ನರೇನಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ  ಸಮವಸ್ತ್ರ ವಿತರಣೆ

4 years ago

ದಾವಣಗೆರೆ: ಪುಟ್ಟ  ಶಾಲೆ ಆದರೂ ಮಕ್ಕಳಿಗೆ ಶಾಲೆ ಸಮವಸ್ತ್ರ ಕಲ್ಪಿಸುವ ಮೂಲಕ ಶಿಸ್ತು ಬೆಳೆಸುವ ಉದ್ದೇಶ ಹೊಂದಲಾಗಿದೆ. ಮಕ್ಕಳ ಮನಸ್ಸುನ್ನು ಆಕರ್ಷಿಸುವ ಮೂಲಕ ಶಿಕ್ಷಣದಲ್ಲಿ ಸುಧಾರಣೆ ಪ್ರಕ್ರಿಯೆ  ನಡೆದಿದೆ ಎಂದು ಸರ್ಕಾರಿ ಶಾಲೆಯ ಮುಖ್ಯ  ಶಿಕ್ಷಕರಾದ ಟಿ.ನಾಗರಾಜ್ ಹೇಳಿದರು.

ಜಗಳೂರು ತಾಲ್ಲೂಕು  ನರೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ಜನಮುಖಿ ಸಂಸ್ಥೆ ವತಿಯಿಂದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳನ್ನು ಗುರುತಿಸಿ ಸಮವಸ್ತ್ರ ವಿತರಣೆ ನಂತರ ಮಾತಾಡಿದ ಅವರು, ನರೇನಹಳ್ಳಿ ಗ್ರಾಮದವರಾದ ಅರುಣ್ ಕುಮಾರ್ ಅವರನ್ನು ಕೇಳಿಕೊಂಡಾಗ ಜನಮುಖಿ ಶಿಕ್ಷಣ ಸಂಸ್ಥೆಯ ಮೂಲಕ ಸಮವಸ್ತ್ರ ಕೊಡಿಸುವ ಪ್ರಯತ್ನ ಮಾಡಿದ್ದು ಅಭಿನಂದನಾರ್ಹ ಎಂದರು.

ಇದೇ ಸಂದರ್ಭದಲ್ಲಿ  ಮಾಜಿ ಗ್ರಾಮ ಪಂಚಾಯಿತಿ  ಅಧ್ಯಕ್ಷರಾದ ಎನ್.ಓ.ತಿಪ್ಪೇಸ್ವಾಮಿ ನಾಯ್ಕ, ಮಾಜಿ ಗ್ರಾಮ ಪಂಚಾಯಿತಿ  ಸದಸ್ಯ ಸುರೇಂದ್ರ ನಾಯ್ಕ, ವೆಂಕಟೇಶ್ ನಾಯ್ಕ, ಶಾಲೆಯ SDMC ಸದಸ್ಯರಾದ ಮಹಾಂತೇಶ್ ನಾಯ್ಕ್, ಲಕ್ಷ್ಮಣ ನಾಯ್ಕ್, ಸಹ ಶಿಕ್ಷಕಿ ಕಾವ್ಯ, ನರೇನಹಳ್ಳಿ ಅರುಣ್ ಕುಮಾರ್ ಮತ್ತು  ಜನಮುಖಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಜರಿದ್ದರು. ಗ್ರಾಮದ ಹಿರಿಯರಾದ ನಾಗೇಶ್ ನಾಯ್ಕ ಅವರನ್ನು ಶಾಲೆಯ ಮುಖ್ಯ  ಶಿಕ್ಷಕ ನಾಗರಾಜ್  ಸನ್ಮಾನಿಸಿದರು.

Leave a Reply