ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಗರಕ್ಕೆ ತಂದ ಇನ್ನೋವೇಟಿವ್ ಫಿಲಂ ಅಕಾಡೆಮಿ

5 years ago

ನಾಲ್ಕು ದಿನಗಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಗರಕ್ಕೆ ತಂದ ಇನ್ನೋವೇಟಿವ್ ಫಿಲಂ ಅಕಾಡೆಮಿ

ನಾಲ್ಕನೇ ಆವೃತ್ತಿಯ ಚಲನಚಿತ್ರೋತ್ಸವ

30 ದೇಶಗಳ 45 ಭಾಷೆಗಳಲ್ಲಿನ 108 ಚಲನಚಿತ್ರಗಳ ಪ್ರದರ್ಶನ

ಬೆಂಗಳೂರು: ಭಾರತದ ಖ್ಯಾತ ಚಲನಚಿತ್ರ ಅಧ್ಯಯನ ಸಂಸ್ಥೆಗಳಲ್ಲಿ ಒಂದಾಗಿರುವ ಇನ್ನೋವೇಟಿವ್ ಫಿಲಂ ಅಕಾಡೆಮಿ ಈಗ ಇನ್ನೋವೇಟಿವ್‌ಅಂತರರಾಷ್ಟ್ರೀಯ ಚಲನಚಿತ್ರೋತ್ಸವ-2021ರ 4ನೇ ಆವೃತ್ತಿಯನ್ನು ಸಾದರಪಡಿಸಲು ಸಜ್ಜಾಗಿದೆ. ಅಕ್ಟೋಬರ್ 14ರಿಂದ ಆರಂಭವಾಗಲಿರುವ ಈ ಚಲನಚಿತ್ರೋತ್ಸವದಲ್ಲಿ 30 ದೇಶಗಳ ಹಾಗೂ ವಿಸ್ತಾರವಾದ ಶೈಲಿಗಳನ್ನು ಒಳಗೊಂಡ 45 ಭಾಷೆಗಳ 108 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು.

ಥೈಲೆಂಡ್, ಇಂಡೋನೇಷ್ಯಾ, ಆಸ್ಟ್ರಿಯಾ, ಸ್ಪೇನ್, ಪೊಲೆಂಡ್, ದಕ್ಷಿಣಕೊರಿಯಾ, ಶ್ರೀಲಂಕಾ ಮುಂತಾದ ಹಲವಾರು ದೇಶಗಳ ಗಣ್ಯರನ್ನುಇದು ಒಂದುಗೂಡಿಸಲಿದೆ. ಈ ಚಲನಚಿತ್ರೋತ್ಸವ ಬೆಂಗಳೂರು ಮಾರತಹಳ್ಳಿಯ ಇನ್ನೋವೇಟಿವ್ ಮಲ್ಟಿಫ್ಲೆಕ್ಸ್ನ 9 ಸ್ಕ್ರೀನ್‌ಗಳಲ್ಲಿ ಪ್ರದರ್ಶಿತವಾಗಲು ಸಿದ್ಧವಾಗಿದೆ.ಭಾಗವಹಿಸುವಲ್ಲಿಆಸಕ್ತರು ವೆಬ್‌ಸೈಟ್- http://innovativefilmacademy.com/iiff-2021/ ರಲ್ಲಿ ನೋಂದಣಿ ಮಾಡಿಕೊಳ್ಳಬಹುದು.

ಚಲನಚಿತ್ರ ಪ್ರದರ್ಶನವಲ್ಲದೆ ಈ ಉತ್ಸವ ಹಲವಾರು ಕಾರ್ಯಾಗಾರಗಳು ಮತ್ತು ಚರ್ಚಾಕೂಟಗಳಿಗೆ ಆತಿಥ್ಯ ವಹಿಸಲಿದೆ. ಯುವ ಮನಸ್ಸುಗಳು ಪ್ರಮುಖ ನಿಯೋಗಿಗಳಿಂದ ಚಲನಚಿತ್ರ ತಯಾರಿಕಾ ಕಲೆಯನ್ನು ಕಲಿಯಲು ಇವು ನೆರವಾಗಲಿವೆ. ಈ ಉತ್ಸವ ಅತ್ಯುತ್ತಮ ವಿಮರ್ಶೆ ಮತ್ತು ಮೆಚ್ಚುಗೆ ಪಡೆದಿರುವ ಭಾರತೀಯ ಚಲನಚಿತ್ರಗಳ ಜೊತೆಗೆ ಅಂತಾರಾಷ್ಟ್ರೀಯ ಚಲನಚಿತ್ರಗಳ ಸಂಗ್ರಹವನ್ನುಪ್ರದರ್ಶಿಸಲಿದೆ. ಅಲ್ಲದೆ, ಚಲನಚಿತ್ರ ತಯಾರಿಕೆಯನ್ನು ವಿಶೇಷವಾಗಿ ಆಯ್ದ ಪ್ರಶಸ್ತಿಗಳ ಮೂಲಕ ಗುರುತಿಸಿ ಗೌರವಿಸಲಾಗಿದೆ.

