ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿಗೆ ಜಿ.ಟಿ.ಟಿ.ಸಿಯಲ್ಲಿ
ಧಾರವಾಡ: ಈ ವರ್ಷ ವಿವಿಧ ಡಿಪ್ಲೋಮಾಗಳಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಸರಕಾರದ ವತಿಯಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ರಾಯಾಪುರ, ಧಾರವಾಡದಲ್ಲಿ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ (ಪಿಡಿಟಿಡಿ) ಕೋರ್ಸ್ನಾ ಉಚಿತ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕೋರ್ಸ್ನ್ಲ್ಲಿ 30 ಅಭ್ಯರ್ಥಿಗಳಿಗೆ ಅವಕಾಶವಿದ್ದು, ಮೊದಲು ಬಂದವರಿಗೆ ಮೊದಲ ಪ್ರಾಶಸ್ತ್ಯ ಆಧಾರದ ಮೇಲೆ ಪ್ರವೇಶ ಕಲ್ಪಿಸಲಾಗುತ್ತಿದೆ. ಈಗಾಗಲೇ ಅಭ್ಯರ್ಥಿಗಳು ಪ್ರವೇಶ ಪಡೆಯುತ್ತಿದ್ದು, ಇನ್ನುಳಿದ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.
ಟೂಲ್ ಡಿಸೈನ್ ಮುಗಿಸಿರುವ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ಬಹು ಬೇಡಿಕೆ ಇದ್ದು ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಮೂಲಕ ಉದ್ಯೋಗಾವಕಾಶ ಕಲ್ಪಿಸಿ ಕೊಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಮಾಸಿಕ ರೂ.2,500/- ಸ್ಟೈಫಂಡ್ ಕೊಡಲಾಗುವುದು. ಇತರ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ಮರುಪಾವತಿ ವ್ಯವಸ್ಥೆ ಇದೆ. ಅರ್ಹ ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ವಿವರಗಳಿಗಾಗಿ gttc.karnataka.gov.in ವೆಬ್ಸೈ5ಟ್ ಲಿಂಕ್ ಅನ್ನು ಬಳಸಬಹುದು ಅಥವಾ ಪ್ರಾಂಶುಪಾಲರು ಶಿವಾನಂದ ಕುಂಬಾರ, ಜಿ.ಟಿ.ಟಿ.ಸಿ ಪ್ಲಾಟ್ ಸಂಖ್ಯೆ: 38 ರಿಂದ 45, ಮೊದಲನೇ ಹಂತ, ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶ, ರಾಯಾಪುರ, ಧಾರವಾಡ-580009. ದೂರವಾಣಿ ಸಂಖ್ಯೆ: 8050401115, 9035630312 ಇವರನ್ನು ಸಂಪರ್ಕಿಸಬಹುದು.




