ನಗರ ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ

2 years ago

#Byelections #seats #members #urban #localbodies

ಧಾರವಾಡ: ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ಮತ್ತು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ಉಪಬಂಧಗಳ ಮೇರೆಗೆ ವಿವಿಧ ಕಾರಣಗಳಿಂದ ತೆರವಾದ ಧಾರವಾಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಕಲಘಟಗಿ ತಾಲೂಕಿನ ಪಟ್ಟಣ ಪಂಚಾಯತಿ 1ನೇ ವಾರ್ಡ ಗೆ ಅನೂಸೂಚಿತ ಪಂಗಡದ 1 ಸ್ಥಾನ ಹಾಗೂ ನವಲಗುಂದ ತಾಲೂಕಿನ ಪುರಸಭೆಯ 23ನೇ ವಾರ್ಡಗೆ ಸಾಮಾನ್ಯ ಮಹಿಳೆ 1 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಡಿಸೆಂಬರ್ 8 ,2023 (ಶುಕ್ರವಾರ) ರಂದು ಜಿಲ್ಲಾಧಿಕಾರಿಗಳ ಚುನಾವಣಾ ಅಧಿಸೂಚನೆ
ಡಿಸೆಂಬರ್ 15, 2023 (ಶುಕ್ರವಾರ) ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ
ಡಿಸೆಂಬರ್ 16, 2023 (ಶನಿವಾರ) ರಂದು ನಾಮಪತ್ರಗಳನ್ನು ಪರಿಶೀಲನೆ
ಡಿಸೆಂಬರ್ 18, 2023 (ಸೋಮವಾರ) ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ
ಡಿಸೆಂಬರ್ 27, 2023 (ಬುಧುವಾರ) ರಂದು ಸಮಯ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಗಳ ವರೆಗೆ ಮತದಾನ ಅವಶ್ಯವಿದ್ದರೆ, ಮತದಾನ
ಡಿಸೆಂಬರ್ 29, 2023 (ಶುಕ್ರವಾರ) ರಂದು ಮರು ಮತದಾನ ಇದ್ದಲ್ಲಿ ಮತದಾನ
ಡಿಸೆಂಬರ್ 30, 2023 (ಶನಿವಾರ) ರಂದು ಬೆಳಿಗ್ಗೆ 8 ಗಂಟೆಯಿಂದ ಮತಗಳ ಎಣಿಕೆಯನ್ನು ತಾಲೂಕಿನ ಕೇಂದ್ರ ಸ್ಥಳಗಳಲ್ಲಿ ನಡೆಸಲಾಗುವುದು.
ಡಿಸೆಂಬರ್ 30, 2023 (ಶನಿವಾರ) ರಂದು ಚುನಾವಣೆಯ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಲಾಗುವುದು.

ನೀತಿ ಸಂಹಿತೆಯು ಡಿಸೆಂಬರ್ 8, 2023 ರಿಂದ ಡಿಸೆಂಬರ್ 30, 2023 ರ ವರೆಗೆ ಉಪ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ.

Leave a Reply