ಅದು ಚಿತ್ರ ನಿರ್ದೇಶಕ ಗುರು ಪ್ರಸಾದ್ ನಿರ್ದೇಶನದ ಎದ್ದೇಳು ಮಂಜುನಾಥ್ ಚಲನಚಿತ್ರ ತೆರೆ ಕಂಡ ಸಮಯ. ಅವರ ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಯಾರು ಟಚ್ ಮಾಡಲು ಧೈರ್ಯ ಮಾಡದ ಸಬ್ಜೆಕ್ಟ್ ಅನ್ನು ಹಾಸ್ಯ ಲೇಪನದೊಂದಿಗೆ ಮಠದ ಅಂಗಳದೊಳಗಿನ ನಗ್ನ ಸತ್ಯವನ್ನು ಬಹಿರಂಗಗೊಳಿಸುವ ಕೆಲಸವನ್ನು ಮಠದ ಚಿತ್ರ ಮೂಲಕ ಗುರು ಮಾಡಿದ್ದರು.
ಆ ನಂತರ ಅವರ ಎದ್ದೇಳು ಮಂಜುನಾಥ ಒಂದು ವಿಭಿನ್ನ ಕಥಾವಸ್ತು ಒಳಗೊಂಡ ಚಿತ್ರ ಅವರ ಸಿನಿಮಾವನ್ನು ಕನ್ನಡದ ಪ್ರೇಕ್ಷಕರು ಇಷ್ಟಪಟ್ಟಿದ್ದರು. ಆ ಸಂದರ್ಭದಲ್ಲಿದ್ದ ಹತಾಶೆ ಪ್ರೇಕ್ಷಕರಿಗೆ ಗುರು ಪ್ರಸಾದ್ ರ ಈ ಎರಡೂ ಸಿನಿಮಾಗಳು ಜನರಲ್ಲಿ ಭರವಸೆ ಮೂಡಿಸಿದಂತು ನಿಜ.
ಹೀಗಿರುವಾಗ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್ ಒಂದರಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಾನು ನಿರ್ದೇಶಕ ಗುರುಪ್ರಸಾದ ಅವರೊಂದಿಗೆ ಕೆಲಸ ಮಾಡಲು ಬಯಸಿ ಅವರ ಜೊತೆ ಮಾತನಾಡುವ ಸಲುವಾಗಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ವಾಸವಿದ್ದ ಅವರ ಮನೆಗೆ ಹೋದೆ.
ಮನೆಯ ಮುಂದಿನ ಆವರಣದಲ್ಲಿ ಚಾಪೆ ಹಾಸಿಕೊಂಡು ಪೋನ್ ನಲ್ಲಿ ಮಾತನಾಡುತ್ತಾ ಬ್ಯೂಸಿಯಾಗಿದ್ದ ಗುರುಪ್ರಸಾದ್ ಅವರನ್ನು ನೋಡಿ ನಮಸ್ಕಾರ ಎಂದೆ, ಪೋನ್ ನಲ್ಲಿ ಮಾತನಾಡುತ್ತಲೆ ಸಣ್ಣ ನಗು ಬೀರಿದ ಗುರು ಫೋನ್ ಸಂಭಾಷಣೆಯಲ್ಲಿ ಮಗ್ನರಾದರು.
ಅತ್ತ ಕಡೆಯಿಂದ ಫೋನ್ ನಲ್ಲಿ ಮಾತನಾಡುತ್ತಿದ್ದವರನ್ನು ಉದ್ದೇಶಿನಿ ಮಾತನಾಡಿದ ಗುರು ಅವರು (ಸಿನಿಮಾ ನಿರ್ಮಾಪಕರು ಇರ್ಬೇಕು ಅನ್ಸುತ್ತೆ,) ಗುರು “ನೀವು ನನಗೆ ಕನ್ನಡ ಸಿನಿಮಾದ ಇತಿಹಾಸದಲ್ಲಿ ನಿರ್ದೇಶಕರಿಗೆ ಇದುವರೆಗೂ ಯಾರಿಗೂ ಕೊಟ್ಟಿರದಷ್ಟು ಸಂಭಾವನೆ ನನಗೆ ಕೊಡಬೇಕು” ಎಂದು ಹೇಳುತ್ತ ಜೋರಾಗಿ ನಗುತ್ತಾ ಗಡ್ಡ ಸವರಿಕೊಂಡರು. ನಾನು ಅವರು ಮಾತನಾಡುವುದನ್ನು ನೋಡುತ್ತಾ ನಿಂತಿದ್ದೆ.