ಇನ್ನೋವೇಟಿವ್ ಫಿಲಂ ಅಕಾಡೆಮಿಯ ಸ್ಥಾಪಕ ಸರವಣ ಪ್ರಸಾದ್‌ ಐಐಎಫ್‌ಎಫ್ 2021 ಚಲನಚಿತ್ರೋತ್ಸವ ಕುರಿತು ಪ್ರತಿಕ್ರಿಯಿಸಿ, ಇನ್ನೋವೇಟಿವ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ -2021ರ 4ನೇ ಆವೃತ್ತಿಗೆ ಆತಿಥ್ಯ ವಹಿಸಲು ನಾವು ಅಪಾರ ಹೆಮ್ಮೆ ಪಡುತ್ತೇವೆ. ಅಲ್ಲದೆ, ಅಪಾರ ಉತ್ಸಾಹವನ್ನು ಹೊಂದಿದ್ದೇವೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ಆವಿಷ್ಕರಿಸಲು ಮತ್ತು ಗಡಿಯಾಚೆ ವ್ಯವಹಾರವನ್ನು ವಿಸ್ತರಿಸುವುದಕ್ಕೆ ಭಾರತೀಯ ಚಲನಚಿತ್ರ ಸಮುದಾಯಕ್ಕೆ ಇದು ಒಂದು ಅವಕಾಶವಾಗಲಿದೆ ಎಂದರು.

30ಕ್ಕೂ ಹೆಚ್ಚಿನ ವೈವಿಧ್ಯಪೂರ್ಣ ದೇಶಗಳಿಂದ ವಿಸ್ತಾರವಾದ ಶ್ರೇಣಿಯ 108 ಚಲನಚಿತ್ರಗಳ ಜೊತೆಗೆ ಜಗತ್ತಿನ ಸಿನಿಮಾದ ಅತ್ಯುತ್ತಮವಾದುದ್ದನ್ನು ಪ್ರದರ್ಶಿಸಲು ನಾವು ಶ್ರಮಿಸುತ್ತಿದ್ದೇವೆ. ಒಂದೇ ಸೂರಿನಡಿ ಅಂತರರಾಷ್ಟ್ರೀಯ ಚಲನಚಿತ್ರಗಳನ್ನು ವೀಕ್ಷಿಸಲು ಸಿನಿಮಾಪ್ರಿಯರಿಗೆ ಇದು ಅನನ್ಯ ಅನುಭವವಾಗಲಿದೆ ಎಂದರು.

ಅಲ್ಲದೆ, ವಿಸ್ತಾರವಾದ ಶ್ರೇಣಿಯ ಭಾಷೆಗಳಲ್ಲಿನ ಸಿನಿಮಾ ತಯಾರಿಕೆಯ ಸೂಕ್ಷ್ಮತೆಗಳನ್ನು ಕಲಿಯಲು ಚಲನಚಿತ್ರ ಕಲಿಕೆಯಲ್ಲಿಆಕಾಂಕ್ಷೆ ಹೊಂದಿರುವವರನ್ನು ಪ್ರೋತ್ಸಾಹಿಸಲು ನಾವು ಇಚ್ಛಿಸುತ್ತೇವೆ ಎಂದರು.

ಈ ಚಲನಚಿತ್ರ ಉತ್ಸವ ಅಕ್ಟೋಬರ್ 14, 2021ರಂದು ಉದ್ಘಾಟನೆಯಾಗಲಿದೆ. ಅಕ್ಟೋಬರ್ 15, 2021ರಿಂದ ಸಾರ್ವಜನಿಕರು ಭಾಗವಹಿಸಲು ಈ ಕಾರ್ಯಕ್ರಮ ಮುಕ್ತವಾಗಿರುತ್ತದೆ. ಚಲನಚಿತ್ರೋತ್ಸವಕ್ಕೆ ನೋಂದಣಿ ತೆರೆದಿದ್ದು, ಭಾಗವಹಿಸಲು ಆಸಕ್ತಿ ಇರುವವರು http://innovativefilmacademy.com/iiff-2021/ಗೆ ಲಾಗಾನ್ ಮಾಡಿ ಚಲನಚಿತ್ರ ಉತ್ಸವದ ವಿವರಗಳು ಮತ್ತು ವೇಳಾಪಟ್ಟಿಯನ್ನು ಪಡೆಯಬಹುದು. ಅಕ್ಟೋಬರ್ 17, 2021ರಂದು ಚಲನಚಿತ್ರೋತ್ಸವ ಮುಕ್ತಾಯವಾಗಲಿದೆ.

contact for more details: vinod@brand-comm.com

Leave a Reply