ಬೆಂಗಳೂರು: KSRTC ಬಸ್ಸುಗಳ ಪ್ರಯಾಣ ದರ ಏರಿಕೆಯ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎನ್ನುವುದನ್ನು ಸಾರಿಗೆ ಸಚಿವ @RLR_BTM ಅವರು ಸ್ಪಷ್ಟಪಡಿಸಿದ್ದಾರೆ ಎಂದು ಕೆಪಿಸಿಸಿ ಹೇಳಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷ ರಾಜು ಕಾಗೆಯವರ ಹೇಳಿಕೆಯನ್ನು ಉಲ್ಲೇಖಿಸಿ ವರದಿಯಾಗಿರುವ ಸುದ್ದಿಸಂಸ್ಥೆಯ ವರದಿಯೊಂದನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆಯ ಆರೋಪವನ್ನು ಹೊರಿಸಿತ್ತು. ಜನರ ಜೇಬಿಗೆ ಕನ್ನ ಹಾಕುವುದೇ ಕಾಂಗ್ರೆಸ್ ಸರ್ಕಾರದ ಆಡಳಿತದ ಧ್ಯೇಯ!! ಎಂದಿತ್ತು.
ಅಲ್ಲದೇ, ಈಗಾಗಲೇ ಹಾಲು-ತರಕಾರಿ-ದಿನಸಿ ಬೆಲೆಯೇರಿಸಿರುವ ಕಾಂಗ್ರೆಸ್ ಸರ್ಕಾರ, ಈಗ ಬಸ್ ಪ್ರಯಾಣದ ದರವನ್ನು ಶೇ.15 ರಿಂದ 20ರಷ್ಟನ್ನು ಹೆಚ್ಚಿಸಲು ಚಿಂತಿಸಿರುವುದು ಕನ್ನಡಿಗರಿಗೆ ಬೆಲೆಯೇರಿಕೆಯ ಗಾಯದ ಮೇಲೆ ಬರೆ ಎಳೆಯುವುದಕ್ಕೆ ಸಮ ಎಂದು ಬಿಜೆಪಿ ಹೇಳಿತ್ತು.
ಜನ ವಿರೋಧಿ ಸಿಎಂ ಸಿದ್ದರಾಮಯ್ಯನವರೇ, ಜನಾಕ್ರೋಶದ ನಡುವೆಯೂ ಬಸ್ ದರವನ್ನು ಹೆಚ್ಚಿಸಿದರೆ, ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಚ್ಚರ ಎಂದು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದು, #PickPocketSarkara #CongressLootsKarnataka ಹ್ಯಾಷ್ ಟ್ಯಾಗ್ ಬಳಸಿ ಅಸಮಾಧಾನ ವ್ಯಕ್ತಪಡಿಸಿತ್ತು.
ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲೇ ತಿರುಗೇಟು ನೀಡಿರುವ ಕೆಪಿಸಿಸಿ, @BJP4Karnataka ನಾಯಕರು ಕಪೋಲಕಲ್ಪಿತ ವರದಿಗಳನ್ನು ಇಟ್ಟುಕೊಂಡು ಸುಳ್ಳು ಹಬ್ಬಿಸುವುದನ್ನು ಬಿಟ್ಟು, ಕಳೆದ 10 ವರ್ಷದಲ್ಲಿ ವಾಹನ ಬಿಡಿಭಾಗಗಳ ಬೆಲೆ ಏರಿಕೆಯಾಗಿದ್ದರ ಬಗ್ಗೆ, ಇಂಧನ ತೈಲಗಳ ಬೆಲೆ ಏರಿಕೆಯ ಬಗ್ಗೆ, ರೈಲು ಪ್ರಯಾಣ ದರ ಏರಿಕೆಯ ಬಗ್ಗೆ ಉತ್ತರ ನೀಡಲಿ ಎಂದು ಸವಾಲೊಡ್ಡಿದೆ.
ಕೇಂದ್ರ ಸರ್ಕಾರದ ಬೆಲೆ ಏರಿಕೆಯ ನೀತಿಯಿಂದಾಗಿ ರಾಜ್ಯ ಸರ್ಕಾರಗಳ ಮೇಲೆ ಅನಿವಾರ್ಯ ಹೊರೆ ಆಗಿರುವ ಬಗ್ಗೆ ಜನತೆಗೆ ಉತ್ತರಿಸಲಿ ಎಂದು ಸವಾಲೆಸೆದಿದೆ.




