ಹರ್ನಾಜ್ ಕೌರ್ ಸಂಧು 70ನೇ ಮಿಸ್ ಯೂನಿವರ್ಸ್

4 years ago

21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ ಮತ್ತೊಮ್ಮೆ ದಕ್ಕಿದೆ. ಪಂಜಾಬ್ ಮೂಲದ 21ರ ಹರೆಯದ ಹರ್ನಾಜ್ ಕೌರ್ ಸಂಧು 70ನೇ ಮಿಸ್ ಯೂನಿವರ್ಸ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. 2000ದಲ್ಲಿ ಬಾಲಿವುಡ್ ನಟಿ ಲಾರಾ ದತ್ತ ಈ ಪಟ್ಟ ಅಲಂಕರಿಸಿದ್ದರು. ಅದಾದ ನಂತರ ಇದೀಗ ಮತ್ತೊಮ್ಮೆ ಭಾರತಕ್ಕೆ ಪಟ್ಟ ಒಲಿದಿದೆ.

ಇಸ್ರೇಲ್ ನ ಐಲಾಟ್ ನಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪರುಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸ್ಪರ್ಧಾಳುಗಳನ್ನು ಹಿಮ್ಮೆಟ್ಟಿಸಿ ಹರ್ನಾಜ್ ಕೌರ್ ಮಿಸ್ ಯುನಿವರ್ಸ್ ಪಟ್ಟ ಮುಡಿಗೇರಿಸಿಕೊಂಡರು. ಮೆಕ್ಸಿಕೋದ 2020ರ ಆಂಡ್ರಿಯಾ ಮೆಜಾ ಸಂಧು ಅವರಿಗೆ ಮಿಸ್ ಯುನಿವರ್ಸ್ ಕಿರೀಟ ಹಸ್ತಾಂತರಿಸಿದರು.

Leave a Reply