ಜೈವಿಕ ತಂತ್ರಜ್ಞಾನ ಉದ್ಯಮದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ: ಅಶ್ವಥ್ ನಾರಾಯಣ

3 years ago

ಬೆಂಗಳೂರು: ವಿಜ್ಞಾನ ವಲಯದಲ್ಲಿ ಅಂತರಾಷ್ಟ್ರೀಯ ಮಟ್ಟದ ಅಧ್ಯಯನ, ಸಂಶೋಧನೆ ಹೆಚ್ಚಿಸುವ ಹೊಸ ಜೀವ ವಿಜ್ಞಾನ ಕೇಂದ್ರವು ನಗರದ ಹೊರವಲಯದ ಅತ್ತಿಬೆಲೆಯಲ್ಲಿ ಸ್ಥಾಪನೆಯಾಗಲಿದೆ.

ಸುಮಾರು 52 ಎಕರೆಯ ಕ್ಯಾಂಪಸ್‌ ನಲ್ಲಿ‌ ಆರಂಭವಾಗುವ ಹೊಸ ಜೀವ ವಿಜ್ಞಾನ ಕೇಂದ್ರವು ಅಂತರರಾಷ್ಟ್ರೀಯ ಮಟ್ಟದ ಅಧ್ಯಯನ ಸಂಶೋಧನೆಗಳಿಗೆ ಸರಿಸಮಾನವಾಗಿದ್ದು ಉದ್ಯಮ, ಶೈಕ್ಷಣಿಕ ಸರ್ಕಾರದ ನಡುವಣ ಸಹಯೋಗವನ್ನೂ ಹೆಚ್ಚಿಸಲಿದೆ ಎಂದು ಉನ್ನತ ಶಿಕ್ಷಣ ಡಾ.ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದರು.

ಸಂಶೋಧನಾ ಸಂಸ್ಥೆಗಳು ವ್ಯವಸ್ಥಿತವಾಗಿ ಸ್ಥಾಪನೆಗೊಂಡಿರುವ ಕಂಪನಿಗಳು ಮತ್ತು ವೇಗವಾಗಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಜೀವ ವಿಜ್ಞಾನ ಕೇಂದ್ರವು ಅತ್ಯಂತ ಸಹಕಾರಿಯಾಗಿದೆ ಹೊಸ ಜೀವ ವಿಜ್ಞಾನ ಕೇಂದ್ರವು 2,500 ಕೋಟಿ ಮೊತ್ತದ ಹೂಡಿಕೆ ಆಕರ್ಷಿಸುವ ಮೂಲಕ 15 ಸಾವಿರಕ್ಕೂ ಹೆಚ್ಚು ಕೌಶಲ ಮತ್ತು ಅರೆ-ಕುಶಲ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದರು.

ದೇಶದ ಪ್ರಮುಖ ಜೀವ ವಿಜ್ಞಾನಗಳ ಮೂಲಸೌಕರ್ಯಗಳ ವೇದಿಕೆಯಾಗುವ ಸಂಶೋಧನೆ, ಅಭಿವೃದ್ಧಿ ಹಾಗೂ ತಯಾರಿಕಾ ಚಟುವಟಿಕೆಗಳಿಗೆ ವೇಗ ನೀಡುವುದರ ಪ್ರಮುಖ ಭಾಗವಾಗಿ ಜೀವ ವಿಜ್ಞಾನ ಕೇಂದ್ರವು ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಅತ್ಯಾಧುನಿಕ ಪ್ರಯೋಗಾಲಯ ಒಳಗೊಂಡಿರುವ ಕೇಂದ್ರವು, ಜೈವಿಕ ಔಷಧಿ, ವೈದ್ಯಕೀಯ ತಂತ್ರಜ್ಞಾನ, ಕೃಷಿ ವಿಜ್ಞಾನ, ಪೌಷ್ಟಿಕ ಆಹಾರ ಮತ್ತು ಸಂಬಂಧಿತ ವಲಯಗಳಿಗೆ ನೆರವಾಗುವ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಗಳ ಅಗತ್ಯವನ್ನು ಪೂರೈಸಲಿದೆ. ಜೈವಿಕ ತಂತ್ರಜ್ಞಾನ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಸ್ಟಾರ್ಟ್ಅಪ್‌ಗಳ ಕೇಂದ್ರವಾಗಿದ್ದು ಉನ್ನತ ದರ್ಜೆಯ ಪ್ರತಿಭೆ ಸಂಶೋಧನೆಗಳಿಗಾಗಿ ಪೂರಕ ಚಲನಶೀಲ ಪರಿಸರ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು

ಈ ವೇಳೆಯಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ರೋಚ್ ಲೈಫ್‌ಸ್ಕೇಪ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಆಸ್ಟಿನ್ ರೋಚ್,ಜೈವಿಕ ತಂತ್ರಜ್ಞಾನ ನೇತೃತ್ವದ ಉದ್ದಿಮೆಗಳ ಸಂಘದ ಅಧ್ಯಕ್ಷ ಜಿ.ಎಸ್ ಕೃಷ್ಣನ್ ಉಪಸ್ಥಿತರಿದ್ದರು.

 

Leave a Reply