ಪೊಲೀಸ್ ಅಧಿಕಾರಿಗಳು ನಿಷ್ಠೆಯಿಂದ‌ ಕೆಲಸ ಮಾಡಿ ರಾಜ್ಯಕ್ಕೆ ಜಿಲ್ಲೆಗೆ ಹೆಸರು ತನ್ನಿ: ಪ್ರಿಯಾಂಕ್ ಖರ್ಗೆ

2 years ago

ಕಲಬುರ್ಗಿ: ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಬರೆದು ಅವರಲ್ಲಿ ಪಾಸಾದ ನೀವು ತರಬೇತಿ ಪಡೆದು‌ ಸಾರ್ವಜನಿಕ‌ ಸೇವೆಗೆ ಸಜ್ಜಾಗಿದ್ದೀರಿ, ಹಾಗಾಗಿ ಕರ್ತವ್ಯ ನಿಷ್ಠೆ ಹಾಗೂ ಸೇವಾ ಮನೋಭಾವದಿಂದ ಸಾರ್ವಜನಿಕರಿಗೆ ಸೇವೆ ಮಾಡುವ ಮೂಲಕ ಇಲಾಖೆಗೆ ಹೆಚ್ಚಿನ ಶಕ್ತಿ ತುಂಬಬೇಕು. ನಿಮ್ಮ ಶಿಕ್ಷಣಕ್ಕಾಗಿ ನಿಮ್ಮ ಮನೆಯವರು ಪಟ್ಟ ಕಷ್ಟಕ್ಕೆ ಅವರಿಗೆ ಕೀರ್ತಿ ತರಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ನಗರದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ₹7.13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸಭಾಂಗಣ ಹಾಗೂ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಈಗಾಗಲೇ ನಗರ ಕುಡಿಯುವ ನೀರು ವಿಭಾಗಕ್ಕೆ  900 ಜನ ಇಂಜಿನಿಯರ್ ಗಳನ್ನು ನೇಮಕಾತಿ ಮಾಡಲಾಗಿದೆ. ಅವರಿಗೆ ನಾನೇ ಖುದ್ದಾಗಿ ನೇಮಕಾತಿ ಆದೇಶ ನೀಡಿ, ಆಡಳಿತದಲ್ಲಿ‌ ಹೇಗೆ ಸಾರ್ವಜನಿಕರ ಸೇವೆ ಮಾಡಬೇಕು ಎಂದು ಅವರಿಗೆ ತಿಳಿಸಿದರು.

ನಾಗನಹಳ್ಳಿಯಲ್ಲಿ ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆ ಮಾಡುವುದು ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಕನಸಾಗಿತ್ತು. ಅದರಂತೆ ಪೊಲೀಸ್ ತರಬೇತಿ‌ ಕೇಂದ್ರ ನಮ್ಮ ಭಾಗದ‌ ಹೆಮ್ಮೆಯ ಗುರುತಾಗಿ ನಿಂತಿದೆ. ಈಗ ಸುಂದರ ಹಾಗೂ ಸುಸಜ್ಜಿತ ಸಭಾಂಗಣ ನಿರ್ಮಿಸಿದ್ದನ್ನು ನೋಡಿದರೆ ಅವರು ಕೂಡ ಸಂತಸ ಪಡಲಿದ್ದಾರೆ ಎಂದರು.

ತರಬೇತಿ ಪಡೆದು‌ ಕರ್ತವ್ಯಕ್ಕೆ ಸಜ್ಜಾಗಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿಷ್ಠೆಯಿಂದ‌ ಕೆಲಸ ಮಾಡುವ ಮೂಲಕ ರಾಜ್ಯಕ್ಕೆ ಜಿಲ್ಲೆಗೆ ಹೆಸರು ತರುವ ಕೆಲಸ ಮಾಡಿ ಎಂದು ಶುಭಕೋರಿದರು.

Leave a Reply