾಖಲಾಗಿವೆ. 316(2), 318(4), 336(3), 61, 351(2), 3(5) ಅಡಿ ಪ್ರಕರಣ ದಾಖಲಾಗಿವೆ.
ಆರೋಪಿ ವೆಂಕಟೇಶ್ ಬಳಿ ಇದ್ದ ಕೆಪಿಎಸ್ಸಿ, ಅಬಕಾರಿ, ವಾಣಿಜ್ಯ ತೆರಿಗೆ, ನಗರಾಭಿವೃದ್ಧಿ ಇಲಾಖೆ, ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪತ್ರ ಸ್ಥಳ ನಿಯೋಜಿಸಿ ಆದೇಶ ಹೊರಡಿಸಿರುವ ನಕಲಿ ನೇಮಕಾತಿ ಪತ್ರಗಳು, ದಾಖಲೆಗಳು, ಹಾಜರಾತಿ ಪುಸ್ತಕಗಳು, ಸರ್ಕಾರದ ಲೋಗೋ, ನಕಲಿ ಐಡಿ ಕಾರ್ಡ್, ಟ್ಯಾಗ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.



