ಟಿಡಿ ಮತ್ತು ಅಪ್ಲೈಬೋರ್ಡ್ ನಡುವೆ ನೂತನ ಸಹಯೋಗ
ಬೆಂಗಳೂರು, ಮೇ 09, 2024: ಟಿಡಿ ಮತ್ತು ಅಪ್ಲೈಬೋರ್ಡ್, ಕೆನಡದಲ್ಲಿ ಅಧ್ಯಯನ ಮಾಡಲು ಬಯಸುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಬೆಂಬಲಿಸಲು ತಮ್ಮ ನಡುವಿನ ಹೊಸ ಸಹಯೋಗವೊಂದನ್ನು ಪ್ರಕಟಿಸಿವೆ.
- ಚಿತ್ರದುರ್ಗ ಜಿಲ್ಲೆಯ ವಸತಿ ರಹಿತರಿಗೆ ಸುವರ್ಣಾವಕಾಶ
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
ವಿದ್ಯಾರ್ಥಿಗಳ ಚಲನಶೀಲತೆಯ ಪ್ರಮುಖ ವೇದಿಕೆಯಾದ ಅಪ್ಲೈಬೋರ್ಡ್: ಕೆನಡದ ಎರಡನೇ ಅತಿ ದೊಡ್ಡ ಬ್ಯಾಂಕ್ ಮತ್ತು ಉತ್ತರ ಅಮೇರಿಕಾದ ಆರನೇ ಅತಿದೊಡ್ಡ ಸ್ವತ್ತುಗಳ ಬ್ಯಾಂಕ್ ಆಗಿರುವ ಟಿಡಿ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.
ಈ ಪಾಲುದಾರಿಕೆಯ ಉದ್ದೇಶ: ಅನ್ಯ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಕೆನಡದಲ್ಲಿ ಸುಗಮವಾಗಿ ಅಧ್ಯಯನ ಮಾಡಲು ಅಗತ್ಯವಿರುವ ಸಂಪನ್ಮೂಲಗಳು ಮತ್ತು ಸಾಧನಗಳನ್ನು ಒದಗಿಸುವುದು.
ಅಪ್ಲೈಬೋರ್ಡ್ ನ ಸುರಕ್ಷಿತ ಮತ್ತು ಖಾಸಗಿ ತಂತ್ರಜ್ಞಾನ, ಸ್ಟಡಿ ಪರ್ಮಿಟ್ ಅಪ್ಲಿಕೇಶನ್ಗಳನ್ನು ಬಲಪಡಿಸಲು ಸಹಾಯ ಮಾಡಲು ಅಪ್ಲೈಪ್ರೂಫ್ ಮೂಲಕ ಹಣಕಾಸಿನ ಬೆಂಬಲದ ಬಗ್ಗೆ ಪರಿಶೀಲಿಸಬಹುದಾದ ಪುರಾವೆಗಳನ್ನು ಒದಗಿಸುತ್ತದೆ.
“ಕೆನಡದಲ್ಲಿ ಅಧ್ಯಯನ ಮಾಡಲು ಬಯಸುವ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳಿಗೆ ನಾವು ನೆರವಾಗುವ ಅಪ್ಲೈಬೋರ್ಡ್ ಜೊತೆಗಿನ ಈ ಸಹಯೋಗದ ಬಗ್ಗೆ ಸುದ್ದಿಯನ್ನು ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ.” ಎಂದು ಕೆನಡದ ಪರ್ಸನಲ್ ಬ್ಯಾಂಕಿಂಗ್, ಟಿಡಿ ಬ್ಯಾಂಕ್ ಸಮೂಹದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಸೋನಾ ಮೆಹ್ತಾ ಹೇಳಿದರು.
ಮೆಟಿ ಬಸಿರಿ, ಸಹ-ಸಂಸ್ಥಾಪಕರು ಮತ್ತು ಸಿಇಒ, ಅಪ್ಲೈಬೋರ್ಡ್: “150 ವರ್ಷಗಳಿಂದ ಕೆನಡಿಯನ್ನರಿಗೆ ಆರ್ಥಿಕ ಪರಿಹಾರಗಳನ್ನು ಒದಗಿಸುತ್ತಿರುವವ ಟಿಡಿ ಪರಂಪರೆ ಮತ್ತು ಪ್ರಮುಖ ವಿದ್ಯಾರ್ಥಿ ಚಲನಶೀಲತೆಯ ವೇದಿಕೆಯಾಗಿರುವ ಅಪ್ಲೈಬೋರ್ಡ್ ನ ಅನುಭವ ಗಳ ಮೂಲಕ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಅನ್ವೇಷಣೆಗಳಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಬೆಂಬಲ ಮತ್ತು ಮಾರ್ಗದರ್ಶನಗಳು ದೊರೆಯುತ್ತವೆ ಎಂಬುದು ನಮ್ಮ ನಿರೀಕ್ಷೆ. ಇನ್ನಷ್ಟು ತಿಳಿಯಲು ಭೇಟಿ ನೀಡಿ: www.applyboard.com/services/td-student-gic-program




