ಬಳ್ಳಾರಿ: ಡೆಂಗ್ಯು ಜ್ವರ ನಿಯಂತ್ರಣಕ್ಕಾಗಿ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ನಿರ್ಮೂಲನಾ ದಿನ ಆಚರಿಸಲಾಗುತ್ತಿದ್ದು, ಜಿಲ್ಲೆಯಾದ್ಯಾಂತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ಷೇತ್ರ ಸಿಬ್ಬಂದಿ ಆಶಾ ಕಾರ್ಯಕರ್ತೆಯರ ತಂಡವು ಮನೆಗಳಿಗೆ ಆಗಮಿಸಿ ಡೆಂಗ್ಯು ರೋಗ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮ ತಿಳಿಸುತ್ತಾರೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು ತಿಳಿಸಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಬಳಕೆಗಾಗಿ ನೀರು ತುಂಬುವ ಮುಚ್ಚಳ ಮುಚ್ಚದಿರುವ ಸಿಮೆಂಟ್ ತೊಟ್ಟಿ, ಕಲ್ಲನ ಡೋಣಿ, ಪ್ಲಾಸ್ಟಿಕ್ ಡ್ರಮ್, ಬ್ಯಾರಲ್ಗುಳಲ್ಲಿ ಹಾಗೂ ಫ್ರಿಜ್ ಹಿಂಭಾಗದಲ್ಲಿ, ಹೂವಿನ ಕುಂಡಲ, ಬಿಸಾಡಿದ ಟೈರ್, ತಗಡಿನ ಟಿನ್, ಪ್ಲಾಸ್ಟಿಕ್ ಕಪ್ ಮುಂತಾದವುಗಳಲ್ಲಿ ನೀರು ನಿಂತು ಡೆಂಗ್ಯು ರೋಗ ಹರಡುವ ಈಡಿಸ್ ಇಜಿಪ್ಟೈ ಸೊಳ್ಳೆಯು ಮೊಟ್ಟೆಗಳನ್ನು ಇಟ್ಟು ಸಂತಾನವೃದ್ದಿ ಮಾಡುತ್ತವೆ ಎಂದಿದ್ದಾರೆ.
ಮೊಟ್ಟೆಗಳು ಒಡೆದು ಲಾರ್ವಾ, ಪುಪಾ (ಸೊಳ್ಳೆಯ ಮರಿಗಳು ) ಹಂತದಿಂದ ಸೊಳ್ಳೆಗಳಾಗಿ ಹೊರಬಂದು ಪುನಃ ನಮ್ಮನ್ನು ಕಚ್ಚುತ್ತವೆ. ಹಾಗಾಗಿ ನೀರು ಸಂಗ್ರಹಕಗಳನ್ನು ಚೆನ್ನಾಗಿ ತಿಕ್ಕಿ ತೊಳೆದು ಒಣಗಿಸಿ ನೀರು ತುಂಬಬೇಕು. ಅಲ್ಲದೆ ಸೊಳ್ಳೆ ನುಸುಳದಂತೆ ಬಟ್ಟೆ ಕಟ್ಟಬೇಕು. ಮುಚ್ಚಳ ಮುಚ್ಚಬೇಕು. ಫ್ರಿಜ್ ಹಿಂಭಾಗದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಅನಗತ್ಯವಾದ ವಸ್ತುಗಳನ್ನು ತ್ಯಾಜ್ಯ ವಿಲೇವಾರಿ ವಾಹನದಲ್ಲಿ ವಿಲೇವಾರಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಡೆಂಗ್ಯು ರೋಗ ಹರಡುವ ಈಡಿಸ್ ಇಜಿಪ್ಟೈ ಸೊಳ್ಳೆಯು ಹಗಲು ಹೊತ್ತಿನಲ್ಲಿ ಕಚ್ಚುವುದರಿಂದ ಮಕ್ಕಳು, ವಯೋವೃದ್ದರು ಗರ್ಭಿಣಿ, ಬಾಣಂತಿಯರು ವಿಶ್ರಾಂತಿ ಪಡೆಯುತ್ತಿದ್ದರೆ ಸೊಳ್ಳೆ ಪರದೆ ಬಳಸಬೇಕು. ಕಿಟಕಿಗಳಿಗೆ ಜಾಲರಿ ಅಳವಡಿಸಬೇಕು. ಸೊಳ್ಳೆ ನಿವಾರಕಗಳನ್ನು ಬಳಸುವಾಗ 10-15 ನಿಮಿಷ ಕಿಡಿಕಿ ಬಾಗಿಲು ಹಾಕಿ ನಂತರ ತೆರೆಯಬೇಕು. ಈ ವೇಳೆ ಕುಟುಂಬದ ಸದಸ್ಯರೆಲ್ಲೂ ಮನೆಯ ಹೊರಗೆ ಇರಲು ಆದ್ಯತೆ ನೀಡಬೇಕು. ಮನೆಯ ಸುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯಾದ್ಯಾಂತ ಅಭಿಯಾನದ ರೂಪದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿಗಳ ನೇತೃತ್ವದಲ್ಲಿ ಮನೆ ಮನೆಗೆ ವೈದ್ಯಕೀಯ ತಂಡ ಪ್ರತಿ ಶುಕ್ರವಾರ ಆಗಮಿಸಿದಾಗ ಈಡಿಸ್ ಇಜಿಪ್ಟೈ ಸೊಳ್ಳೆಯನ್ನು ನಿರ್ಮೂಲನೆ ಕೈಗೊಳ್ಳಲು ಸಹಕರಿಸುವಂತೆ ಮತ್ತು ಯಾವುದೇ ಜ್ವರ ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಕೋರಿದ್ದಾರೆ.




