777 ಚಾರ್ಲಿ ಚಿತ್ರಕ್ಕೆ 69ನೇ ರಾಷ್ಟ್ರೀಯ ಚಲಚಚಿತ್ರ ಪ್ರಶಸ್ತಿ

3 years ago

#69thNationalFilmAward #777Charlie

ದಿ ಕಾಶ್ಮೀರ್ ಫೈಲ್ಸ್ ಗೆ ಅತ್ಯುತ್ತಮ ಭಾವೈಕ್ಯತೆ ಚಿತ್ರ ಘೋಷಣೆ ಮೂಲಕ ನಗೆಪಾಟಲು

ದೆಹಲಿ: 69ನೇ ರಾಷ್ಟ್ರೀಯ ಚಲಚಚಿತ್ರ ಪ್ರಶಸ್ತಿಗಳನ್ನು ದೆಹಲಿಯಲ್ಲಿ ಘೋಷಿಸಲಾಗಿದ್ದು, ಕನ್ನಡ ವಿಭಾಗದಲ್ಲಿ ಕಿರಣ್ ರಾಜ್ ನಿರ್ದೇಶನದ, ರಕ್ಷಿತ್ ಶೆಟ್ಟಿಅಭಿನಯದ ಚಾರ್ಲಿ 777 ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜವಾಗಿದೆ.

ಈ ಬಾರಿ ಪುಷ್ಪ ಚಿತ್ರದ ನಟನೆಗೆ ತೆಲುಗು ನಟ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. 2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಲ್ಲಿ ಅತ್ಯುತ್ತಮವಾದ ಸಿನಿಮಾ, ನಟ-ನಟಿ ಹಾಗೂ ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕೋವಿಡ್ ಕಾರಣದಿಂದಾಗಿ 2021ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಪ್ರಶಸ್ತಿ ಘೋಷಿಸಿರಲಿಲ್ಲ. ಇದೀಗ ಆ ವರ್ಷದ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆಯಾಗಿದೆ.

ಗಂಗೂಬಾಯಿ ಸಿನಿಮಾ ನಟನೆಗೆ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಮಿಮಿ ಚಿತ್ರದ ನಟನೆಗೆ ನಟಿ ಕೃತಿ ಸನಾನ್ ಅತ್ಯುತ್ತಮ ನಟಿ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಆರ್. ಮಾಧವನ್ ಅಭಿನಯದ ರಾಕೆಟ್ರಿ ದಿ ನಂಬಿ ಎಫೆಕ್ಟ್ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಘೋಷಿಸಲಾಗಿದೆ.

