56 ಇಂಚಿನ ದಿಟ್ಟತನ ತೋರಬೇಕಾದದ್ದು ಸತ್ತು ಬಿದ್ದಿರುವ ದೇಶಕ್ಕಿಂತ ಬಲಿಷ್ಠ ದೇಶದ ವಿರುದ್ಧ

2 years ago

ನಮ್ಮ ಪ್ರಧಾನಮಂತ್ರಿಗಳು ಚುನಾವಣಾ ಭಾಷಣಗಳಲ್ಲಿ ತಮ್ಮ 56 ಇಂಚು ಎದೆ ಅಳತೆಯ ದೇಹ ಯಾರಿಗೂ ಹೆದರುವುದಿಲ್ಲ ಎಂಬ ಮಾತುಗಳನ್ನಾಡುತ್ತಾ ತಮ್ಮ ಭಾಷಣದ ಉದ್ದಕ್ಕೂ ತಮ್ಮ ದಿಟ್ಟತನವನ್ನು ಕೇವಲ ಈಗಾಗಲೇ ಸತ್ತು ಹೆಣವಾಗಿರುವ ಜಗತ್ತಿನಲ್ಲಿ ಕವಡೆ ಕಾಸಿಗೆ ರಾಜ ತಾಂತ್ರಿಕವಾಗಿ ಅಥವಾ ವ್ಯವಹಾರಿಕವಾಗಿ ಬೆಲೆಯ ಯೋಗ್ಯತೆಯೂ ಇಲ್ಲದ ಪಾಕಿಸ್ತಾನದ ವಿರುದ್ಧ ಮಾತ್ರವಲ್ಲ ಬಲಿಷ್ಠವಾಗಿರುವ ಮತ್ತು ನಮ್ಮ ದೇಶದ ಅನೇಕ ಭಾಗವನ್ನು ಒತ್ತುವರಿ ಮಾಡಿಕೊಂಡು ಗ್ರಾಮಗಳನ್ನು ನಿರ್ಮಿಸುತ್ತಿರುವ ನಮ್ಮ ದೇಶದ ಆರ್ಥಿಕ ಪ್ರಗತಿಗೆ ಅಡಚಣೆಯನ್ನ ಮಾಡುತ್ತಿರುವ ಹಾಗೂ ರಾಜಕತಾಂತ್ರಿಕವಾಗಿ ನಮಗೆ ಸವಾಲುಗಳನ್ನು ಹೊಡುತ್ತಿರುವ ಚೈನಾ ದೇಶದ ವಿರುದ್ಧ ಹೆಚ್ಚು ದಿಟ್ಟತನವನ್ನು ತೋರಬೇಕಾಗಿದೆ.

ಚೈನಾ ದೇಶವು ತನ್ನಲ್ಲಿರುವ ಸಂಪತ್ತಿನ ಕಾರಣದಿಂದ ನಮ್ಮ ಸುತ್ತಮುತ್ತಲು ಇರುವ ಸಣ್ಣಪುಟ್ಟ ರಾಷ್ಟ್ರಗಳಿಗೆ ಆರ್ಥಿಕ ನೆರವನ್ನ ನೀಡುತ್ತಾ ನಮ್ಮ ದೇಶದ ವಿರುದ್ಧ ಧ್ವನಿ ಎತ್ತುವಂತೆ ಪ್ರೇರೇಪಿಸುತ್ತಿದೆ. ಇಂತಹ ಚೈನಾ ದೇಶದ ನೀತಿಗಳ ವಿರುದ್ಧ ನಮ್ಮ ಹೋರಾಟವಿರಬೇಕಾಗಿದೆ.

ಕಳೆದ 75 ವರ್ಷದಲ್ಲಿ ಪಾಕಿಸ್ತಾನಕ್ಕೆ ಭಾರತ ದೇಶದ ಸರ್ಕಾರಗಳು ನೆಹರುರವರಿಂದ ಹಿಡಿದು ಲಾಲ್ ಬಹುದ್ದೂರ್ ಶಾಸ್ತ್ರಿರವರು ಮತ್ತು ಶ್ರೀಮತಿ ಇಂದಿರಾ ಗಾಂಧಿರವರು ಕೊಟ್ಟಂತಹ ಪೆಟ್ಟುಗಳಿಗೆ ಆ ದೇಶ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಆರ್ಥಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ರಾಜತಾಂತ್ರಿಕವಾಗಿ ಎಲ್ಲಾ ಹಂತದಲ್ಲೂ ಬದುಕಿಯು ಸತ್ತಂತಿರುವ ದೇಶದಂತಾಗಿದೆ.

ಆದರೆ ಪ್ರಧಾನಮಂತ್ರಿಗಳು ಚುನಾವಣೆಯ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧ ಅಬ್ಬರಿಸಿದರೆ ಮತಗಳು ಕ್ರೂಡೀಕರಣವಾಗುತ್ತದೆಂಬ ಲೆಕ್ಕಾಚಾರದಲ್ಲಿ ಮಾತುಗಳನಾಡುತ್ತಿದ್ದಾರೆ. ಮಾನ್ಯ ಪ್ರಧಾನಮಂತ್ರಿಗಳೇ ಪಾಕಿಸ್ತಾನದ ವಿರುದ್ಧ ಯಾವ ಭಾರತೀಯರು ಹೆದರುವುದಿಲ್ಲ ಮತ್ತು ಇಲ್ಲಿಯ ತನಕ ಕೇಂದ್ರದಲ್ಲಿ ಆಡಳಿತ ನಡೆಸಿದ ಯಾವ ಸರ್ಕಾರಗಳು ಪಾಕಿಸ್ತಾನ ಭಾರತಕ್ಕೆ ಸಮವೆಂದು ಭಾವಿಸಲು ಇಲ್ಲ. ಆ ದೇಶ ಭಾರತದ ಪಾಲಿಗೆ ಲೆಕ್ಕವೇ ಇಲ್ಲದಂತಹ ಒಂದು ಶಕ್ತಿ ಎಂಬ ಭಾವನೆಯಲ್ಲಿಯೇ ಅವರ ಎಲ್ಲ ಕೃತ್ಯಗಳನ್ನು ಕಾಲಕಾಲಕ್ಕೆ ಸರಿಯಾದ ರೀತಿಯಲ್ಲಿ ಬಗ್ಗು ಬಡಿದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ನಮ್ಮ ಪ್ರಧಾನಮಂತ್ರಿಗಳು ಪ್ರಸ್ತಾಪಿಸಿರುವ ವಿಚಾರಗಳಲ್ಲಿ ಅತಿ ಹೆಚ್ಚು ಬಾರಿ ಮುಸ್ಲಿಂ ಮತ್ತು ಪಾಕಿಸ್ತಾನದ ಪದಗಳನ್ನು ಬಳಸಿರುವುದನ್ನು ಬಿಟ್ಟರೆ ಬೇರೆ ಯಾವ ಅಭಿವೃದ್ಧಿ ವಿಚಾರಗಳನ್ನು ಜನರ ಮುಂದಿಟ್ಟಿಲ್ಲ. ಇವರ ಮಾತುಗಳೆಲ್ಲವೂ ಕೇವಲ ಭಾವನೆಗಳನ್ನು ಪ್ರಚೋದಿಸುವುದಕ್ಕೆ ಹೊರತು; ಬೇರೆ ಯಾವ ಉದ್ದೇಶವೂ ಆಗಿರಲಿಲ್ಲ.

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply