ಬೆಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಆಡಳಿತದ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು (AI) ಪರಿಣಾಮಕಾರಿಯಾಗಿ ಬಳಸುವ ಕುರಿತು ಯುಕೆ ಮೈಕ್ರೋಸಾಫ್ಟ್ ಕಂಪನಿ ಜೊತೆ ನಿನ್ನೆ ಲಂಡನ್ ಟೆಕ್ ವೀಕ್ ಸಮ್ಮಿಟ್ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಯುಕೆ ಮತ್ತು ಜಾಗತಿಕ ಮಟ್ಟದಲ್ಲಿ ಜಗತ್ತಿನ ವಿವಿಧ ಕೇಂದ್ರಗಳಲ್ಲಿ ಕ್ವಾಂಟಮ್ ಟೆಕ್ ಮತ್ತು ಡಿಜಿಟಲ್ ರೂಪಾಂತರಗಳಲ್ಲಿ ಆಗುತ್ತಿರುವ ಕುತೂಹಲಕಾರಿ ಬದಲಾವಣೆಗಳನ್ನು ಕುರಿತು ಎರಡು ರಾಷ್ಟ್ರಗಳ ಮುಖಂಡರ ಸಭೆಯಲ್ಲಿ ಗಮನ ಸೆಳೆಯಲಾಯಿತು ಎಂದಿದ್ದಾರೆ.
ಇದರೊಂದಿಗೆ ಮೈಕ್ರೋಸಾಫ್ಟ್ ಯುಕೆ, ಸ್ಟಾರ್ಟ್ಅಪ್ ಜಿನೋಮ್, ಅಟ್ಕಿನ್ಸ್ ರಿಯಾಲಿಸ್, ಹ್ಯಾಮರ್ಸ್ಮಿತ್, ಫಲ್ಹಾಮ್ ಮುಂತಾದ ಐಟಿ ಕಂಪನಿಗಳೊಂದಿಗೆ ಸಂವಾದ ನಡೆಸಿ, ಆರೋಗ್ಯ ಮತ್ತು ಆಡಳಿತ ಕ್ಷೇತ್ರದಲ್ಲಿ AI ಚೌಕಟ್ಟುಗಳು, ಕ್ವಾಂಟಮ್ ಟೆಕ್, ಜಾಗತಿಕ ಆರಂಭಿಕ ಪರಿಸರ ವ್ಯವಸ್ಥೆ ಸೇರಿದಂತೆ ಬದಲಾಗುತ್ತಿರುವ ಜಾಗತಿಕ ಸನ್ನಿವೇಶಗಳನ್ನು ಕುರಿತು ಚರ್ಚಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಮೈಕ್ರೋಸಾಫ್ಟ್ ಕಾರ್ಪೊರೇಷನ್ ಒಂದು ಅಮೇರಿಕನ್ ಬಹುರಾಷ್ಟ್ರೀಯ ನಿಗಮ ಮತ್ತು ತಂತ್ರಜ್ಞಾನ ಕಂಪನಿಯಾಗಿದ್ದು, ಇದು ಮಾರುಕಟ್ಟೆಯ ವಿಕಸನದ ಅಗತ್ಯಗಳನ್ನು ಪೂರೈಸುವ ನವೀನ ಪರಿಹಾರಗಳನ್ನು ನೀಡಲು AI ತಂತ್ರಜ್ಞಾನ ಬಳಸಿಕೊಂಡು ಸೂಕ್ತ ವೇದಿಕೆಗಳು ಮತ್ತು ಸಾಧನಗಳನ್ನು ರಚಿಸುತ್ತಿದೆ. ಕಂಪನಿಯು AI ತಂತ್ರಜ್ಞಾನವನ್ನು ವಿಶಾಲವಾಗಿ ಲಭ್ಯವಾಗುವಂತೆ ಮಾಡಲು ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಬದ್ಧವಾಗಿದೆ ಎಂದು ಸಭೆಗೆ ತಿಳಿಸಲಾಗಿದೆ ಎಂದಿದ್ದಾರೆ.
ಇದರೊಂದಿಗೆ ನಿರಂತರ ಚರ್ಚಾ ಸಭೆಗಳಲ್ಲಿ ಸ್ಟಾರ್ಟಪ್ ಜಿನೋಮ್ನ ಸಂಸ್ಥಾಪಕ ಮತ್ತು ಸಿಇಒ ಜೆ.ಎಫ್.ಗೌಥಿಯರ್ ಅವರನ್ನು ಭೇಟಿ ಮಾಡಲಾಯಿತು. ಸ್ಟಾರ್ಟ್ಅಪ್ ಜಿನೋಮ್ ವಿಶ್ವ-ಪ್ರಮುಖ ನಾವೀನ್ಯತೆ ಪರಿಸರ ವ್ಯವಸ್ಥೆಯ ಅಭಿವೃದ್ಧಿ ಸಂಸ್ಥೆಯಾಗಿದ್ದು, 55 ಕ್ಕೂ ಹೆಚ್ಚು ದೇಶಗಳಲ್ಲಿ 160 ಕ್ಕೂ ಹೆಚ್ಚು ಆರ್ಥಿಕ ಮತ್ತು ನಾವೀನ್ಯತೆ ಸಚಿವಾಲಯಗಳು ಮತ್ತು ಸಾರ್ವಜನಿಕ ಹಾಗೂ ಖಾಸಗಿ ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.