ಅತ್ಯುತ್ತಮ ಸಿನಿಮಾ: ರಾಕೆಟ್ರಿ – ದಿ ನಂಬಿ ಎಫೆಕ್ಟ್ (ಹಿಂದಿ), ನಿರ್ದೇಶಕ: ಆರ್.ಮಾಧವನ್
ಅತ್ಯುತ್ತಮ ನಟ: ಅಲ್ಲು ಅರ್ಜುನ್ (ಪುಷ್ಪ ದಿ ರೈಸ್ 1)
ಅತ್ಯುತ್ತಮ ನಟಿ: ಅಲಿಬಾ ಭಟ್ (ಗಂಗೂಬಾಯಿ ಕಾಥಿಯಾವಾಡಿ) ಮತ್ತು ಕೃತಿ ಸೆನನ್ (ಮಿಮಿ) (ಹಿಂದಿ ಚಿತ್ರಗಳು)
ಅತ್ಯುತ್ತಮ ಪೋಷಕ ನಟ: ಪಂಕಜ್ ತ್ರಿಪಾಠಿ (ಮಿಮಿ)
ಅತ್ಯುತ್ತಮ ಪೋಷಕ ನಟಿ: ಪಲ್ಲವಿ ಜೋಷಿ (ಕಾಶ್ಮೀರಿ ಫೈಲ್ಸ್)
ಅತ್ಯುತ್ತಮ ನಿರ್ದೇಶನ: ಗೋದಾವರಿ-ದ ಹೋಲಿ ವಾಟರ್ (ಮರಾಠಿ), ನಿರ್ದೇಶಕ: ನಿಖಿಲ್ ಮಹಾಜನ್
ಅತ್ಯುತ್ತಮ ಸಂಗೀತ ನಿರ್ದೇಶನ: ದೇವಿ ಶ್ರೀ ಪ್ರಸಾದ್ : ಪುಷ್ಪ (ಹಾಡು) ಮತ್ತು ಎಂ.ಎಂ.ಕೀರವಾಣಿ: ಆರ್.ಆರ್.ಆರ್. (ಹಿನ್ನೆಲೆ ಸಂಗೀತ)
ಅತ್ಯುತ್ತಮ ಹಿಂದಿ ಸಿನಿಮಾ: ಸರ್ದಾರ್ ಉದ್ಧಮ್ (ನಿರ್ದೇಶನ: ಸುಜಿತ್ ಎಸ್.)
ಅತ್ಯುತ್ತಮ ಮಲಯಾಳಂ ಸಿನಿಮಾ: ಹೋಂ (ನಿರ್ದೇಶನ: ರೋಜಿನ್ ಪಿ ಥಾಮಸ್)
ಅತ್ಯುತ್ತಮ ತಮಿಳು ಸಿನಿಮಾ: ಕಡೈಸಿ ವ್ಯವಸಾಯಿ (ನಿರ್ದೇಶನ: ಎಂ.ಮಣಿಕಂಠನ್)
ಅತ್ಯುತ್ತಮ ಚೊಚ್ಚಲ ಸಿನಿಮಾ: ಮೇಪಡಿಯನ್ – ಮಲಯಾಳಂ (ನಿರ್ದೇಶನ: ವಿಷ್ಣು ಮೋಹನ್)
ಅತ್ಯುತ್ತಮ ಮನೋರಂಜನಾ ಸಿನಿಮಾ: ಆರ್.ಆರ್.ಆರ್. – ತೆಲುಗು (ನಿರ್ದೇಶನ: ಎಸ್.ಎಸ್.ರಾಜಮೌಳಿ)
ರಾಷ್ಟ್ರೀಯ ಭಾವೈಕ್ಯತೆ ಸಾರುವ ಸಿನಿಮಾ: ದಿ ಕಾಶ್ಮೀರ್ ಫೈಲ್ಸ್ (ಹಿಂದಿ) ನಿರ್ದೇಶನ: ವಿವೇಕ್ ಅಗ್ನಿಹೋತ್ರಿ
ಅತ್ಯುತ್ತಮ ಮಕ್ಕಳ ಸಿನಿಮಾ: ಗಾಂಧಿ ಅಂಡ್ ಕಮ್ – ಗುಜರಾತಿ (ನಿರ್ದೇಶನ: ಮನೀಷ್ ಸೈನಿ)
ಅತ್ಯುತ್ತಮ ನೃತ್ಯ ನಿರ್ದೇಶನ: ಆರ್.ಆರ್.ಆರ್ –ನೃತ್ಯ ನಿರ್ದೇಶನ: ಪ್ರೇಮ್ ರಕ್ಷಿತ್
ಅತ್ಯುತ್ತಮ ಗಾಯಕ: ಕಾಲ ಭೈರವ : ಚಿತ್ರ – ಆರ್.ಆರ್.ಆರ್.
ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್ – ಚಿತ್ರ – ಇರವಿನ್ ನಿಳಲ್
ಅತ್ಯುತ್ತಮ ಛಾಯಾಚಿತ್ರಗ್ರಹಣ: ಅವೀಕ್ ಮುಖ್ಯೋಪಾಧ್ಯಾಯ : ಚಿತ್ರ ಸರ್ದಾರ್ ಉದ್ಧಮ್ (ನಿರ್ದೇಶನ: ಸುಜಿತ್ ಎಸ್.)
ಅತ್ಯುತ್ತಮ ಸಂಕಲನ: ಸಂಜಯ್ ಲೀಲಾ ಬನ್ಸಾಲಿ: ಚಿತ್ರ ಗಂಗೂಬಾಯಿ ಕಾಥಿಯಾವಾಡಿ

Leave a Reply