ಬೆಂಗಳೂರು: ಯೋಗ ಬಲ್ಲವನಿಗೆ ರೋಗ ಬರುವುದಿಲ್ಲ ಎಂಬ ಮಾತಿದೆ. ಅದರ ಹಿನ್ನೆಲೆಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ. ಇಂದು ಮಾವಳ್ಳಿ, ವಿ.ವಿ.ಪುರಂ ವಾರ್ಡ್ ನಲ್ಲಿ ಯೋಗ ಕೇಂದ್ರ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಶಾಸಕ ಉದಯ ಗರುಡಾಚಾರ್ ಹೇಳಿದರು.
8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹೊಂಬೇಗೌಡನಗರ ಆಟದ ಮೈದಾನದಲ್ಲಿ 2500 ಕ್ಕೂ ಹೆಚ್ಚು ಯೋಗಪಟುಗಳು ಏಕಕಾಲಕ್ಕೆ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡ್ ನಲ್ಲಿ ಯೋಗ ಕೇಂದ್ರ ಆರಂಭಿಸಲಾಗುವುದು. ಯೋಗಯುಕ್ತ, ರೋಗ ಮುಕ್ತ ಸಮಾಜಕ್ಕೆ ಎಲ್ಲರು ಶ್ರಮಿಸೋಣ ಎಂದರು.
ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್ ಮಾತನಾಡಿ, ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹೊಂಬೇಗೌಡನಗರ ವಾರ್ಡ್ ನಲ್ಲಿ ಹಬ್ಬದ ರೀತಿಯಲ್ಲಿ ಅಚರಿಸಲಾಗುತ್ತಿದೆ. ಇಂದು ಹೊಂಬೇಗೌಡನಗರ ವಾರ್ಡ್ ನಲ್ಲಿ ಪ್ರತಿ ಮನೆ, ಮನಗಳಲ್ಲಿ ಯೋಗದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಲು ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಹೊಂಬೇಗೌಡನಗರ ವಾರ್ಡ್ ನಲ್ಲಿ ಮಹಿಳೆಯರಿಗೆ ಉಚಿತವಾಗಿ ಯೋಗ ತರಬೇತಿ ಕೇಂದ್ರವನ್ನು ಆರಂಭಿಸಲಾಗುವುದು ಎಂದರು.
ಐ.ಎ.ಎಸ್.ಅಧಿಕಾರಿ ಕುಮಾರ್ ನಾಯಕ್, ಗರುಡಾ ಫೌಂಡೇಷನ್ ಸಂಸ್ಥಾಪಕಿ ಮೇದಿನಿ ಗರುಡಾಚಾರ್ ಮೊದಲಾದವರು ಭಾಗವಹಿಸಿದ್ದರು.




