ತೋಂಟದ ಸಿದ್ದಲಿಂಗಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ
ಶ್ರೀ ಸಿದ್ದಲಿಂಗೇಶ್ವರ ಜಯಂತೋತ್ಸವ
ಬೆಂಗಳೂರು: ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಜಯಂತೋತ್ಸವ ತೋಂಟದ ಸಿದ್ಧಲಿಂಗಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಉದ್ಘಾಟನೆಯನ್ನು ಶ್ರೀ ಜಗದ್ಗುರು ವೀರಸಿಂಹಾಸನ ಸಂಸ್ಥಾನ ಮಠ, ಸುತ್ತೂರು ಶ್ರೀಕ್ಷೇತ್ರದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ತೋಂಟದ ಸಿದ್ಧಲಿಂಗಶ್ರೀ ಪ್ರಶಸ್ತಿ ಪುರಸ್ಕೃತರಾದ ಕನಕಪುರದ ದೇಗುಲಮಠದ ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ಬೇಲಿ ಮಠದ ಶ್ರೀ ಶ್ರೀ ಚರಮೂರ್ತಿ ಶಿವರುದ್ರ ಸ್ವಾಮಿಗಳು, ಗದ್ದುಗೆ ಮಠದ ಶ್ರೀ ಶ್ರೀ ಮಹಾಂತ ಸ್ವಾಮಿಗಳು, ಪವಾಡ ಶ್ರೀ ಬಸವಣ್ಣದೇವರ ಮಠದ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಶಿವಸಿದ್ದೇಶ್ವರ ಸ್ವಾಮೀಜಿ,ಬೆಟ್ಟಹಳ್ಳಿ ಮಠದ ಶ್ರೀ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಬೃಹತ್ ಕೈಗಾರಿಕೆ ಸಚಿವರಾದ ಎಂ.ಪಾಟೀಲ್,ಶ್ರೀಮತಿ ಶೈಲಜ ವಿ.ಸೋಮಣ್ಣ,ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಸೋಮಶೇಖರ್, ವೀರಶೈವ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಪರಮಶಿವಯ್ಯ, ಮಾಜಿ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್, ಮಾಜಿ ಉಪಮೇಯರ್ ಬಿ.ಎಸ್.ಪುಟ್ಟರಾಜು, ಡಾ.ಅರುಣ್ ಸೋಮಣ್ಣ, ಕನ್ನಡ ಪರ ಹೋರಾಟಗಾರ ಪಾಲನೇತ್ರ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ವಿಜಯನಗರದಿಂದ ಮಾರುತಿ ಮಂದಿರದಿಂದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದವರೆಗೆ ಶ್ರೀ ಸಿದ್ದಲಿಂಗದೇವರನ್ನ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಶಾಸಕರುಗಳಾದ ಎಂ.ಕೃಷ್ಣಪ್ಪ, ಪ್ರಿಯಾಕೃಷ್ಣ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಸುತ್ತೂರು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಮಹಾನ್ ತಪಸ್ವಿಗಳು, ಜ್ಞಾನದಲ್ಲಿ ಪ್ರವೀಣರು ಇಂತಹ ವಿಶೇಷ ಮಹಾಚೇತನರಾದ ಸಿದ್ದಲಿಂಗೇಶ್ವರರು. 12ನೇ ಶತಮಾನದಲ್ಲಿ ಆರಂಭವದಲ್ಲಿ ಬಸವಣ್ಣನವರು ನಂತರ 500 ವರ್ಷಗಳ ಕಾಲ ಸಿದ್ದಲಿಂಗೇಶ್ವರರು ಧಾರ್ಮಿಕ ಜಾಗೃತಿ ಮೂಡಿಸಿದರು ಎಂದರು.
ಅಜ್ಞಾನ ಸಮಾಜ ತೊಲಗಿಸಿ, ಜ್ಞಾನವಂತ ಸಮಾಜಕ್ಕೆ ನಾಂದಿಯಾದರು ಸಿದ್ದಲಿಂಗೇಶ್ವರರು. ಸಿದ್ದಲಿಂಗೇಶ್ವರರ ಪಾದಸ್ಪರ್ಶದಿಂದ ಪುಣ್ಯಭೂಮಿಯಾಯಿತು. ಸಿದ್ದಲಿಂಗೇಶ್ವರ ಕೃಪೆಯಿಂದ ಅಮೇರಿಕಾದಲ್ಲಿ ಅತ್ಯಂತ ಯಶಸ್ವಿಯಾಗಿದ್ದೇನೆ ಎಂದು ಭಕ್ತರೊಬ್ಬರು ನನಗೆ ಹೇಳಿದರು, ಭಕ್ತಿ ಮತ್ತು ನಂಬಿಕೆ ಇರುವ ಕಡೆ ಯಶಸ್ಸು ಸಾಧ್ಯ ಎಂದರು.
ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಅನುಭವ ಮಂಟಪದಲ್ಲಿ 27 ವರ್ಷ ಕಾರ್ಯನಿರ್ವಹಿಸಿ ಕಲ್ಯಾಣಕ್ರಾಂತಿ ಮಾಡಿಸಿದ ಬಸವೇಶ್ವರರು ನಂತರ ಶರಣ ಪರಂಪರೆಯನ್ನು ಸಿದ್ದಲಿಂಗೇಶ್ವರ ವಿಶ್ವಕ್ಕೆ ವಚನ ಸಾರಿದರು. ದ್ವೀತಿಯ ಅಲ್ಲಮ ಎಂದು ಸಿದ್ದಲಿಂಗೇಶ್ವರರು ಎಂದು ಭಕ್ತರು ಕರೆಯುತ್ತಿದ್ದರು. ಅವರ ಶಿಷ್ಯರಾದ 101 ವಿರಕ್ತರು ಜೊತೆಯಲ್ಲಿ ಇದ್ದರು. ಪಟ್ಟಭದ್ರ ಹಿತಾಸಕ್ತಿಗಳು ಕಲ್ಯಾಣಕ್ರಾಂತಿ ಹತ್ತಿಕ್ಕಲು ಪ್ರಯತ್ನಪಟ್ಟರು. ಕೊಳ್ಳೆಗಾಲದ ಹರಳೆಗ್ರಾಮದಲ್ಲಿ ಹರಳಯ್ಯನವರ ಸಮಾಧಿ ಇದೆ. ಭಕ್ತ ಮತ್ತು ಜಂಗಮರ ಸಂಭಂದ ಏನು ಎಂದು ತಿಳಿಯಬೇಕು. ಕರ್ತವ್ಯಪಾಲನೆ ಮಾಡಿದಾಗ ಸಾಧನೆ ಸಾಧ್ಯ ಎಂದರು.
ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸುತ್ತೂರು ಮಠ ಮಾತೃ ಹೃದಯ. ಕನಕಪುರ ಮಠ ಬೇಲಿ ಮಠದ ತ್ರಿವೇಣಿ ಸಂಗಮವಾಗಿದೆ. ಜಗತ್ತಿನಲ್ಲಿ ಹುಟ್ಟಿದ ನಂತರ ಎರಡು ಋಣ ಇಟ್ಟುಕೊಂಡು ಹುಟ್ಟುತ್ತೇವೆ. ಒಂದು ತಾಯಿಋಣ ಇನ್ನೊಂದು ಭೂಮಿಯ ಋಣ. ಆದರೆ ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ, ಋಣಭಾರ ಕಡಿಮೆ ಮಾಡಿಕೊಳ್ಳಬೇಕು. ಮಹನೀಯರಗಳ ಸ್ಮರಣೆ ಮಾಡಬೇಕು ಎಂದರು.
ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, 12 ಶತಮಾನದಲ್ಲಿ ಶ್ರೀ ಬಸವೇಶ್ವರರು ಅನುಭವ ಮಂಟಪ ಎಂಬ ಮೊಟ್ಟ ಮೊದಲ ಪ್ರಜಾಪ್ರಭುತ್ವ ಸ್ಥಾಪಿಸಿದರು. ಕಾಯಕ ಸಮಾಜವನ್ನು ಒಂದು ಮಾಡಿದ ಸಾಧಕ. ಕ್ರಾಂತಿಕಾರಿ ಸಿದ್ದಾಂತಗಳಾದ ಅಂತರಜಾತಿಯ ವಿವಾಹ, ಸಾಮಾನತೆ ಕೊಟ್ಟರು, ಮೂಢನಂಬಿಕೆ ವಿರುದ್ಧ ಹೋರಾಟ ಮತ್ತು ಕಲ್ಯಾಣ ಕ್ರಾಂತಿಯಲ್ಲಿ ಬಸವಾದಿ ಶರಣರು ಛಿದ್ರಛಿದ್ರವಾದರು ಎಂದರು.
ಬಸವಣ್ಣರವರ ವಿಚಾರ ಚಿಂತನೆಯನ್ನು ಮರು ಸೃಷ್ಟಿ ಮಾಡಿದ ಎರಡನೇಯ ಬಸವಣ್ಣ ಎಂದರೆ ಸಿದ್ದಲಿಂಗೇಶ್ವರರು. ಕೊಟ್ಟಿ ವಚನಗಳು ಮತ್ತು ನೈಜ ವಚನಗಳ ಕುರಿತು ಭೌಗೋಳಿಕ ಸಂಶೋಧನೆ ಮಾಡಲಾಗುತ್ತಿದೆ. ವಚನ ಸಾಹಿತ್ಯ ಕೇಂದ್ರ ಆರಂಭಿಸಲಾಗಿದೆ. 10 ಸಾವಿರ ವಚನಗಳನ್ನು ಎಂ.ಎಂ.ಕಲರ್ಬುಗಿ ನೇತೃತ್ವದಲ್ಲಿ ತರಲಾಯಿತು. ಲಿಂಗಾಯತ ಧರ್ಮ ಉಳಿಯುವಂತೆ ಮಾಡಿದವರು ಸಿದ್ದಲಿಂಗಾ ಶ್ರೀಗಳು ಎಂದರು.
ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಪರ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಬದುಕಲು ಹೊರಟವರ ಭಗವದ್ಗೀತೆ ಕೃತಿ ಲೋಕರ್ಪಣೆ ಮಾಡಲಾಯಿತು. 40ಕ್ಕೂ ಹೆಚ್ಚು ವಿವಿಧ ಮಠಾಧೀಶರು ಹಾಗೂ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.




