ಬೆಂಗಳೂರು: ಈ ತಿಂಗಳ 20ರೊಳಗೆ ನೂತನ ಅಧ್ಯಕ್ಷರ ಆಯ್ಕೆಯಾಗುವ ಮೂಲಕ ಎಲ್ಲ ಬಿಕ್ಕಟ್ಟುಗಳಿಗೆ ಉತ್ತರ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ವಿಜಯೇಂದ್ರ ಹೇಳಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ನಾನು ಯಾವುದೇ ಅಪಮಾನ ಸಹಿಸಿಕೊಳ್ಳಲು ತಯಾರಿದ್ದೇನೆ. ಪಕ್ಷಕ್ಕೆ ದುಡಿದ ಯಡಿಯೂರಪ್ಪ ಅವರನ್ನು ಅತ್ಯಂತ ಕೀಳುಮಟ್ಟದಲ್ಲಿ ನಿಂದಿಸುವುದನ್ನು ಸಹಿಸಲು ಸಾಧ್ಯವಿಲ್ಲ. ತಟಸ್ಥ ಎಂದು ಹೇಳಿಕೊಳ್ಳುವವರು ಮತ್ತು ಪಕ್ಷ ಬೆಳವಣಿಗೆ ಬೇಸರ ತಂದಿದೆ ಎಂದು ಹೇಳುವವರು ಯಾಕೆ ಸುಮ್ಮನಿದ್ದಾರೆ? ಮಧ್ಯಸ್ಥಿಕೆ ಯಾಕೆ ವಹಿಸುತ್ತಿಲ್ಲ? ತಟಸ್ಥ ಬಣದ ಬಗ್ಗೆಯೂ ಗೊತ್ತು ಎಂದರು.
ಇವೆಲ್ಲ ಸರಿಪಡಿಸಲು ಪಕ್ಷದ ರಾಷ್ಟ್ರೀಯ ನಾಯಕರೇ ಬರಬೇಕಾ, ಇವರಿಗೆ ಜವಾಬ್ದಾರಿ ಇಲ್ಲವಾ? ಅಡ್ರೆಸ್ ಗೆ ಇಲ್ಲದವರೂ ಯಡಿಯೂರಪ್ಪ ಅವರಿಂದಲೇ ಮೇಲೆ ಬಂದಿದ್ದಾರೆ ಎಂದರು.
ನಾನೂ ಪಕ್ಷದಲ್ಲಿ ಕಾರ್ಯಕರ್ತನಾಗಿ, ವಿವಿಧ ಹುದ್ದೆಗಳಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದೇನೆ. ನಾನೇನು ಹೊಸಬನಲ್ಲ. ಲಕ್ಷಾಂತರ ಕಾರ್ಯಕರ್ತರಿಗೆ ನಾನು ಏನು ಎಂಬುದು ಗೊತ್ತು ಎಂದರು.




