ರಾಮನಗರ: ಲೇಖಕರು ತಾವು ಬರೆದ ಕೃತಿಗಳನ್ನು ಬೆಂಗಳೂರು ನಗರ ಪ್ರದೇಶದಲ್ಲಿ ಬಿಡುಗಡೆ ಮಾಡಲು ಬಹಳ ಸಂಕಷ್ಟ ಪಡುತ್ತಿದ್ದಾರೆ. ಕಾರಣ ಕನ್ನಡ ಸಾಹಿತ್ಯ ಪರಿಷತ್ ಗದ್ದುಗೆಯಲ್ಲಿ ಮಹೇಶ್ ಜೋಶಿ ಎಂಬ ಅಹಂಕಾರಿ ಇದ್ದು ನನ್ನನ್ನು ಯಾರು ಮುಂದಿನ 5 ವರ್ಷ ಇಳಿಸಲು ಸಾಧ್ಯವೇ ಇಲ್ಲಎಂದು ಸಾಹಿತ್ಯ ಪರಿಷತ್ತಿಗೆ ಅಪಚಾರ ಎಸಗುತ್ತಿದ್ದಾರೆ ಮತ್ತು ಪರಿಷತ್ ಸಭಾ ಭವನದ ಬಾಡಿಗೆ ರೂ.26,000/- ಹೆಚ್ಚಿಸಿದ್ದು ಸಾಹಿತಿಗಳು ನಗರದಿಂದ ಹೊರಬಂದು ಪುಸ್ತಕ ಬಿಡುಗಡೆ ಮಾಡುವ ಪ್ರಮೇಯ ಬಂದಿದೆ. ಇದೆಲ್ಲವನ್ನು ಪ್ರತಿಭಟಸದೇ ಇರುವುದು ಸಾಹಿತ್ಯ ವಲಯದ ದುರಾದೃಷ್ಟ. ಮಹೇಶ್ ಜೋಶಿಯವರನ್ನು ಸಾಹಿತ್ಯ ಪರಿಷತ್ತಿನಿಂದ ದೂರ ಇಡುವುದು ಉಚಿತ ಎಂದು ಹಿರಿಯ ಸಾಹಿತಿ, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಬಿಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯಪುರ ಬಳಿಯ ಎಂ.ಜಯರಾಮ್‌ತೋಟದ ಮನೆ ಆವರಣದಲ್ಲಿ ಭಾನುವಾರ ಸಾಹಿತ್ಯ ಸಂಗಮ ಟ್ರಸ್ಡ್ (ರಿ), ಜಾಲಮಂಗಲ ಹಾಗೂ ಒಕ್ಕಲಿಗರ ವಾಯ್ಸ್ ಮಾಸ ಪತ್ರಿಕೆ ಇವರ ಸಂಯುಕ್ತಾಶ್ರಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಶೂದ್ರ ಶ್ರೀನಿವಾಸ್‌ರಚಿತಕಾಲದ ನೆರಳು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಪುಸ್ತಕ ಬಿಡುಗಡೆ ಸಮಾರಂಭಗಳು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ ಗ್ರಾಮಾಂತರ ಪ್ರದೇಶಗಳಲ್ಲಿ ವಿಸ್ತರಣೆ ಆಗಬೇಕು ಎಂದರು.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಜಾತಿ ಭೂತದ ಕೋಟೆಯಾಗಿದೆ. ಅಧಿಕಾರಕ್ಕಾಗಿ ಅನ್ಯಾಯ ಅಕ್ರಮಗಳು ನಡೆಯುತ್ತಿವೆ. ಈ ಬಗ್ಗೆ ಹಲವು ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಕಸಾಪ ಸಾಹಿತಿಗಳಿಂದ ದೂರವಿರುವ ಪರಿಷತ್ತು ಆಗಿ ಮಾರ್ಪಟ್ಟಿದೆ ಎಂದುಅಸಮಾಧಾನ ವ್ಯಕ್ತಪಡಿಸಿದರು.
ಲಂಕೇಶ್ ಅವರ ಆತ್ಮೀಯರಾದ ಶೂದ್ರ ಶ್ರೀನಿವಾಸ್‌ಅವರ ಬರಹಗಳು ಬಹಳ ಗಟ್ಟಿಯಾಗಿರುತ್ತವೆ. ಅಲ್ಲದೆ ಅವರ ಲೇಖನಗಳು ಓದುಗರಿಗೆ ಹಲವು ಒಳನೋಟಗಳನ್ನು ನೀಡುತ್ತವೆ. ಬಂಡಾಯ ಸಾಹಿತಿಯಾಗಿ ಗುರ್ತಿಸಿಕೊಂಡಿರುವ ಅವರು ಪ್ರತಿಯೊಬ್ಬರು ಕಾಲನ ನಿಯಂತ್ರಣಕ್ಕೆ ಒಳಪಟ್ಟಿರುವ ಸಮಯದಲ್ಲಿಅದಕ್ಕೆ ಪೂರಕವಾಗಿ ಕಾಲದ ನೆರಳು ಪುಸ್ತಕದಲ್ಲಿ ಹಲವು ವಿಷಯಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದರು.
