ಮೈಸೂರು: ಜ್ಯೋತಿಷಿ ಒಬ್ಬನ ಮಾತು ಕೇಳಿ ನಿಧಿಯ ಆಸೆಗಾಗಿ ಹುಣ್ಣಿಮೆಯ ದಿನದಂದು ವಾಮಾಚಾರ ಮಾಡಿ ಕೂಲಿ ಕಾರ್ಮಿಕನೊಬ್ಬನನ್ನು ಬಲಿ ನೀಡಿರುವ ಭೀಕರ ಘಟನೆ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಬಳಿ ನಡೆದಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಮಲ್ಕುಂದಿ ಗ್ರಾಮದ ಕಟ್ಟಡ ಕಾರ್ಮಿಕ ಸದಾಶಿವ(45) ವಾಮಾಚಾರಕ್ಕೆ ಬಲಿಯಾದ ದುರ್ದೈವಿ. ಸದಾಶಿವ ಅವರನ್ನು ಯಾಮಾರಿಸಿದ ದುಷ್ಕರ್ಮಿಗಳು ಅವರನ್ನು ಮೂರು ದಾರಿ ಕೂಡುವ ಸ್ಥಳಕ್ಕೆ ಕರೆದುಕೊಂಡು ಹೋಗಿ ವಾಮಾಚಾರ ನಡೆಸಿ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಹೊಲಕ್ಕೆ ಹೋಗುತ್ತಿದ್ದಾಗ ಸ್ಥಳೀಯರೊಬ್ಬರು ರಕ್ತದ ಮಡುವಿನಲ್ಲಿ ಬಿದ್ಜಿದ್ದ ದೇಹವನ್ನುಗಮನಿಸಿ ಆತಂಕಗೊಂಡು ಕೂಡಲೇ ಗ್ರಾಮಸ್ಥರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಹುಲ್ಲಳ್ಳಿ ಠಾಣೆಯ ಪಿಎಸ್ಐ ಚೇತನ್ಕುಮಾರ್ ಹಾಗೂ ಇತರ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದಾಗ ವೀಳ್ಯದೆಲೆ, ಅಡಿಕೆ, ನಿಂಬೆಹಣ್ಣು ಮತ್ತು 101 ರೂ.ಗಳ ಜೊತೆಗೆ ಮಾಟಮಂತ್ರದ ಆಚರಣೆಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿವೆ.
ತಕ್ಷಣ ನಂಜನಗೂಡು ಜನರಲ್ ಆಸ್ಪತ್ರೆಗೆ ಸದಾಶಿವ ಅವರನ್ನು ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ಆವೇಳೆಗಾಗಲೇ ಸದಾಶಿವ ಮೃತಪಟ್ಟಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಂಜನಗೂಡು ಡಿಎಸ್ಪಿ ರಘು ನೇತೃತ್ವದ ಪೊಲೀಸ್ ತಂಡ ಹೆಚ್ಚಿನ ತನಿಖೆ ನಡೆಸುತ್ತಿದೆ. ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.




