ಏಕಗವಾಕ್ಷಿ ಸಮಿತಿಯ 140ನೇ ಸಭೆಯಲ್ಲಿ ವಿವಿಧ ಯೋಜನೆಗಳಿಗೆ ಅನುಮೋದನೆ: ಉದ್ಯೋಗ ಸೃಷ್ಟಿಗೆ ಆದ್ಯತೆ

3 years ago

#approve #variousschemes #priority #jobcreation

ಬೆಂಗಳೂರು: ಆಟೋಮೊಬೈಲ್ ವಲಯದ ಪ್ರತಿಷ್ಠಿತ ಸಂಸ್ಥೆ ಎಸ್. ಎಫ್ .ಎಸ್. ಇಂಡಿಯಾ ಲಿಮಿಟೆಡ್ ಬೆಳಗಾವಿಯಲ್ಲಿ  250 ಕೋಟಿ ರೂಪಾಯಿ ವೆಚ್ಚದ ಉತ್ಪಾದನಾ ಘಟಕ ಆರಂಭಕ್ಕೆ ಹಸಿರು ನಿಶಾನೆ ಸೇರಿದಂತೆ ರಾಜ್ಯದಲ್ಲಿ ವಿವಿಧ 91 ಯೋಜನೆಗಳ ಒಟ್ಟು 7,660  ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಸರ್ಕಾರ  ಅನುಮೋದನೆ ನೀಡಿದೆ.

ಕೈಗಾರಿಕೆ, ಹಾಗೂ ಮೂಲಸೌಲಭ್ಯ ಅಭಿವೃದ್ಧಿ, ಸಚಿವ ಎಂ. ಬಿ. ಪಾಟೀಲ ಅಧ್ಯಕ್ಷತೆಯಲ್ಲಿ  ನಡೆದ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯ 140ನೇ ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.

ಬೆಳಗಾವಿಯಲ್ಲಿ ಎಸ್. ಎಫ್ .ಎಸ್. ಇಂಡಿಯಾ ಲಿಮಿಟೆಡ್ 250 ಕೋಟಿ ರೂಪಾಯಿ ವೆಚ್ಚದ ಉತ್ಪಾದನಾ ಘಟಕ ಆರಂಭಿಸಲಿದ್ದು, ಇದರಿಂದ 844 ಜನರಿಗೆ ನೇರ ಉದ್ಯೋಗವಕಾಶ ಲಭಿಸಲಿದೆ. ಒಟ್ಟಾರೆ ಏಕ ಗವಾಕ್ಷಿ ಸಂಸ್ಥೆ ಅನುಮೋದನೆ ನೀಡಿದ ಈ ಯೋಜನೆಗಳಿಂದ ಸುಮಾರು 18,146 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆಯೆಂದು ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿಕೆಯ 25 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ 5,750.73 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 13,742  ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ರೂ. 15 ಕೋಟಿಯಿಂದ ರೂ 50 ಕೋಟಿ ಒಳಗಿನ ಬಂಡವಾಳ ಹೂಡಿಕೆಯ 57 ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ  ₹1,145 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು ಅಂದಾಜು 4,404  ಜನರಿಗೆ ಉದ್ಯೋಗ ಲಭ್ಯವಾಗಲಿದೆ.  ಇದಲ್ಲದೇ ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ₹763.85 ಕೋಟಿ ಬಂಡವಾಳ ಹೂಡಿಕೆಯಾಗಲಿದೆ.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತ ಗುಂಜನ್ ಕೃಷ್ಣ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಕೆ.ಐ.ಎ.ಡಿ.ಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ .ಎಂ. ಮಹೇಶ್, ಐಟಿಬಿಟಿ ಇಲಾಖೆಯ ನಿರ್ದೇಶಕ ಎಚ್. ವಿ. ದರ್ಶನ್ ಮತ್ತು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಹಾಗು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಅನುಮೋದನೆ ನೀಡಿರುವ ಪ್ರಮುಖ ಪ್ರಸ್ತಾವನೆಗಳ ಪಟ್ಟಿ