ಉಪನ್ಯಾಸಕ ಡಾ.ಜಯಶಂರ ಹಲಗೂರು ಪುಸ್ತಕ ಕುರಿತು ಮಾತನಾಡಿ, ಕಾಲದ ನೆರಳು ಪುಸ್ತಕ ನೂರಾರು ಬಗೆಗಳನ್ನು ಒಳಗೊಂಡಿದೆ. ಬರೆಯುವ ಮತ್ತುಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವ ಸಮಯದಲ್ಲಿ ಬರೆದಿರುವ ಈ ಕೃತಿಯ 70 ಅಂಕಣಗಳು ಕನ್ನಡ ನಾಡಿನ 40 ವರ್ಷಗಳ ನಾಡಿನ ಇತಿಹಾಸವನ್ನು ಕಟ್ಟಿಕೊಡುವ ಒಂದು ಮಹಾನ್ ಗ್ರಂಥವಾಗಿದೆ ಎಂದರು.
ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಜಗತ್ತಿನ ಮನುಷ್ಯನಲ್ಲಿರುವ ಪ್ರೀತಿ, ಅನಾಥತೆಯನ್ನು ನಿಷ್ಕ್ರಿಯ ಮಾಡಬಾರದು ಎಂಬುದು ಅವರ ಮನದಾಳದ ಮಾತು ಎಂದು ಅವರು ನಡೆದು ಬಂದದಾರಿಯನ್ನುಉಣ ಬಡಿಸಿದರು.
ಲೇಖಕ ಶೂದ್ರ ಶ್ರೀನಿವಾಸ್ ಮಾತನಾಡಿ, ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ಒಳ್ಳೆಯ ಕೃತಿಗಳು ಮತ್ತು ಒಳ್ಳೆಯ ಸ್ನೇಹಿತರು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಗಾಂಧೀಜಿ ಅವರ ಅಲೋಚನ ಕ್ರಮಗಳು, ಕುವೆಂಪು ಅವರ ಮಾತುಗಳು, ಅಂಬೇಡ್ಕರ್ ಅವರ ಚಿಂತನೆಗಳು ನನ್ನ ಬದುಕಿಗೆ ಪ್ರೇರಣೆಯಾಗಿವೆ. ಆಕಸ್ಮಿಕವಾಗಿ ಸಿಗುವ ಎಲ್ಲರನ್ನೂ ನಮ್ಮೊಳಗೆ ಪ್ರೀತಿಯಿಂದ ಸ್ವೀಕರಿಸುವ ಮನೋಭಾವ ನಮ್ಮೆಲ್ಲರ ಅಂತರಾಳದಲ್ಲಿರಬೇಕು. ಆಗ ಮಾತ್ರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ಶ್ರೀಮಂತಗೊಳ್ಳಲಿದೆ ಎಂದು ಕವಿಗಳ, ರಾಜಕಾರಣಿಗಳ, ಚಿಂತಕರ ಬಗೆಗಿನ ಹಲವು ಚಾರಿತ್ರಿಕ ನೆನಪುಗಳನ್ನು ಮೆಲುಕು ಹಾಕಿದರು.
ಪ್ರಕಾಶಕ ನಾಗಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಲವು ಸಾಹಿತಿಗಳು ಬರೆದ ಕನ್ನಡದ ಕೃತಿಗಳನ್ನು ಗ್ರಾಮೀಣ ಭಾಗದಲ್ಲಿ ಬಿಡುಗಡೆ ಮಾಡಿ ಆ ಭಾಗದ ಸಾಹಿತಿಗಳಿಗೆ, ಸಾಹಿತ್ಯ ಪ್ರಿಯರಿಗೆ ಪರಿಚಯಿಸುವ ಕೆಲಸ ಮಾಡುವ ಸಣ್ಣ ಪ್ರಯತ್ನ ಮಾಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ, ಲೋಕೋಪಯೋಗಿ ಇಲಾಖೆಯ ಎಂ.ಜಯರಾಮ್, ಸಾಹಿತಿಗಳಾದ ಪ್ರೊ.ಎಲ್. ಎನ್.ಮುಕುಂದರಾಜು, ಎಚ್.ದಂಡಪ್ಪ, ಸಿದ್ದೇಗೌಡ, , ತಿಮ್ಮೇಶ್, ರಮೇಶ್, ಡಾ.ಎಂ.ಜಗದೀಶ್, ಗುರುಲಿಂಗಯ್ಯ, ಬಿ.ಟಿ.ಚಿಕ್ಕಪುಟ್ಟೇಗೌಡ, ಡಾ.ಕೂಡ್ಲೂರು ವೆಂಕಟಪ್ಪ, ರಾಜು ಮಳವಳ್ಳಿ, ದಯಾನಂದಕಟ್ಟೆ, ಪ್ರಭು, ಶಿವಣ್ಣ, ಧನಂಜಯ್ಯ, ಆನಂದ್ , ಡಾ.ಜಗದೀಶ್, ಕೃಷ್ಣ, ನಾರಾಯಣಸ್ವಾಮಿ, ರಾಜು, ಶಿಕ್ಷಣ ಇಲಾಖೆ ನಿವೃತ್ತಅಧಿಕಾರಿ ಕೆ.ಪಿ.ಶಿವಪ್ಪ, ರಾಜು ಭಾಗವಹಿಸಿದ್ದರು.