ಪೋನ್ ಸಂಭಾಷಣೆ ಮುಗಿದ ನಂತರ ಬನ್ನಿ ಬನ್ನಿಎಂದು ಮನೆಯ ಮುಂದಿನ ಆವರಣದಲ್ಲಿ ಹಾಸಿದ್ದ ಚಾಪೆಯ ಮೇಲೆ ಕುಳಿತುಕೊಂಡು ಕೂತು ಕೊಳ್ಳಿ ಎಂದು ನನ್ನ ಮಾತಿಗೆ ಕಿವಿಯಾದರು.
ನಾನು “ನಗು ಮತ್ತು ಅಳು ಈ ಎರಡು ಪ್ರಬಲ ಭಾಷೆಗಳನ್ನು ನಿಮ್ಮ ಸಿನಿಮಾದಲ್ಲಿ ಪ್ರಭಾವಯುತವಾಗಿ ಕಟ್ಟಿಕೊಟ್ಟಿದ್ದೀರಿ” ಅಂತಾ ಹೇಳಿದೆ, ಗುರು ಪ್ರಸಾದ್ ಸಣ್ಣಗೆ ನಕ್ಕರು “ನಿಮ್ಮೊಂದಿಗೆ ಕೆಲಸ ಮಾಡಲು ಅವಕಾಶ ಕೊಡಬೇಕು” ಎಂದೆ. ಆಗ ಗುರು ಪ್ರಸಾದ್ “ಹೌದಾ..! ನೀವು ಎಷ್ಟು ಪುಸ್ತಕ ಓದಿದ್ದೀರಾ..? ಎಂದು ಪ್ರಶ್ನಿಸಿ, ಓದಿರುವ ಪುಸ್ತಕಗಳ ಹೆಸರು ಹೇಳಿ” ಎಂದು ಕೇಳತೊಡಗಿದರು. ನಾನು ಆ ಸಮಯಕ್ಕೆ ನೆನಪಾದ ಕುವೆಂಪು, ತೇಜಸ್ವಿ, ಲಂಕೇಶ್, ಕಾರಂತ, ಬೇಂದ್ರೆ ಅವರ ಪುಸ್ತಕ ಸೇರಿದಂತೆ ಇತರೆ ಲೇಖಕರ 25 ಸಾಹಿತಿಗಳ ಪುಸ್ತಕದ ಹೆಸರು ಹೇಳಿದೆ.
ಆಗ ಗುರು ಇನ್ನೂ ಹೇಳಿ ಅಂದಿದ್ದಕ್ಕೆ “ಒಂದಷ್ಟು ಓದಿದ್ದೇನೆ, ಓದುತ್ತಲೂ ಇದ್ದೇನೆ ಸದ್ಯಕ್ಕೆ ಇದುವರೆಗೆ ಓದಿರುವ ಎಲ್ಲಾ ಪುಸ್ತಕಗಳು ನೆನಪಾಗುತ್ತಿಲ್ಲ” ಸರ್ ಎಂದೆ. ಗುರು ಅವ್ರು “ಮರೆತರೆ ಹೇಗೆ? ನಾವು ಟೈಮ್ ಸರಿಯಾಗಿ ಊಟ, ನಿದ್ರೆ, ಮೈಥುನ ಮರಿತೀವ” ಎಂದರು, ನಾನು ನಕ್ಕೆ ಅವರು ನಕ್ಕರು. ಅಷ್ಟರಲ್ಲಿ ಅವರ ಹೆಂಡತಿ ಟೀ ತಂದು ಕೊಟ್ಟರು ಅವರನ್ನು ನನಗೆ ಪರಿಚಯ ಮಾಡಿಕೊಟ್ಟರು.
