ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡಿ: ದಲಿತ ಸಂಘಟನೆಗಳ ಆಗ್ರಹ
ಗೆ,
ಮಾನ್ಯ ಗೌರವಾನ್ವಿತ ರಾಜ್ಯಪಾಲರು
ರಾಜಭವನ ಬೆಂಗಳೂರು.
(ಮಾನ್ಯ ಉಪತಹಶೀಲ್ದಾರರು ಕೆಂಭಾವಿ
ತಾ. ಸುರಪುರ ಜಿ. ಯಾದಗಿರಿ ಇವರ ಮೂಲಕ )
ವಿಷಯ: ಯುಗಪ್ರವರ್ತಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡುವ ಕುರಿತು ಮನವಿ.
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
- ತಮ್ಮ ಮಕ್ಕಳ ಭವಿಷ್ಯದ ಮೇಲೆ ಇರುವ ಬಿಜೆಪಿಯವರ ಕಾಳಜಿ ಬಡವರ ಮಕ್ಕಳ ಮೇಲೇಕಿಲ್ಲ?: ಪ್ರಿಯಾಂಕ್ ಖರ್ಗೆ
- ಅಂಬೇಡ್ಕರ್ ಸಮಾನತೆ, ನ್ಯಾಯ, ಮಾನವ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ವ್ಯಕ್ತಿ: ಪಾಟೀಲ್
ಮಾನ್ಯರೆ,
ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಹೋಬಳಿ ಶಾಖೆ ಕೆಂಭಾವಿ, ವತಿಯಿಂದ ತಮ್ಮ ಗಮನಕ್ಕೆ ತರಬಯುಸುತ್ತಾ ಉಗ್ರವಾಗಿ ಖಂಡಿಸುವದೇನಂದರೆ, ಸಂವಿಧಾನ ಶಿಲ್ಪಿ ಮತ್ತು ಅಂಚಿನಲ್ಲಿರುವವರ ಹಕ್ಕುಗಳ ಹೋರಾಟಗಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿ, ಕೋಟ್ಯಂತರ ಅಂಬೇಡ್ಕರ್ ಅಭಿಮಾನಿಗಳ ಭಾವನೆಗಳಿಗೆ ಘಾಸಿ ಉಂಟು ಮಾಡಿರುತ್ತಾರೆ.
ದೇಶಕ್ಕೆ ಸಂವಿಧಾನ ಸಮರ್ಪಣೆ ಮಾಡಿ 75 ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ ಅದರ ಬಗ್ಗೆ ಕೂಲಂಕುಷ ಚರ್ಚೆ ಮಾಡುವುದು ಬಿಟ್ಟು ಅದರ ಕರ್ತೃವಿನ ಬಗ್ಗೆಯೇ ಮಾತನಾಡಿರುವುದು ಅವರ ಮನಸ್ಥಿತಿ ತೋರಿಸುತ್ತಿದೆ.

ಗೃಹ ಸಚಿವ ಎನ್ನುವುದು ದೇಶದ ಪ್ರತಿಷ್ಠಿತ ಪದವಿ. ಜವಾಬ್ದಾರಿಯುತ ಸ್ಥಾನ. ಇಂತಹ ಸ್ಥಾನದಲ್ಲಿರುವ ವ್ಯಕ್ತಿ ದೇಶದ ದೇಗುಲವಾದ ಸಂಸತ್ ನಲ್ಲಿ ನಿಂತು ಉದ್ದಟತನದ ಮಾತನಾಡಿದ್ದಾರೆ.
ಈ ದೇಶಕ್ಕೆ ಆತ್ಮದಂತಿರುವ ಸಂವಿಧಾನ ಕೊಟ್ಟ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ , ಕುರಿತು ಅವರಲ್ಲಿರುವ ಅಸಹನೆ, ಅಸಹಿಷ್ಣುತೆ, ಯಾವ ಮಟ್ಟಿನದು ಎಂಬುದು ಅರ್ಥವಾಗುತ್ತದೆ. ಈ ಮೂಲಕ ಇವರ ಸಂವಿಧಾನದ ಬಗೆಗಿನ ಮಮಕಾರ ಪ್ರೀತಿ ಬಟಾ ಬಯಲಾಗಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ವ್ಯಕ್ತಿಯಲ್ಲ, ದಮನಿತರ ಶಕ್ತಿ ತುಳಿತಕ್ಕೊಳಗಾದವರ ಆಶಾಕಿರಣ ಈಡಿ ಜಗತ್ತು ಅವರ ಜ್ಞಾನವನ್ನು ಜಪಿಸಿದರೆ ಸಂಘಪರಿವಾರ ಮತ್ತು ಅಮಿತ್ ಶಾ ನಂತಹ ಕುತ್ಸಿತ ಮನಸ್ಸಿನ ಮಂತ್ರಿ ಅವರ ಜಾತಿಯನ್ನು ಜರಿಯುತ್ತಿದೆ. ಅವರ ವಿದ್ವತ್ತಿಗೆ ಕರಬುತ್ತದೆ. ಅವರ ಸಮಾಜಮುಖಿ ಚಿಂತನೆಯನ್ನು ಅರಗಿಸಿಕೊಳ್ಳಲಾಗದೆ ಅಲಬುತ್ತದೆ ಎಂಬುದು ಇವರ ಹೇಳಿಕೆಯಲ್ಲಿಯೇ ವೇದ್ಯವಾಗುತ್ತದೆ.
ಆದ್ದರಿಂದ ಕೋಟ್ಯಂತರ ಜನರ ಆರಾಧ್ಯ ದೈವವಾಗಿರುವ ಡಾ. ಅಂಬೇಡ್ಕರ್ ರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಅಮಿತ್ ಶಾ ಅವರು ದೇಶದ ಕ್ಷಮೆ ಕೋರಬೇಕು ಮತ್ತು ನೈತಿಕತೆ ಇದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಗ್ರಹಿಸುತ್ತದೆ.
ಕ್ರಾಂತಿಕಾರಿ ಜೈಭೀಮ್
ತಮ್ಮ ವಿಶ್ವಾಸಿಗಳು
ಸಂಗಣ್ಣ ಚಿಂಚೋಳಿ, ಬಸವರಾಜ ಕಟ್ಟಿಮನಿ, ಲಾಲಪ್ಪ ಹೊಸ್ಮನಿ, ಮರೆಪ್ಪ ಮಾಳಹಳ್ಳಿ, ಆರ್.ಎಸ್. ಮಾಲಗತ್ತಿ, ಬಸವಣ್ಣೆಪ್ಪ ಮಾಳಳ್ಳಿಕರ್, ರಾಯಪ್ಪ ಯತ್ನಾಳ, ದೇವರಾಜ ದೊರೆ, ಮರೆಪ್ಪ ಕಟ್ಟಿಮನಿ, ಖಂಡಪ್ಪ ಯಾಳಗಿ, ಮಹೇಶ ಸಿ ಕಟ್ಟಿಮನಿ, ಪರಮಣ್ಣ ಎಸ್. ಬಡಿಗೆರ, ಚಂದ್ರು ಯಾಳಗಿ, ಮಲ್ಲು ಕಟ್ಟಿಮನಿ, ರವಿ ಯಾಳಗಿ, ನಿಂಗಪ್ಪ ನಗನೂರ, ಶರಣು




