ಬೆಂಗಳೂರು: ಹಿಂದೂ ಧರ್ಮ ರಕ್ಷಣೆಗಾಗಿ ದೇವರಿಂದಲೇ ಸೃಷ್ಟಿಯಾದವರಂತೆ ಆಡುವ ಬಿಜೆಪಿ ನಾಯಕರೇ ಸನಾತನ ಧರ್ಮ ರಕ್ಷಣೆ ಅಂದ್ರೆ ಇದೇನಾ? ನಿಮ್ಮ ದೇವರ ಮೇಲಿನ ಭಕ್ತಿ ಇಷ್ಟೇನಾ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
4 ವರ್ಷಗಳಿಂದ ಉತ್ತರಪ್ರದೇಶದಲ್ಲಿ ಸಿಎಂ ಆದಿತ್ಯನಾಥ್ ದೇವಾಲಯಗಳಿಗೆ ಹಣ ಬಿಡುಗಡೆ ಮಾಡದಿರುವ ವರದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ದಿನೇಶ್ ಗುಂಡೂರಾವ್, ಸ್ವಯಂಘೋಷಿತ ಸಂತ ಯೋಗಿ ಆದಿತ್ಯನಾಥ್ ಸರ್ಕಾರ ಬರೋಬ್ಬರಿ 4 ವರ್ಷಗಳಿಂದ ದೇಗುಲಗಳಿಗೆ ಬಿಡಿಗಾಸನ್ನೂ ಕೊಟ್ಟಿಲ್ಲವೆಂದು ಉತ್ತರ ಪ್ರದೇಶದ ದೇವಾಲಯಗಳು ಹಾಗೂ ಟ್ರಸ್ಟ್ ಗಳು ಹೈಕೋರ್ಟ್ಗೆ ಹೋಗಿರೋದನ್ನು ನೋಡಿದರೆ ಬಿಜೆಪಿಗರ ಹಿಂದುತ್ವ ಪ್ರೀತಿ ಎಷ್ಟಿದೆಯೆಂದು ತಿಳಿಯುತ್ತದೆ ಎಂದಿದ್ದಾರೆ.
ಬಿಜೆಪಿಯವರು ಅಬ್ಬರಿಸುವ ಹಿಂದುತ್ವ, ಹಿಂದೂ ಧರ್ಮ ರಕ್ಷಣೆ ಕೇವಲ ಚುನಾವಣಾ ದಾಳವಷ್ಟೆ. ಚುನಾವಣೆಗಳು ಹತ್ತಿರ ಬಂದಾಗ ಮಾತ್ರ ಹಿಂದುತ್ವದ ಹೆಸರಲ್ಲಿ ಬಿಜೆಪಿಯವರು ಬೀದಿಗಿಳಿಯುತ್ತಾರೆ, ದ್ವೇಷ ಬಿತ್ತುತ್ತಾರೆ ಎಂದಿದ್ದಾರೆ.
ಯೋಗಿ ಆದಿತ್ಯನಾಥ್ಗೆ ವೋಟ್ ತಂದುಕೊಡುವ ಅಯೋಧ್ಯೆ ರಾಮನ ಮೇಲಷ್ಟೇ ಭಕ್ತಿ ಹೊರತು ಚಿಕ್ಕ ಚಿಕ್ಕ ಗುಡಿಯಲ್ಲಿರುವ ದೇವರುಗಳ ಮೇಲಲ್ಲ. ಸ್ವಯಂಘೋಷಿತ ಸಂತ, ಸ್ವಯಂ ಘೋಷಿತ ವಿಶ್ವಗುರುವಿಗೆ ಈ ದೇಶದ ಜನ ಮರುಳಾಗುವ ಕಾಲ ಮುಗಿದಿದೆ. ಬಿಜೆಪಿಯವರ ನಾಟಕಗಳಿಗೆ ಈ ಬಾರಿಯ ಚುನಾವಣೆಯಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.