ಟೀ ಕುಡಿಯುತ್ತಾ ಸಿಗರೇಟ್ ಹಚ್ಚಿಕೊಂಡು “ನೀವು ತಗೊಳ್ಳಿ” ಎಂದರು.. “ನಾನು ಬೇಡ” ಎಂದೆ, ಹೊಗೆ ಬಿಡುತ್ತಾ ಮಾತಿನ ಲಹರಿಗೆ ಬಂದರೂ ಆಗ ಅವರ ಸುತ್ತಾ ಶಿಷ್ಯರೆಲ್ಲರೂ ಆವರಿಸಿದರು. ಅವರ ತಮಾಷೆಯ ಜೋಕಿನ ಮಾತುಗಳನ್ನು ಮುದದಿಂದ ಕೇಳುತ್ತಿದ್ದ ಒಬ್ಬ ಶಿಷ್ಯ ಜೋರಾಗಿ ನಕ್ಕಾಗ ಅದಕ್ಕೆ ಪ್ರತಿಕ್ರಿಯಿಸಿದ ಗುರು ನನ್ನನ್ನು ಉದ್ದೇಶಿಸಿ “ನೋಡಿ ಇವನು ಅಗತ್ಯಕ್ಕಿಂತ ಹೆಚ್ಚಾಗಿ ನಗುತ್ತಿದ್ದಾನೆ” ಎಂದು ಕಿಚಾಯಿಸಿದರು.
ಕೊನೆಗೆ ನನ್ನನು ನೋಡುತ್ತಾ “ನೋಡಿ ನೀವು ಎಲ್ಲೋ ಒಂದು ಕಡೆ ಕೆಲಸ ಮಾಡ್ತಾ ಇದ್ದೀರಿ ಅಲ್ಲಿಯೆ ಮುಂದುವರೆಯಿರಿ ಈಗ ನನ್ನ ಬಳಿ ಸಾಕಷ್ಟು ಶಿಷ್ಯರಿದ್ದಾರೆ, ಇವರ್ಯಾರು ನನ್ನ ಬಳಿ ಸಂಬಳಕ್ಕೆ ಕೆಲಸ ಮಾಡುತ್ತಿಲ್ಲ. ಇವರು ನನ್ನ ಜೊತೆ ದಿನದ 24ಗಂಟೆಯೂ ಕೆಲಸ ಮಾಡಲು ಸಿದ್ದರಿರುತ್ತಾರೆ” ಎಂದರು.
ಮತ್ತೆ ಮಾತು ಮುಂದುವರೆಸಿದ ಗುರು ಪ್ರಸಾದ್, ನಾನು ಟಿ.ಎನ್ ಸೀತಾರಾಮ್ ಅವರ ಬಳಿ ಕೆಲಸ ಕೇಳಲು ಹೋದಾಗ ನನ್ನ ಸಮೃದ್ದ ಬ್ಯಾಂಕ್ ಬ್ಯಾಲೆಸ್ಸ್ ಅನ್ನು ಅವರಿಗೆ ತೋರಿಸಿದ್ದೆ, ಅಂದರೆ ನಾನು ಅವರ ಬಳಿ ಸಂಬಳಕ್ಕಾಗಿ ಬಂದಿಲ್ಲ ಕೆಲಸಕ್ಕಾಗಿ ಬಂದಿದ್ದೇನೆ ಎಂದು ಹೇಳಿ ಕೆಲಸ ಪಡೆದೆ. ಇದಕ್ಕೂ ನಾನು ಮೊದಲು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಚೆನ್ನಾಗಿ ದುಡ್ಡು ಗಳಿಸಿದ್ದೆ.
