ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್, ಚುನಾವಣಾ ಆಯೋಗ ಮಾಜಿ ಆಯುಕ್ತ ಮೊದಲಾದ ಮಾಜಿ ಅಧಿಕಾರಿಗಳಿಂದ ಪತ್ರ
ದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯನ್ನು ತ್ವರಿತವಾಗಿ ಪರಿಹರಿಸುವಂತೆ ಒತ್ತಾಯಿಸಿ ಪ್ರಮುಖ ನಿವೃತ್ತ ನಾಗರಿಕ ಸೇವಾ ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ಸಾರ್ವಜನಿಕ ವ್ಯಕ್ತಿಗಳ ತಂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಪತ್ರದಲ್ಲಿ ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ಆಧರಿಸಿ ಅಲ್ಪಸಂಖ್ಯಾತ ಸಮುದಾಯಗಳಲ್ಲಿ “ತೀವ್ರ ಆತಂಕ ಮತ್ತು ಅಭದ್ರತೆಯನ್ನು” ಎತ್ತಿ ತೋರಿಸಲು ಯತ್ನಿಸಲಾಗಿದೆ. ವಿಶೇಷವಾಗಿ ಮುಸ್ಲಿಮರು ಮತ್ತು ತುಸುಮಟ್ಟಿಗೆ, ಕ್ರಿಶ್ಚಿಯನ್ನರು, ಅಂತರ್ಧರ್ಮೀಯರ ವಿರುದ್ಧ ವ್ಯಕ್ತವಾಗುತ್ತಿರುವ ಸಾಮಾಜಿಕ ಅಸಹನೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಯೋಜನಾ ಆಯೋಗದ ಮಾಜಿ ಕಾರ್ಯದರ್ಶಿ ಎನ್.ಸಿ.ಸಕ್ಸೇನಾ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ, ಯುಕೆ ಮಾಜಿ ಹೈ ಕಮಿಷನರ್ ಶಿವ ಮುಖರ್ಜಿ ಮತ್ತು ಲೆಫ್ಟಿನೆಂಟ್ ಜನರಲ್ ಜಮೀರ್ ಉದ್ದೀನ್ ಶಾ (ನಿವೃತ್ತ), ಮಾಜಿ ಉಪ ಸೇನಾ ಮುಖ್ಯಸ್ಥರು ಮತ್ತು ಇತರರನ್ನು ಒಳಗೊಂಡ 17 ಜನ ಪತ್ರಕ್ಕೆ ಸಹಿಹಾಕಿದ್ದಾರೆ.
ಪತ್ರದಲ್ಲಿ ಭಾರತದಲ್ಲಿ ಹಿಂದೂ-ಮುಸ್ಲಿಂ ಸಂಬಂಧಗಳು ಹದಗೆಟ್ಟಿರುವ ಬಗ್ಗೆ ಕಳವಳವಯನ್ನು ವ್ಯಕ್ತಪಡಿಸಿದ್ದು, ಅವರ ಪ್ರಕಾರ 2014ರಲ್ಲಿ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಹದಗೆಟ್ಟಿದೆ. ದೇಶದ ಇತಿಹಾಸದಲ್ಲಿ ಕೋಮು ಕಲಹ ಮರುಕಳಿಸುವ ವಾತಾವರಣ ನಿರ್ಮಾಣವಾಗಿದ್ದು, ಕಳೆದ 10 ವರ್ಷಗಳಲ್ಲಿ ಗೊಂದಲಕರ ಪರಿವರ್ತನೆಗೆ ದೇಶ ಸಾಕ್ಷಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ಮುಸ್ಲಿಮರ ವಿರುದ್ಧ ಹಿಂಸಾಚಾರ ಮತ್ತು ತಾರತಮ್ಯವನ್ನು ಪೋಷಿಸುವಲ್ಲಿ ಅಥವಾ ಸಹಿಸಿಕೊಳ್ಳುವಲ್ಲಿ ಪಕ್ಷಪಾತದ ನಿಲುವನ್ನು ಪ್ರದರ್ಶಿಸಿದ ಕೆಲವು ರಾಜ್ಯ ಸರ್ಕಾರಗಳು ಮತ್ತು ಅವರ ಆಡಳಿತ ಯಂತ್ರದ ಪಾತ್ರವನ್ನು ಪತ್ರದಲ್ಲಿ ವಿವರಿದಲಾಗಿದೆ.
ಅಂತರ್ ಕೋಮು ಸಂಬಂಧಗಳು ಯಾವಾಗಲೂ ಉತ್ತಮವಾಗಿವೆ ಎಂದಲ್ಲ. ವಿಭಜನೆಯ ಕರಾಳ ನೆನಪುಗಳು, ಅದಕ್ಕೆ ಕಾರಣವಾದ ಸಂದರ್ಭಗಳು ಮತ್ತು ಅದರ ನಂತರದ ದುರಂತ ಗಲಭೆಗಳು ನಮ್ಮ ಮನಸ್ಸಿನಲ್ಲಿ ಹುದುಗಿವೆ. ವಿಭಜನೆಯ ನಂತರವೂ, ನಮ್ಮ ದೇಶ ನಿರಂತರವಾಗಿ ಭೀಕರ ಕೋಮು ಗಲಭೆಗಳಿಂದ ತತ್ತರಿಸಿದೆ ಮತ್ತು ಈಗ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿಲ್ಲ ಅಥವಾ ಸುಧಾರಿಸಿಲ್ಲ ಎಂದು ನಮಗೆ ತಿಳಿದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಆದಾಗ್ಯೂ, ಕಳೆದ 10 ವರ್ಷಗಳ ಘಟನೆಗಳು ಗಮನಾರ್ಹವಾಗಿ ಭಿನ್ನವಾಗಿವೆ. ಅವುಗಳು ಸಂಬಂಧಪಟ್ಟ ಅನೇಕ ರಾಜ್ಯ ಸರ್ಕಾರಗಳ ಪಕ್ಷಪಾತದ ಪಾತ್ರವನ್ನು ಮತ್ತು ಅವರ ಆಡಳಿತ ಯಂತ್ರವನ್ನು ಸ್ಪಷ್ಟವಾಗಿ ತೋರಿಸುತ್ತವೆ. ಇದು ಊಹಾತೀತ ಎಂದು ನಾವು ನಂಬುತ್ತೇವೆ ಎಂದಿದ್ದಾರೆ.
