ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

2 years ago

ವಿವೇಕಾನಂದರ ಜೀವನ ಚರಿತ್ರೆ ಕಿರುಹೊತ್ತಿಗೆ ವಿತರಣೆ

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಮಿತಿ ವತಿಯಿಂದ ಶಂಕರಮಠ ವಾರ್ಡ್ ವಿವೇಕಾನಂದ ಉದ್ಯಾನವನದಲ್ಲಿ ಸ್ವಾಮಿ ವಿವೇಕಾನಂದ ದಿನಾಚರಣೆ ಮತ್ತು ವಿವೇಕಾನಂದರ ಜೀವನ ಚರಿತ್ರೆ ಕಿರುಹೊತ್ತಿಗೆ ಶಾಲಾ ಮಕ್ಕಳಿಗೆ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿ, ಸಾವಿರಾರು ವರ್ಷವಾದರು ಸ್ವಾಮಿ ವಿವೇಕಾನಂದರ ಹೆಸರು, ಕೀರ್ತಿ ಅಜರಾಮರಾಗಿ ಉಳಿಯುತ್ತದೆ. ಇಂದು ಪವಿತ್ರವಾದ ದಿನ. ಕಾಂಗ್ರೆಸ್ ಪಕ್ಷ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಯುವ ನಿಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿರುದ್ಯೋಗ ನಿವಾರಣೆಗಾಗಿ ಕಾಂಗ್ರೆಸ್ ಪಕ್ಷ ದಿಟ್ಚ ಹೆಜ್ಜೆ ಇಟ್ಟಿದೆ ಎಂದರು.

ಸ್ವಾಮಿ ವಿವೇಕಾನಂದರು 39 ವರ್ಷದ ಜೀವಿತಾವಧಿಯಲ್ಲಿ ಅದ್ಭುತ ಸಾಧನೆ ಮಾಡಿ ವಿಶ್ವಮಾನ್ಯರಾದರು. ಯುವಕರು ಬದುಕುವ ಕಲೆ ಹೇಗೆ ಎಂಬುದನ್ನು ಸ್ವಾಮಿ ವಿವೇಕಾನಂದರು ತೋರಿಸಿಕೊಟ್ಟರು. ಚಿಕಾಗೋ ಭಾಷಣದಿಂದ ನಮ್ಮ ದೇಶದ ಸಂಸ್ಕೃತಿಯನ್ನು ವಿಶ್ವಕ್ಕೆ ತೋರಿಸಿಕೊಟ್ಟರು. ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪುಸ್ತಕವನ್ನು ಎಲ್ಲರು ಓದಬೇಕು ಮತ್ತು ಅವರ ಆದರ್ಶ ಸಿದ್ಧಾಂತಗಳನ್ನು ಎಲ್ಲರು ಆಳವಡಿಸಿಕೊಳ್ಳಬೇಕು ಎಂದು ಕರೆನೀಡಿದರು.

ಎಸ್.ಕೇಶವಮೂರ್ತಿ ಮಾತನಾಡಿ, ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ದಿನದಂದು ರಾಷ್ಟ್ರೀಯ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರು ಯುವ ಸಮೂಹಕ್ಕೆ ಸ್ಪೂರ್ತಿ ಮತ್ತು ಪೇರಣೆಯಾಗಿದ್ದಾರೆ. ಸ್ವಾಮಿ ವೇವಕಾನಂದರು ನಮ್ಮ ದೇಶದ ಭವ್ಯ ಇತಿಹಾಸವನ್ನು ವಿಶ್ವಕ್ಕೆ ಸಾರಿದರು ಎಂದರು.

ಹೆಚ್.ಎಸ್.ಮಂಜುನಾಥಗೌಡ ಮಾತನಾಡಿ, ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ ಜನವರಿ 12ರಂದು ರಾಷ್ಟ್ರೀಯ ಯುವ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಅವರು ಮಹಾನ್ ಚಿಂತಕ, ಶ್ರೇಷ್ಠ ವಾಗ್ಮಿ ಮತ್ತು ಭಾವೋದ್ರಿಕ್ತ ದೇಶಭಕ್ತರಾಗಿದ್ದರು. ರಾಷ್ಟ್ರೀಯ ಯುವ ದಿನದಂದು, ಸ್ವಾಮಿ ವಿವೇಕಾನಂದರ ಆರಂಭಿಕ ಜೀವನ, ಶಿಕ್ಷಣ, ಕೃತಿಗಳು, ಬೋಧನೆಗಳು, ತತ್ವಶಾಸ್ತ್ರದ ಎಲ್ಲರು ಅಧ್ಯಯನ ಮಾಡಬೇಕು ಎಂದರು.

ಇದೇ ವೇಳೆ ಗಣ್ಯರು ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ, ಕಿರುಹೊತ್ತಿಗೆ ವಿತರಿಸಿದರು.

Leave a Reply