ಶಾಂತಿನಗರ: ಜೋಗುಪಾಳ್ಯ ಹಲಸೂರು ಠಾಣೆ ಮುಂಭಾಗದಲ್ಲಿ ಹಿಂದೂಗಳ ಧಾರ್ಮಿಕ ಆಚರಣೆಯಾದ ಕರಗ ಮಹೋತ್ಸವ ಕುರಿತು ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ಎ.ಹ್ಯಾರೀಸ್ ನೀಡಿದ ಅವಹೇಳನಕಾರಿ ಹೇಳಿಕೆ ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಶಾಂತಿನಗರ ವಿಧಾನಸಭಾ ಬಿಜೆಪಿ ಮುಖಂಡರು, ಮಾಜಿ ಮಹಾಪೌರರಾದ ಎಂ.ಗೌತಮ್ ಕುಮಾರ್ ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀನಾರಾಯಣ್(ಗುಂಡಣ್ಣ) ಹಾಗೂ ನೂರಾರು ಬಿಜೆಪಿ ಮುಖಂಡರು, ಕಾರ್ಯಕರ್ತರು, ಪಾದಯಾತ್ರೆ ಮೂಲಕ ಹಲಸೂರು ಪೊಲೀಸ್ ಠಾಣೆ ಬಳಿ ಬಂದು ಮೌನ ಪ್ರತಿಭಟನೆ ಮಾಡಿದರು.
ಎಂ.ಗೌತಮ್ ಕುಮಾರ್ ಅವರು ಮಾತನಾಡಿ ಶತಮಾನಗಳ ಇತಿಹಾಸ ಹೊಂದಿರುವ ವಿಶ್ವಪ್ರಸಿದ್ದ ಬೆಂಗಳೂರು ಕರಗ ಹಿಂದೂಗಳ ಪಾಲಿಗೆ ಆರಾದ್ಯ ದೈವವಾಗಿದೆ.ನಮ್ಮ ಕರಗ ನೋಡಲು ಎಲ್ಲ ಧರ್ಮ,ವರ್ಗದ ಜನರು ಆಗಮಿಸುತ್ತಾರೆ. ಕರಗ ದೈವದ ಮೊರೆ ಹೋದ ಕೋಟ್ಯಂತರ ಜನರು ತಮ್ಮ ಜೀವನದಲ್ಲಿ ಸುಖ,ಶಾಂತಿ ನೆಮ್ಮದಿ ಕಂಡು ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ.
ಈ ಮೋದಲು ಶಾಸಕ ಹ್ಯಾರೀಸ್ ಸವಿತಾ ಸಮಾಜ ಮತ್ತು ಮೇರುನಟ ಡಾ.ರಾಜ್ ಕುಮಾರ್ ಅವರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದರು ಇದೀಗ ಕರಗ ಮಹೋತ್ಸವದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.ಕಾಮಗಾರಿಗಳ ಸಂದರ್ಭದಲ್ಲಿ ಪೂಜೆ ಮಾಡಬಾರದು ಹೀಗೆ ಹಲವಾರು ಹಿಂದೂ ವಿರೋಧಿ ನಿಲುವು ತಾಳಿದ್ದಾರೆ.
ಸತತವಾಗಿ ಹಿಂದೂಗಳ ವಿರುದ್ದ ಹೇಳಿಕೆ ನೀಡುತ್ತಿರುವ ಹ್ಯಾರೀಸ್ ಅವರ ನಿಜಬಣ್ಣ ಬಯಲು ಮಾಡಲು ಪ್ರತಿಯೊಬ್ಬ ಹಿಂದುಗಳ ಮನೆಗಳಿಗೆ ವಿಷಯ ತಲುಪಿಸಲಾಗುತ್ತದೆ.ಕರಗದ ದೈವ ಮಹಿಮೆ ಇತಿಹಾಸದ ಕುರಿತು ಅರಿವು ಇಲ್ಲದ ಶಾಸಕ ಈ ರೀತಿ ಮಾತನಾಡಿರುವುದು ಅಕ್ಷಮ್ಯ ಅಪರಾಧ.
ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಶಾಸಕರ ವಿರುದ್ದ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಅಗ್ರಹಿಸುತ್ತೇವೆ ಎಂದು ಹೇಳಿದರು. ಕೆ.ಎಸ್.ಎಸ್.ಅಧ್ಯತ್ಷರಾದ ಪ್ರಕಾಶ್ ರಾಜು,ಕೇಂದ್ರ ಜಿಲ್ಲಾ ಭಾಜಪ ಕಾರ್ಯದರ್ಶಿ ಯದುಕುಮಾರ್ ಗೌಡ,ಗೀತಾ ರಾಜಶೇಖರ್, ಕೋದಂಡ, ಕುಪ್ಪಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.