ಈ ಪ್ರವೃತ್ತಿಯನ್ನು ಪ್ರತಿಬಿಂಬಿಸುವಂತೆ, ಗೋಮಾಂಸವನ್ನು ಹೊತ್ತೊಯ್ಯುವ ವ್ಯಕ್ತಿಗಳ ಸಾರ್ವಜನಿಕ ಹತ್ಯೆ, ಇಸ್ಲಾಮೋಫೋಬಿಕ್ ದ್ವೇಷ ಭಾಷಣ ಮತ್ತು ಸ್ಥಳೀಯ ಆಡಳಿತದ ಆದೇಶದ ಮೇರೆಗೆ ಮುಸ್ಲಿಂ ಮನೆಗಳನ್ನು ಧ್ವಂಸಗೊಳಿಸುವುದು ಸೇರಿದಂತೆ ಘಟನೆಗಳ ಸರಣಿಗಳನ್ನು ಪತ್ರದಲ್ಲಿ ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಲಾಗಿದೆ.
ಮುಸ್ಲಿಂ ಒಡೆತನದ ವ್ಯವಹಾರಗಳ ಮೇಲಿನ ದಾಳಿಯ ವರದಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಇದು ಆರ್ಥಿಕ ಮತ್ತು ಸಾಮಾಜಿಕ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಧ್ಯಕಾಲೀನ ಮಸೀದಿಗಳು ಮತ್ತು ದರ್ಗಾಗಳ ಮೇಲೆ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಗಳನ್ನು ನಡೆಸಲು ಬಲಪಂಥೀಯ ಗುಂಪುಗಳ ಕರೆಗಳನ್ನು ಅವರು ಎತ್ತಿತೋರಿಸಿದ್ದು, ಮುಖ್ಯವಾಗಿ ಅಜ್ಮೀರ್ನಲ್ಲಿರುವ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ಸೂಫಿ ದೇಗುಲ; ಇದು ಭಾರತದ ಬಹುತ್ವದ ಇತಿಹಾಸವನ್ನು ಪುನಃ ಬರೆಯುವ ಪ್ರಯತ್ನ ಎಂದು ಅವರು ಆರೋಪಿಸಿದ್ದಾರೆ.
ಆರಾಧನಾ ಸ್ಥಳಗಳ ಕಾಯಿದೆಯಿಂದ ಸ್ಪಷ್ಟವಾದ ಕಾನೂನು ರಕ್ಷಣೆಗಳ ಹೊರತಾಗಿಯೂ, ನ್ಯಾಯಾಲಯಗಳು ಈ ಬೇಡಿಕೆಗಳಿಗೆ “ಅನಾವಶ್ಯಕತೆ ಮತ್ತು ಆತುರದಿಂದ” ಪ್ರತಿಕ್ರಿಯಿಸಿವೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಅಲ್ಪಸಂಖ್ಯಾತ ವಿರೋಧಿ ಧೋರಣೆಯನ್ನು ವಿವರಿಸಲಾಗಿದೆ.
ಈ ವಿಶಿಷ್ಟವಾದ ಸಮಕಾಲೀನ ಸಂದರ್ಭದಲ್ಲಿ ನಮ್ಮ ನಾಗರಿಕ ಪರಂಪರೆಯ ಮೇಲೆ ಸೈದ್ಧಾಂತಿಕ ಆಕ್ರಮಣ ನಡೆಯುತ್ತಿದೆ ಮತ್ತು ಇದು ನೀವೇ ಪುನಶ್ಚೇತನಗೊಳಿಸಲು ಬಯಸುವ ಸಮಗ್ರ ಭಾರತದ ಕಲ್ಪನೆಯನ್ನು ವಿರೂಪಗೊಳಿಸುತ್ತದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ನಡೆಯುತ್ತಿರುವ ಘಟನೆಗಳನ್ನು ಕುರಿತು ಹೇಳಲಾಗಿದೆ.
ವಿಭಜಕ ಶಕ್ತಿಗಳ ವಿರುದ್ಧ ದೃಢವಾದ ನಿಲುವು ತೆಗೆದುಕೊಳ್ಳುವಂತೆ ಮತ್ತು ಎಲ್ಲಾ ರಾಜ್ಯ ಆಡಳಿತಗಳು ಸಂವಿಧಾನವನ್ನು ಗೌರವಿಸುವಂತೆ ಮತ್ತು ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯುವಂತೆ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸಲಾಗಿದೆ.
ತನ್ನ ಜಾತ್ಯತೀತ ಮತ್ತು ಬಹುತ್ವದ ಮೌಲ್ಯಗಳಿಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಲು ಅವರು ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಸರ್ವಧರ್ಮ ಸಭೆಗೆ ಕರೆ ನೀಡಿದ್ದಾರೆ. ಇಂತಹ ಗೊಂದಲಗಳ ನಡುವೆ ಸಮಾಜ ಪ್ರಗತಿ ಹೊಂದಲು ಸಾಧ್ಯವಿಲ್ಲ ಅಥವಾ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.



