ದೆಹಲಿ: #COVID19 ಹೊಸ ರೂಪಾಂತರ ತಳಿ #Omicron ಪ್ರಸಾರವಾದಂತೆ ತಡೆಯುವ ನಿಟ್ಟಿನಲ್ಲಿ ಸೋಂಕುಪೀಡಿತ ದೇಶಗಳಿಂದ ಭಾರತಕ್ಕೆ ಬರುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಆರ್‌ಟಿಪಿಸಿಆರ್ ಪರೀಕ್ಷೆಗಾಗಿ ಕಡ್ಡಾಯವಾಗಿ ಮುಂಗಡ ಕಾಯ್ದಿರಿಸಬೇಕು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶನ ನೀಡಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿ ಅನ್ವಯ ಪರೀಕ್ಷೆ ನಡೆಯಲಿದೆ. ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕೊತ್ತ, ಚೆನ್ನೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಡಿ. 20ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.
ಮುಂಗಡ ಕಾಯ್ದಿರಿಸುವಿಕೆಗಾಗಿ ‘ಏರ್ ಸುವಿಧಾ ಪೋರ್ಟಲ್’ನಲ್ಲಿ ಮಾರ್ಪಾಡು ಮಾಡಲಾಗುವುದು. #Omicron ಪತ್ತೆಯಾಗಿರುವ ದೇಶಗಳಲ್ಲಿ ಸಂಚರಿಸಿರುವವರು ಭಾರತಕ್ಕೆ ಬರುವ ಮುನ್ನ ಈ ಪೋರ್ಟಲ್ ಮೂಲಕ ಆರ್‌ಟಿಪಿಸಿಆರ್‌ಗೆ ಮುಂಗಡ ಕಾಯ್ದಿರಿಸಲು ಸಚಿವಾಲಯ ಅವಕಾಶ ನೀಡಿದೆ.



