ಕಲಘಟಗಿ: ಅನ್ನಭಾಗ್ಯ ಯೋಜನೆಯ ನೇರ ನಗದು ಹಣ ಜಮೆ ಆಗದ ಪ್ರಕರಣಗಳಲ್ಲಿ ಆಧಾರ್ ಜೋಡಣೆ ಮತ್ತು ಬ್ಯಾಂಕ್ ಹೊಸ ಖಾತೆ ತೆರೆಯಲು ಅನಕೂಲವಾಗುವಂತೆ ಆಯ್ದ ನಗರ ಹಾಗೂ ಗ್ರಾಮೀಣ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಜೋಡಣೆ ಸಲುವಾಗಿ ಜುಲೈ 1 ರಿಂದ 7 ರ ವರೆಗೆ ಸಪ್ತಾಹ ಅಭಿಯಾನ ಜಿಲ್ಲೆಯಲ್ಲಿ ಆಯೋಜಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಕಾರ್ಮಿಕ ಸಚಿವ ಸಂತೋಷ ಲಾಡ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಇತರ ಇಲಾಖೆಗಳ ಸಹೋಯಗದಲ್ಲಿ ಆಯೋಜಿಸಿದ್ದ ಜನ ಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜನಸಂಪರ್ಕ, ಜನಸ್ಪಂದನಾ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮವಹಿಸಲಾಗಿದೆ. ಸರಕಾರದ ಆಶಯದಂತೆ ಜನಸ್ನೇಹಿ, ಜನಪರ ಆಡಳಿತ ನೀಡಲು ಜಿಲ್ಲಾಡಳಿತ ಕ್ರಮವಹಿಸಿದೆ ಎಂದರು.
ತಾಲೂಕು, ಇಲಾಖೆಗಳ ಹಂತದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದಲ್ಲಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಂಪರ್ಕಿಸಬಹುದು. ಸರಕಾರದ ಯೋಜನೆಗಳ ಪ್ರಯೋಜನಗಳಿಗೆ ಅರ್ಹರಾದ ಎಲ್ಲ ಜನರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಜಿಲ್ಲೆಯಲ್ಲಿ ಜನಸ್ಪಂದನ ಯಶಸ್ವಿಯಾಗಿದೆ. ಜನರು ತಮ್ಮ ಕಂದಾಯ ಹಾಗೂ ಇತರ ಕಾರ್ಯಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲಿಯುವದನ್ನು ತಪ್ಪಿಸಿ, ಇಲಾಖೆ ಅಧಿಕಾರಿಗಳೇ ಜನರ ಬಳಿ ಹೋಗಿ, ಅವರ ಸಮಸ್ಯೆ ಬಗೆಹರಿಸುವ ಮಹತ್ವದ ಉದ್ದೇಶದಿಂದ ಈ ಜನಸ್ಪಂದನ, ಜನಸಂಪರ್ಕ ಕಾರ್ಯಕ್ರಮಗಳನ್ನು ಸರಕಾರ ಮಾಡುತ್ತಿದೆ ಎಂದರು.
ಜನಸ್ಪಂದನ ಸಭೆಗಳಲ್ಲಿ ಸ್ವೀಕರಿಸುವ ಸಾರ್ವಜನಿಕ ಅರ್ಜಿಗಳನ್ನು ಗಣಕೀಕೃತಗೊಳಿಸಲಾಗುತ್ತಿದೆ. ಅರ್ಜಿಯ ಸ್ಥಿತಿಗತಿಗಳನ್ನು ಜಿಲ್ಲಾ, ರಾಜ್ಯಮಟ್ಟದಲ್ಲಿ ಮತ್ತು ಮುಖ್ಯಮಂತ್ರಿಗಳ ಕಚೇರಿಯಿಂದ ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ. ಬರುವ ಜುಲೈ 15 ರೊಳಗೆ ಎಲ್ಲ ಸಾರ್ವಜನಿಕ ಅರ್ಜಿ, ಅಹವಾಲುಗಳನ್ನು ವಿಲೇವಾರಿ ಮಾಡಲಾಗುವುದು ಎಂದರು.
ಆಧಾರ, ಆರ್.ಟಿ.ಸಿ ಜೋಡಣೆ ಶೇ.65 ರಷ್ಟು ಪ್ರಗತಿ: ರಾಜ್ಯ ಸರಕಾರ ಕಂದಾಯ ಇಲಾಖೆ ಮೂಲಕ ಕಂದಾಯ ದಾಖಲೆಗಳಲ್ಲಿ ಕಾಂತಿಕಾರಕ ಬದಲಾವಣೆಗಳನ್ನು ತರುವ ಮೂಲಕ ರೈತಸ್ನೇಹಿ ಗೊಳಿಸುತ್ತಿದೆ. ರೈತರ ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ.65 ರಷ್ಟು ಆಧಾರ ಮತ್ತು ಆರ್.ಟಿ.ಸಿ ಜೋಡಣೆ ಆಗಿದೆ. ಕಲಘಟಗಿ ತಾಲೂಕಿನಲ್ಲಿ ಶೇ.64 ರಷ್ಟು ಆಗಿದೆ. ಉಳಿದ ರೈತರು ಈ ಮಹತ್ವದ ಯೋಜನೆಯಲ್ಲಿ ಭಾಗವಹಿಸಿ, ತಮ್ಮ ಆರ್.ಟಿ.ಸಿ, ಆಧಾರ್ ಜೋಡಣೆ ಮಾಡಿಕೊಳ್ಳಬೇಕು ಎಂದರು.
ಪೌತಿ ಅಭಿಯಾನ ಆಯೋಜನೆ: ರೈತರ ಪಹಣಿಗಳಿಗೆ ಆಧಾರ ಜೋಡಣೆ ಸಂದರ್ಭದಲ್ಲಿ ಇಲ್ಲಿವರೆಗೆ ಸುಮಾರು 30 ಸಾವಿರ ಪೌತಿ ಖಾತೆಗಳು ಪತ್ತೆ ಆಗಿವೆ. ಅನೇಕ ರೈತರು ನಿಯಮಾನುಸಾರ ಪಹಣಿ ಬದಲಾಯಿಸಿಕೊಳ್ಳದೇ, ಇನ್ನೂ ಪೌತಿ ಆದವರ ಹೆಸರಿನಲ್ಲಿಯೇ ಉಳಿಸಿಕೊಂಡಿದ್ದಾರೆ. ಆದ್ದರಿಂದ ರೈತರ ಅನುಕೂಲಕ್ಕಾಗಿ ಜಿಲ್ಲಾಡಳಿತದಿಂದ ಪೌತಿ ಅಭಿಯಾನ ಮಾಡಿ, ಆಯಾ ಗ್ರಾಮಗಳ ಹಂತದಲ್ಲಿ ಪೌತಿ ಖಾತಾ ಬದಲಾವಣೆಗೆ ಅರ್ಜಿ ಸ್ವೀಕರಿಸಲು ಪೌತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ರೈತರು ಇದರ ಸದುಪಯೋಗ ಪಡೆಯಬೇಕೆಂದು ಅವರು ಹೇಳಿದರು.




