ಬೆಂಗಳೂರು: ಕೇಂದ್ರ ಸಚಿವೆ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿಸಿಟಿಂಗ್ ಸಂಸದೆ ಕುಮಾರಿ @shobhabjp ಯವರ ಕ್ಷೇತ್ರದಲ್ಲಿ ಏಕೀ ಮಿನಿಟ್ ನಲ್ಲಿ, ವೀರಾಧಿವೀರ ಶ್ರೀ Sunil Kumar Karkala ರವರ ವಿಧಾನಸಭಾ ಕ್ಷೇತ್ರದಲ್ಲಿ, ಕಿಚ್ಚ ಸುದೀಪ್ ಅವರ ಮಾಮಾ ಶ್ರೀ Basavaraj Bommai ಅವರ ಅಮೋಘ ಹಸ್ತದಿಂದ, ನಟ Rishab Shetty ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡ ಕಂಚಿನ ಪರಶುರಾಮ ಮೂರ್ತಿಯು ಇದ್ದಕಿದ್ದ ಹಾಗೆ ನಾಪತ್ತೆಯಾಗಿದೆ ಎಂದು ಕರ್ನಾಟಕ ಆಪ್ ಘಟಕ ಆರೋಪಿಸಿದೆ.
ತೆರಿಗೆದಾರರ ಕೋಟಿಗಟ್ಟಲೇ ದುಡ್ಡು ಖರ್ಚು ಮಾಡಿ ನಿರ್ಮಿಸಲ್ಪಟ್ಟ ಈ ಮೂರ್ತಿ, ಬಿಜೆಪಿ ಚುನಾವಣೆಯಲ್ಲಿ ಸೋಲುತ್ತಿದ್ದಂತೆ ನಾಪತ್ತೆಯಾಗಿದೆ !! ಸುನಿಲ್ ಕುಮಾರ್ ಚುನಾವಣೆ ಗೆಲ್ಲಲು ಮಾನನೇ ಇಲ್ಲದ ರೀತಿಯಲ್ಲಿ ಈ ಮಾನಗೇಡಿ ಕೆಲಸ ಮಾಡಿದ್ದಾರಾ ?? ಎಂದು ಪ್ರಶ್ನಿಸಿದೆ.
ಇದರಲ್ಲಿ ಬೊಮ್ಮಾಯಿಯವರಿಗೆ 40% ಕಮಿಷನ್ ಹೋಗಿದೆಯಾ ?? ಅಥವಾ ಸುನಿಲ್ ಕುಮಾರ್ ಒಬ್ಬರೇ ನುಂಗಿದ್ದಾರೆಯೇ ? Siddaramaiah ನವರಿಗಂತೂ ಈ ವಿಚಾರದ ಬಗ್ಗೆ ತನಿಖೆ ನಡೆಸುವ ಆಸಕ್ತಿಯೇ ಇಲ್ಲವಾಗಿದೆ! ಎಂದು ಹೇಳಿದೆ
ಹಾಗಾಗಿ ನಾವು ಈ ಕಾಣೆಯಾಗಿರುವ ಪರಶುರಾಮರ ಕಂಚಿನ ಮೂರ್ತಿ ಹುಡುಕಿಕೊಟ್ಟವರಿಗೆ 2 ಮೂಟೆ ಸಿಮೆಂಟ್ ಬಹುಮಾನವಾಗಿ ಕೊಡುತ್ತೇವೆ ! ಇದು ನಮ್ಮ ಗ್ಯಾರಂಟಿ !! ಈ ಕೊಡುಗೆ ಸುನಿಲ್ ಕುಮಾರ್ ಗೂ ಇದೆ , Nalin Kumar Kateel ಗೂ ಇದೆ ಈ ಕೊಡುಗೆ ಕೋಟಾ ಶ್ರೀನಿವಾಸ ಪೂಜಾರಿಯವರಿಗೂ ಇದೆ, ನಟ ರಿಷಭ ಶೆಟ್ಟಿಯವರಿಗೂ ಇದೆ ಈ ಕೊಡುಗೆ DR. G Parameshwara ರಿಗೂ ಇದೆ, @DK Shivakumar ಗೂ ಇದೆ ! ಬೇಗ ಹುಡುಕಿ ಬಹುಮಾನ ಗೆಲ್ಲಿ ! ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದೆ.