1. ಸಂಸ್ಥೆ:  ಪ್ರತಿಭಾ ಪಾಟೀಲ್  ಶುಗರ್  ಇಂಡಸ್ಟ್ರೀಸ್  ಪೈವೇಟ್ ಲಿಮಿಟೆಡ್
ಸ್ಥಳ: ಕಣ್ಣೂರ್ ಗ್ರಾಮ, ವಿಜಯಪುರ ತಾಲೂಕು, ವಿಜಯಪುರ ಜಿಲ್ಲೆ
ಹೂಡಿಕೆ: ₹489.50 ಕೋಟಿ
ಉದ್ಯೋಗ: 275
2. ಸಂಸ್ಥೆ: ಗುರುದೇವ್ ರಿಫೈನರಿಸ್ & ಅಲೈಡ್ ಇಂಡಸ್ಟ್ರೀಸ್  
ಸ್ಥಳ: ತಡವಳಗ ಪೋಸ್ಟ್, ವಿಜಯಪುರ ಜಿಲ್ಲೆ
ಹೂಡಿಕೆ: ₹488.49 ಕೋಟಿ
ಉದ್ಯೋಗ: 255
3. ಸಂಸ್ಥೆ: ದೇವಶ್ರೀ ಇಸ್ಪಾತ್ ಪೈವೇಟ್ ಲಿಮಿಟೆಡ್
ಸ್ಥಳ: ಹಳವರ್ತಿ ಗ್ರಾಮ, ಕೊಪ್ಪಳ ಜಿಲ್ಲೆ
ಹೂಡಿಕೆ: ₹470  ಕೋಟಿ
ಉದ್ಯೋಗ: 800
4. ಸಂಸ್ಥೆ: ಏಕಸ್ ಕನ್ಸೂಮರ್  ಪ್ರಾಡಕ್ಟಸ್ ಪೈವೇಟ್ ಲಿಮಿಟೆಡ್
ಸ್ಥಳ: ಇತ್ತಿಗಟ್ಟಿ ಗ್ರಾಮ, ಧಾರವಾಡ ಜಿಲ್ಲೆ
ಹೂಡಿಕೆ ₹456 ಕೋಟಿ 
ಉದ್ಯೋಗ: 1,187
5. ಸಂಸ್ಥೆ:  ಇಂಟಿಗ್ರೇಟೆಡ್ ಸೋಲಾರ್ ಪವರ್ ಪೈವೇಟ್ ಲಿಮಿಟೆಡ್
ಸ್ಥಳ: ಮಿಂಡಹಳ್ಳಿ ಗ್ರಾಮ, ಕೋಲಾರ ಜಿಲ್ಲೆ
ಹೂಡಿಕೆ: ₹441.08 ಕೋಟಿ
ಉದ್ಯೋಗ: 720 
6. ಸಂಸ್ಥೆ: ಸೌತ್ ವೆಸ್ಟ್ ಮೈನಿಂಗ್ ಲಿಮಿಟೆಡ್
ಸ್ಥಳ: ಮೂಸಿನಾಯಕನ ಹಳ್ಳಿ ಗ್ರಾಮ, ಬಳ್ಳಾರಿ ಜಿಲ್ಲೆ
ಹೂಡಿಕೆ: ₹411 ಕೋಟಿ
ಉದ್ಯೋಗ: 65
7. ಸಂಸ್ಥೆ:  ಶಶಿ ಅಲೊಯ್ಸ್  ಪೈವೇಟ್ ಲಿಮಿಟೆಡ್
ಸ್ಥಳ: ಭೈರನಾಯಕನಹಳ್ಳಿ ಗ್ರಾಮ, ಚಲ್ಲಕೆರೆ ತಾಲೂಕು, ಚಿತ್ರದುರ್ಗ
ಹೂಡಿಕೆ: ₹380 ಕೋಟಿ 
ಉದ್ಯೋಗ: 400
8. ಸಂಸ್ಥೆ:  ಎಸ್ ಎಫ್ ಎಸ್ ಗ್ರೂಪ್ ಇಂಡಿಯಾ ಪೈವೇಟ್ ಲಿಮಿಟೆಡ್
ಸ್ಥಳ: ಬೆಳಗಾವಿ ಜಿಲ್ಲೆ
ಹೂಡಿಕೆ: ₹ 250 ಕೋಟಿ
ಉದ್ಯೋಗ: 844
9. ಸಂಸ್ಥೆ:  ಮೈಸೂರ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್
ಸ್ಥಳ: ರಾಯಚೂರು ಜಿಲ್ಲೆ
ಹೂಡಿಕೆ: ₹240  ಕೋಟಿ 
ಉದ್ಯೋಗ: 157 
10. ಸಂಸ್ಥೆ:  ಲಾಮ್ ರಿಸರ್ಚ್ ಇಂಡಿಯಾ ಪೈವೇಟ್ ಲಿಮಿಟೆಡ್
ಸ್ಥಳ: ಬೆಂಗಳೂರು
ಹೂಡಿಕೆ: ₹235.91  ಕೋಟಿ
ಉದ್ಯೋಗ: 1,724
11. ಸಂಸ್ಥೆ:  ಟಾಟಾ ಸೆಮಿಕಂಡೆಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್ ಪೈವೇಟ್ ಲಿಮಿಟೆಡ್
ಸ್ಥಳ: ಕೊಲಾರ ಜಿಲ್ಲೆ
ಹೂಡಿಕೆ: ₹200 ಕೋಟಿ
ಉದ್ಯೋಗ: 155
12. ಸಂಸ್ಥೆ: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್
ಸ್ಥಳ: ಬೆಂಗಳೂರು ಗ್ರಾಮಾಂತರ ಜಿಲ್ಲೆ
ಹೂಡಿಕೆ: ₹137 ಕೋಟಿ 
ಉದ್ಯೋಗ: 1,908

Leave a Reply