“ನೋಡ್ರಿ ಕೊನೆಗೆ ಏನೂ ಇಲ್ಲದಿದ್ದರೂ ಬೆಂಗಳೂರಿನಲ್ಲಿ ಆಟೋ ಓಡಿಸಿ ಜೀವನ ಮಾಡುತ್ತೇನೆ” ಎನ್ನುವ ಮಾತು ಅವರು ಬದುಕಿನ ಬಗೆಗೆ ಅದೆಷ್ಟು ಭರವಸೆ ಕನಸು, ವಿಶ್ವಾಸ ಜೀವನೋತ್ಸಾಹ ಇಟ್ಟು ಇಟ್ಟುಕೊಂಡಿದ್ದಾರೆನ್ನುವುದನ್ನು ಸೂಚಿಸುತ್ತಿತ್ತು. ಕೊನೆಗೆ ಒಂದು ಮುಗುಳು ನಗೆ ಬೀರಿ ಅಲ್ಲಿಂದ ಹೊರಟೆ.
ಸೋಲು, ಸಾಲ, ಹತಾಶೆ, ಖಿನ್ನತೆ ಬದುಕಿನ ಹೋರಾಟದಲ್ಲಿ ಇದ್ದದ್ದೇ, ಆದರೆ ಎಲ್ಲಾ ನ್ಯೂನತೆಗಳನ್ನು ಮೆಟ್ಟಿ ಗಟ್ಟಿಯಾಗಿ ನಿಂತು ಮುರಿದ ಬದುಕನ್ನು ಕಟ್ಟಿಕೊಳ್ಳುವುದೇ ಬದುಕಿನ ಸಾರ್ಥಕತೆ. ಗುರುಪ್ರಸಾದ್ ಅವರಿಗೆ ಈ ವಿಚಾರಗಳು ಗೊತ್ತಿಲ್ಲವೆಂದೇನಲ್ಲ, ಎಲ್ಲವನ್ನೂ ಅರಿತ ಗುರು ಆತ್ಮಹತ್ಯೆಯ ನಿರ್ಧಾರ ಮಾಡಿ ತಮ್ಮ ಬದುಕಿಗೆ ತಾವೇ ಅಂತ್ಯ ಮಾಡಿಕೊಂಡು ಹಲವು ರೀತಿಯಲ್ಲಿ ವ್ಯವಸ್ಥೆಯನ್ನು ಕೆಣಕಿದ್ದಾರೆ.
ಗುರು ಪ್ರಸಾದ್ ಅವರಿಗೆ ಈ ವ್ಯವಸ್ಥೆ ಬಗೆಗಿರುವ ಅಸಮಾಧಾನ ಜೊತೆಗೆ ತಮ್ಮ ಬದುಕನ್ನು ಸರಿಯಾಗಿ ಕಟ್ಟಿಕೊಳ್ಳಲು ಬೇಕಾಗಿರುವ ಸಮಾಧಾನ ಈ ವಿಚಾರಗಳನ್ನ ಬದುಕಿನ ಅನಿವಾರ್ಯತೆಗಳು ನುಂಗಿಹಾಕಿರಬಹುದು.
ಇದರ ನಡುವೆ ಗುರುಪ್ರಸಾದ್ ಸಾವಿನ ನಂತರ ಅವರ ಬಗೆಗೆ ನಟನೊಬ್ಬನ ನಿಂದನೆ ಮಾತುಗಳು ನೋಡಿದರೆ ಇದು ಒಟ್ಟು ವ್ಯವಸ್ಥೆಯ ವಿಕೃತಿಯ ಅತಿರೇಕ ಅನ್ನಿಸದೇ ಇರದು.
– ಕೆಜೆಹಳ್ಳಿ ಸುರೇಶ್, ಪತ್ರಕರ್ತರು




